ಬೆಂಗಳೂರು: ರಾಜ್ಯದಲ್ಲಿಂದು ಕೊರೊನಾ ಪಾಸಿಟಿವ್ 388 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 3796 ಕ್ಕೆ ಏರಿಕೆಯಾದಂತಾಗಿದೆ. ಇದರಲ್ಲಿ ಸದ್ಯ ಗುಣಮುಖರಾದವರನ್ನು ಹೊರತು ಪಡಿಸಿ ಸಕ್ರೀಯ ಪ್ರಕರಣಗಳು ಒಟ್ಟು 2339 ಆಗಿದೆ. ಇಂದು ಗುಣಮುಖರಾಗಿ 75 ಜನ ಬಿಡುಗಡೆ ಹೊಂದಿದ್ದಾರೆ. ಈವರೆಗೆ ಒಟ್ಟು 1403 ಜನ ಬಿಡುಗಡೆ ಹೊಂದಿದಂತಾಗಿದೆ. ಕೊರೊನಾ ಸೋಂಕಿನಿಂದ ಒಟ್ಟು ರಾಜ್ಯದಲ್ಲಿ 52 ಜನ ಸಾವನ್ನಪ್ಪಿದ್ದಾರೆ. ಇಂದು ದೃಢಪಟ್ಟ ಸೋಂಕಿತರಲ್ಲಿ 367 ಕೇಸ್ ಗಳು ಅಂತರಾಜ್ಯ ಪ್ರಯಾಣದಿಂದ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ಹೆಲ್ಥ್ ಬುಲಿಟಿನ್ ನಲ್ಲಿ ತಿಳಿಸಿದ್ದಾರೆ.

ಇಂದು ಉಡುಪಿ ಜಿಲ್ಲೆಯೊಂದರಲ್ಲೆ 150 ಪ್ರಕರಣ, ಕಲಬುರಗಿ-100 ಪ್ರಕರಣಗಳು ಪತ್ತೆಯಾಗಿದ್ದು ಆಯಾ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣಗಳು

  • ಬೆಂಗಳೂರು ನಗರ – 12
  • ಯಾದಗಿರಿ – 05
  • ಕಲಬುರಗಿ – 100
  • ಮಂಡ್ಯ – 04
  • ರಾಯಚೂರು – 16
  • ಉಡುಪಿ – 150
  • ಬೀದರ್- 10
  • ಬೆಳಗಾವಿ – 51
  • ದಾವಣಗೆರೆ -07
  • ವಿಜಯಪುರ-04
  • ಕೋಲಾರ-01
  • ಧಾರವಾಡ- 02
  • ಹಾವೇರಿ-01
  • ಬೆಂಗಳೂರು ಗ್ರಾಮೀಣ-03
  • ತುಮಕೂರು-02
  • ಬಾಗಲಕೊಟೆ-09
  • ಚಿಕ್ಕಬಳ್ಳಾಪೂರ – 02
  • ಹಾಸನ – 09
Leave a Reply

Your email address will not be published. Required fields are marked *

You May Also Like

ಪಿಎಂ ಕೇರ್ಸ್ ಯಾರೊಬ್ಬರ ಮನೆಯ ಆಸ್ತಿಯಲ್ಲ: ಸಿದ್ದರಾಮಯ್ಯ

ಬೆಂಗಳೂರು: ದೇಶದ ಜನರ ದೇಣಿಗೆಯ ಪಿಎಂ ಕೇರ್ಸ್ ಫಂಡ್ (PMCaresFund) ಯಾರೊಬ್ಬರ ಮನೆಯ ಆಸ್ತಿ ಅಲ್ಲ. ಅದು ಈ ದೇಶದ ಪ್ರಜೆಗಳ ದುಡ್ಡು, ಅದು ಸದುಪಯೋಗವಾಗಬೇಕು ಎಂದು ಹೇಳುವ ಅಧಿಕಾರ ಪ್ರತಿಯೊಬ್ಬರಿಗೆ ಇದೆ. ಅದನ್ನೇ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಸೋನಿಯಾಗಾಂಧಿಯವರು ಹೇಳಿದ್ದಾರೆ ತಪ್ಪೇನಿದೆ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಪವರ ಸ್ಟಾರ್ ಅಭಿಮಾನಿ ಹೃದಯಾಘಾತದಿಂದ ಸಾವು

ಉತ್ತರಪ್ರಭನಂಜನಗೂಡು: ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟುಹಬ್ಬದ ಸಂಭ್ರಮಾಚರಣೆಯ ವೇಳೆ ಅಭಿಮಾನಿಯೊಬ್ಬ ಆಕಾಶ್(22) ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾನೆ…

ರಾಜ್ಯದಲ್ಲಿ ಕೋವಿಡ್ ಕರ್ಪ್ಯೂ! ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳೇನು?

ಈಗಾಗಲೇ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಲಾಕ್ ಡೌನ್ ಮಾದರಿಯಲ್ಲೆ ರಾಜ್ಯ ಸರ್ಕಾರ ಕೋವಿಡ್ ಕರ್ಪ್ಯೂ ಘೋಷಿಸಿದೆ. ಸಚಿವ ಸಂಪುಟದಲ್ಲಿ ಈ ನಿರ್ಧಾರ ತೆಗೆದುಕೊಂಡು ಇನ್ನು ಹಲವು ನಿರ್ಧಾರಗಳನ್ನು ಸಂಪುಟ ಸಭೆಯಲ್ಲಿ ಸರ್ಕಾರ ತೆಗೆದುಕೊಂಡಿದೆ.

ಗದಗನಲ್ಲಿ ಇಂದು 15 ಜನರಿಗೆ ಕೊರೋನಾ ಪಾಸಿಟಿವ್: 35 ಕ್ಕೆ ಸೋಂಕಿತರ ಸಂಖ್ಯೆ ಏರಿಕೆ

ಗದಗ: ಕೊರೋನಾಗೆ ಬೆಚ್ಚಿದ ಗದಗ ಜಿಲ್ಲೆಯ ಜನ. ಇಂದು 15 ಜನರಿಗೆ ಪಾಸಿಟಿವ್ ದೃಢಪಟ್ಟಿದೆ. ಈ…