ಬೆಂಗಳೂರು: ಅಂತರಾಜ್ಯದಿಂದ ಬರುವ ಪ್ರಯಾಣಿಕರಿಗೆ ಸರ್ಕಾರ ಕೆಲವು ಸೂಚನೆಗಳನ್ನು ನೀಡಿದೆ. ಸರ್ಕಾರ ನೀಡಿದ ಸೂಚನೆಗಳು ಈ ಕೆಳಗಿನಂತಿದೆ.

1) ಅತೀ ಹೆಚ್ಚು ಕೋವಿಡ್‌-19 ಪ್ರಕರಣಗಳನ್ನು ಹೊಂದಿರುವ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರಿಗೆ ಕಠಿಣ ನಿಬಂಧನೆಗಳನ್ನು ವಿಧಿಸಿದೆ.

2) ಬೇರೆ ರಾಜ್ಯದಿಂದ ಬರುವವರು ಕನಿಷ್ಟ 14 ದಿನ ಹೋಂ ಕ್ವಾರೆಂಟೈನ್‌ ಕಡ್ಡಾಯ.

3) ಉಳಿದಂತೆ, ಎಲ್ಲಾ ಪ್ರಯಾಣಿಕರು ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ತಮ್ಮ ಹೆಸರು, ವಿಳಾಸ ಮತ್ತು ಮೊಬೈಲ್‌ ಸಂಖ್ಯೆಯನ್ನು ನೋಂದಾಯಿಸಿಕೊಳ್ಳಬೇಕು.

4) ಸೇವಾಸಿಂಧು ಯಾವುದೇ ಅಪ್ರೂವಲ್‌ಗಾಗಿ ಕಾಯುವ ಅವಶ್ಯಕತೆ ಇಲ್ಲ.

5) ಒಂದು ಮೊಬೈಲ್‌ ನಂಬರ್‌ನಿಂದ ಹಲವು ಅರ್ಜಿಗಳನ್ನು ಸಲ್ಲಿಸುವಂತಿಲ್ಲ.

6) ವಿಮಾಣ ನಿಲ್ದಾಣ, ರೈಲ್ವೇ ನಿಲ್ದಾಣ, ಬಸ್ಸು ನಿಲ್ದಾಣ ಹಾಗೂ ರಾಜ್ಯಗಳ ಗಡಿಗಳಲ್ಲಿ ಕೋವಿಡ್‌-19 ಸ್ಕ್ರೀನಿಂಗ್‌ ನಡೆಯಲಿದ್ದು, ಎಲ್ಲಾ ಪ್ರಯಾಣಿಕರು 14 ದಿನಗಳ ಕಾಲ ಹೋಂ ಕ್ವಾರೆಂಟೈನ್‌ ಆಗುವಂತೆ ಅವರ ಕೈಗಳಿಗೆ ಸೀಲ್‌ ಹಾಕಲಾವುದು.

7) ಸ್ಕ್ರೀನಿಂಗ್‌ ಸಮಯದಲ್ಲಿ ಯಾರಿಗಾದರೂ ಕೋವಿಡ್‌-19 ರೋಗ ಲಕ್ಷಣಗಳಿದ್ದಲ್ಲಿ ಅವರನ್ನು ತಕ್ಷಣವೇ ಆಸ್ಪತ್ರೆಗಳಲ್ಲಿ ಏಳು ದಿನ ಐಸೋಲೇಟ್‌ ಮಾಡಲಾಗುವುದು.

8) ಅವರಿಗೆ ಕೋವಿಡ್‌-19 ಪರೀಕ್ಷೆಯನ್ನು ನಡೆಸಿ ಒಂದು ವೇಳೆ ಸೋಂಕು ಇರುವುದು ಧೃಢವಾದಲ್ಲಿ ಮುಂದಿನ ಚಿಕಿತ್ಸೆಗೆ ನಿಗದಿತ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗುವುದು.

9) ಒಂದು ವೇಳೆ ಸೋಂಕು ಇಲ್ಲವಾದಲ್ಲಿ ಏಳು ದಿನಗಳ ಕಾಲ ಹೋಂ ಕ್ವಾರೆಂಟೈನ್‌ ಮಾಡಲಾಗುವುದು.

10) ಇನ್ನು ಮಹಾರಾಷ್ಟ್ರದಿಂದ ಬರುವಂತಹ ಪ್ರತಿಯೊಬ್ಬ ಪ್ರಯಾಣಿಕರನ್ನು ಏಳು ದಿನಗಳ ಕಾಲ ಹೋಟೆಲ್‌ ಅಥವಾ ಸರ್ಕಾರಿ ಕ್ವಾರೆಂಟೈನ್‌ ಕೇಂದ್ರಗಳಲ್ಲಿ ಕ್ವಾರೆಂಟೈನ್‌ ಮಾಡಲಾಗುವುದು.

11) ಇನ್ನು ಐಸಿಎಂಆರ್‌ ಲ್ಯಾಬ್‌ಗಳಿಂದ ಪಡೆದ 48 ಗಂಟೆ ಒಳಗಿನ ಕೋವಿಡ್‌-19 ನೆಗೆಟಿವ್‌ ರಿಪೋರ್ಟ್‌ ಇದ್ದಲ್ಲಿ ಅವರು ನೇರವಾಗಿ ಹೋಂ ಕ್ವಾರೆಂಟೈನ್‌ ಆಗಬಹುದು.

12) ಹೋಂ ಕ್ವಾರೆಂಟೈನ್‌ ಆಗಲು ಸಾಧ್ಯವಿಲ್ಲದವರು ಇನ್ಸ್ಟಿಟ್ಯೂಷನಲ್‌ ಕ್ವಾರೆಂಟೈನ್‌ ಆಗಬೇಕು.

13) ಹೋಂ ಕ್ವಾರೆಂಟೈನ್‌ನಲ್ಲಿ ಇರುವ ಯಾರಿಗಾದರೂ ಕೋವಿಡ್‌-19ನ ರೋಗ ಲಕ್ಷಣ ಕಂಡು ಬಂದಲ್ಲಿ ಅವರು ಆಪ್ತ ಮಿತ್ರ ಸಹಾಯವಾಣಿ (14410)ಗೆ ಕರೆ ಮಾಡಿ ಮಾಹಿತಿ ನೀಡಬೇಕು.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿಂದು 174 ಕೊರೊನಾ ಪಾಸಿಟಿವ್!

ಜಿಲ್ಲೆಯಲ್ಲಿಂದು 174 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3778 ಕ್ಕೆ ಏರಿಕೆಯಾಗಿದೆ.

ಬದುಕು ಮುಗಿಸಿದ ಬಂಗಾರದ ಅವ್ವ :ಡಾ. ಗೀತಾ ನಾಗಭೂಷಣ

ಸನ್ 2010ರಲ್ಲಿ ಗದಗ ನಲ್ಲಿ ಜರುಗಿದ ಅಖಿಲ ಭಾರತ 76ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ…

ಹೊಳೆಆಲೂರ: ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ಹೊಳೆಆಲೂರ ವಿದ್ಯುತ್ ವಿತರಣಾ ಉಪ-ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳುವುದರಿಂದ ಅಕ್ಟೋಬರ್ 10 ರಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 05 ಘಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ.

ಲಕ್ಷ್ಮೇಶ್ವರ: ಕೊರೊನಾ ವಾರಿಯರ್ಸ್ ಗೆ ಶಿಕ್ಷಕನ ಸೇವೆ

ವೀಕೆಂಡ್ ಕರ್ಫ್ಯೂಗೆ ಪಟ್ಟಣದಲ್ಲಿ ಜನತೆ ಸಾಥ್ ನೀಡಿದ್ದು ಜನರು ಇಲ್ಲದೇ ಬಸ್ಟ್ಯಾಂಡ್, ಬಾನು ಮಾರ್ಕೆಟ್ ಸೇರಿದಂತೆ ಅನೇಕ ಕಡೆಗಳಲ್ಲಿ ಬಿಕೋ ಎನ್ನುತ್ತಿದೆ.