ಬೆಂಗಳೂರು: ಕೇಂದ್ರ ಸರ್ಕಾರ ಜೂ. 30ರ ವರೆಗೂ ಲಾಕ್ ಡೌನ್ ವಿಸ್ತರಣೆ ಮಾಡಿದೆ. ಅಲ್ಲದೇ, ಹಲವು ವಿನಾಯಿತಿಗಳನ್ನು ನೀಡಿ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಇದರಂತೆ ಜೂ. 8ರಿಂದ ದೇವಾಲಯಗಳು ಓಪನ್ ಆಗಲಿವೆ. ಹಲವು ಮಾರ್ಗಸೂಚಿಗಳನ್ವಯ ದೇವಸ್ಥಾನಗಳು, ಚರ್ಚ್, ಮಸೀದಿಗಳು ಸೇರಿದಂತೆ ಧಾರ್ಮಿಕ ಸ್ಥಳಗಳನ್ನ ತೆರೆಯಲು ಅವಕಾಶ ನೀಡಲಾಗಿದೆ. ರಾಜ್ಯ ಸರ್ಕಾರ ಆದೇಶ ನೀಡಿದ ಹಿನ್ನೆಲೆಯಲ್ಲಿ ಜೂನ್ 1ಕ್ಕೆ ದೇವಾಲಯ ತೆರೆಯಲು ದೇವಾಲಯಗಳ ಸಿಬ್ಬಂದಿ ಸಿದ್ಧವಾಗಿದ್ದರು. ದೇವಸ್ಥಾನಗಳನ್ನು ಸ್ವಚ್ಛ ಮಾಡಿ ಅರ್ಚಕರು ಕೂಡ ಸಿದ್ಧರಾಗಿದ್ದರು. ಆದರೆ, 8 ರಿಂದ ದೇವಾಲಯಗಳನ್ನು ಓಪನ್ ಮಾಡುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತು ಈ ವಾರವೇ ಸರ್ಕಾರ ಮಾರ್ಗಸೂಚಿ ಪ್ರಕಟಿಸಲಿದೆ. ಮಸೀದಿ, ಮಂದಿರ, ಚರ್ಚ್ಗೆಗ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿರಲಿದೆ.

Leave a Reply

Your email address will not be published. Required fields are marked *

You May Also Like

ಜಿಲ್ಲೆಯಲ್ಲಿ ಕೊವಿಡ್-19 ನಿಯಂತ್ರಣಕ್ಕೆ ಸೂಕ್ತ ಕ್ರಮವಹಿಸಿ: ಸಚಿವ ಸಿ.ಸಿ.ಪಾಟೀಲ

ಗದಗ: ಕಳೆದ ಕೆಲವು ದಿನಗಳಿಂದ ಕೊವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ ಕೊವಿಡ್-19 ನಿಯಂತ್ರಣಕ್ಕೆ ಅಗತ್ಯವಿರುವ…

ಸಿನಿಮಾ ಮಂದಿರದಲ್ಲಿ ಪ್ರೇಕ್ಷಕರ ಕಡಿತವಿಲ್ಲ

ಕೊರೊನಾ ಸಂಖ್ಯೆ ಮತ್ತೆ ಹೆಚ್ಚಾಗುತ್ತಿರುವುದರಿಂದ ರಾಜ್ಯದಲ್ಲಿ ಸಿನಿಮಾ ಮಂದಿರಗಳು ಶೇ.50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸಿಎಂ ಯಡಿಯೂರಪ್ಪ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಟ್ವೀಟ ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.

ಸೀತಾಲಹರಿಯ ಸುಪರ್ ಸ್ಪ್ರೆಡರ್ ಯಾರು?: ಪ್ರಾಥಮಿಕ ಸಂಪರ್ಕದಲ್ಲೇ 11 ಜನರಿಗೆ ಸೋಂಕು!

ಸುಪರ್ ಸ್ಪ್ರೆಡರ್ ಕುರಿತು ಉತ್ತರಪ್ರಭ ವಾರದ ಹಿಂದೆ ವಿವರವಾಗಿ ಬರೆದಿತ್ತು. ಟ್ರೇಸಿಂಗ್ ಪ್ರಕ್ರಿಯೆಯಲ್ಲಿ (ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದ ಹುಡುಕಾಟ) ಲೋಪದೋಷ ಆಗುತ್ತಿರುವುದಕ್ಕೆ ಈ ತರಹದ ಸುಪರ್ ಸ್ಪ್ರೆಡರ್ ತಮಗೇ ಅರಿವಿಲ್ಲದಂತೆ ಸೋಂಕನ್ನು ಹರಡಿಸುತ್ತ ಹೋಗುತ್ತಾರೆ.

22ನೆ ಸ್ಥಾನದಲ್ಲಿ ಗದಗ ಜಿಲ್ಲೆ : ಕಲಾ ವಿಭಾಗದಲ್ಲಿ ಕಳಪೆ, ಪಿಯುಸಿ-2 ಫಲಿತಾಂಶ ವಿವರ

ಕಳೆದ ಬಾರಿ ಶೇ. 57ರಷ್ಟು ಫಲಿತಾಂಶ ಪಡೆದಿದ್ದ ಜಿಲ್ಲೆ ಈ ಬಾರಿ ಶೇ.63 ಸಾಧನೆ ಮಾಡಿದೆ. ಒಟ್ಟಾರೆ ಜಿಲ್ಲಾವಾರು ಫಲಿತಾಂಶದಲ್ಲಿ ಕಳಪೆ ಸಾಧನೆ ಮಾಡಿದ್ದು, 22 ನೆ ಸ್ಥಾನದಲ್ಲಿದೆ.