ಮುಂಬೈ: ಬಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕ ವಾಜಿದ್ ಖಾನ್ ನಿಧನ ಹೊಂದಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ವಾಜಿದ್ ಖಾನ್ ಮುಂಬೈನ ಚೆಂಬೂರ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ರೋಗ ನಿರೋಧಕ ಶಕ್ತಿ ಕ್ಷೀಣಿಸಿದ ಕಾರಣ ಅವರಿಗೆ ಚಿಕಿತ್ಸೆ ಫಲಕಾರಿ ಆಗಲಿಲ್ಲ ಎಂದು ವೈದ್ಯಕೀಯ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.
ಸಾಜಿದ್-ವಾಜಿದ್ ಎಂದೇ ಖ್ಯಾತಿ ಪಡೆದ ಇಬ್ಬರು ಸಹೋದರರು ಸಂಗೀತ ನಿರ್ದೇಶಕರಾಗಿದ್ದರು. ಸಾಜಿದ್-ವಾಜಿದ್ ಜೋಡಿ ಬಾಲಿವುಡ್ ನ ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆ ಜನ ಮೆಚ್ಚುಗೆ ಪಡೆದಿದೆ. ವಾಜಿದ್ ನಿಧನದ ಬಗ್ಗೆ ಬಾಲಿವುಡ್ ನ ಬಹುತೇಕ ದಿಗ್ಗಜರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.