ಮುಂಡರಗಿ: ಕೊರೊನಾದ ಈ ಸಂಕಷ್ಟದಲ್ಲಿ ಗದಗ ಜಿಲ್ಲೆಯ ಮುಂಡರಗಿ ಪುರಸಭೆ ಜನರಿಗೆ ಗಾಯದ ಮೇಲೆ ಬರೆ ಎಳೆದಿದೆ. ಇದರಿಂದ ಮುಂಡರಗಿ ಜನರಿಗೆ ನೀರಿನ ಕರ ದುಬಾರಿಯಾಗುತ್ತಿದೆ. ಈಗಾಗಲೇ ವರ್ಷಕ್ಕೆ 950 ರೂ ನೀರಿನ ಕರವನ್ನು ಪುರಸಭೆ ನಿಗದಿ ಮಾಡಿತ್ತು. ಆದರೆ ಇದೀಗ ಏಕಾಏಕಿ 1550 ರೂ, ಏಕಾಏಕಿ ಹೆಚ್ಚಿಗೆ ಮಾಡಿದ್ದು ಎಷ್ಟು ಸರಿ ಎನ್ನುವ ಪ್ರಶ್ನೆ ಉದ್ಭವವಾಗಿದೆ.
ಪುರಸಭೆಯ ಈ ಧೋರಣೆ ವಿರೋಧಿಸಿ ಇಂದು ಕನ್ನಡ ಕ್ರಾಂತಿ ಸೇನೆ ವತಿಯಿಂದ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಈಗಾಗಲೇ ಆರ್ಥಿಕವಾಗಿ ಜನಸಾಮಾನ್ಯರು ಸಂಕಷ್ಟದಲ್ಲಿರುವಾಗ ನೀರಿನ ಕರ ಹೆಚ್ಚಿಗೆ ಮಾಡಿದ್ದರಿಂದ ಜನರಿಗೆ ತೀವ್ರ ತೊಂದರೆಯಾಗಲಿದೆ. ಹೀಗಾಗಿ ಈ ಧೋರಣೆ ಕೈಬಿಡಬೇಕು ಎಂದು ಕನ್ನಡ ಕ್ರಾಂತಿ ಸೇನೆ ಅಧ್ಯಕ್ಷ ಮಂಜು ಮುಧೋಳ್ ಒತ್ತಾಯಿಸಿದರು.

Leave a Reply

Your email address will not be published. Required fields are marked *

You May Also Like

ದೆಹಲಿಗೆ ಆಮ್ಲಜನಕ ಕಳುಹಿಸಲು ಸಿದ್ಧತೆ ನೆಡಸಿದ ಕೇರಳ

ರಾಷ್ಟ್ರ ರಾಜಧಾನಿಯಲ್ಲಿ ವೈದ್ಯಕೀಯ ಆಮ್ಲಜನಕದ ದಾಸ್ತಾನು ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಕೇರಳವು ದೆಹಲಿಗೆ ಸಹಾಯ ಹಸ್ತ ಚಾಚಿದೆ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಮತ್ತು ಮಲಯಾಳಿ ಸಂಘಟನೆಗಳ ಮನವಿಗಳಿಗೆ ಸ್ಪಂದಿಸಿ ನೆರವು ನೀಡಲು ಕೇರಳ ಸರ್ಕಾರ ಸಿದ್ಧತೆ ನಡೆಸಿದೆ.

2 ಅಪರೂಪದ ಆಮೆ ಪತ್ತೆ: ಒಂದು ಹಳದಿ ಬಣ್ಣದ್ದು, ಇನ್ನೊಂದು ಮೃದು ಚಿಪ್ಪಿನದ್ದು!

ಕಪ್ಪು, ದಟ್ಟ ಕಂದು ಬಣ್ಣದ ಆಮೆಗಳನ್ನು ನೋಡಿದ್ದೇವೆ. ಆದರೆ ಒರಿಸ್ಸಾದಲ್ಲೊಂದು ಅಪರೂಪದ ಆಮೆ ಸಿಕ್ಕಿದೆ. ಅದರ ಬಣ್ಣ ಹಳದಿ. ಇಡೀ ದೇಹ, ಚಿಪ್ಪು ಎಲ್ಲವೂ ಸಂಪೂರ್ಣ ಹಳದಿ.

ಲಕ್ಷ್ಮೇಶ್ವರ: ಜಯ ಕರ್ನಾಟಕ ಜನಪರ ವೇದಿಕೆಯಿಂದ ಮನವಿ

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದನ್ನು ಖಂಡಿಸಿ ಜಯ ಕರ್ನಾಟಕ ಜನಪರ ವೇದಿಕೆ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಮುತ್ತಪ್ಪ ರೈ ಗನ್ ಮ್ಯಾನ್ ಗಳನ್ನು ಬಂಧಿಸಿದ್ದೇಕೆ?

ಬೆಂಗಳೂರು: ಮಾಜಿ ಡಾನ್, ಉದ್ಯಮಿ ಮುತ್ತಪ್ಪ ರೈ ಅಂತ್ಯ ಸಂಸ್ಕಾರವು ಅವರ ನಿವಾಸ ಬಿಡದಿಯ ತೋಟದಲ್ಲಿ…