ಬೆಂಗಳೂರು: ಜೂನ್ 30ರವರೆಗೆ ಲಾಕ್ ಡೌನ್ ಮುಂದುವರೆಸಿ ಸರ್ಕಾರ ಆದೇಶಿಸಿದೆ. ಮುಂದುವರೆದ ಲಾಕ್ ಡೌನ್ ನಲ್ಲಿ ಏನೆಲ್ಲ ಆರಂಭವಾಗಲಿವೆ ಎನ್ನುವ ಮಾಹಿತಿ ಈ ಕೆಳಗೆ ನೀಡಲಾಗಿದೆ.

ಸಡಿಲಿಕೆಯಾದ ನಿಯಮಗಳು

  • ಜೂನ್ 30ರ ವರೆಗೆ ಲಾಕ್ ಡೌನ್ ವಿಸ್ತರಿಸಿ ಆದೇಶ
  • ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಕರ್ಪ್ಯೂ
  • ಕಂಟೇನ್ಮೆಂಟ್ ಜೋನ್ ಗಳಿಗೆ ಲಾಕ್ ಡೌನ್ ಕಡ್ಡಾಯ
  • ಕಂಟೈನ್ಮೆಂಟ್ ಹೊರತು ಪಡಿಸಿ ಉಳಿದೆಡೆ ಅವಕಾಶ
  • ಹೋಟೆಲ್ ಹಾಗೂ ರೆಸ್ಟೋರೆಂಟ್ ಮತ್ತು ಆಸ್ಪತ್ರೆ ಸೇವೆಗಳು ಲಭ್ಯ
  • ದೇವಾಲಯ ಸೇರಿದಂತೆ ಧಾರ್ಮಿಕ ಸ್ಥಳಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.
  • ಕಂಟೈನ್ಮೆಂಟ್ ಜೋನ್ ನಿಗದಿ ಪಡಿಸುವುದು ಆಯಾ ಜಿಲ್ಲಾಡಳಿತದ ಜವಾಬ್ದಾರಿ
  • ಶಾಪಿಂಗ್ ಮತ್ತು ಮಾಲ್ ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.
  • ಅಂತರಾಜ್ಯ ಪ್ರವಾಸಕ್ಕೆ ಅನುಮತಿಯ ಅವಶ್ಯಕತೆ ಇಲ್ಲ
  • ವಿವಾಹ ಸಮಾರಂಭಕ್ಕೆ 50 ಜನ, ಅಂತ್ಯಕ್ರಿಯೆಗೆ 25 ಜನರಿಗೆ ಮಾತ್ರ ಅವಕಾಶ
  • ಸಾರ್ವಜನಿಕ ಸಭೆ ಹಾಗೂ ಸಮಾರಂಭಗಳಿಗೆ ನಿರ್ಬಂಧ ಮುಂದುವರೆಯುವುದು
  • ಶೈಕ್ಷಣಿಕ ಸಂಸ್ಥೆಗಳನ್ನು ಸದ್ಯಕ್ಕೆ ಆರಂಭಿಸುವುದಿಲ್ಲ
  • ಶಾಲೆ ಹಾಗೂ ಕಾಲೇಜುಗಳನ್ನು ಆರಂಭಿಸುವ ಬಗ್ಗೆ ರಾಜ್ಯ ಸರ್ಕಾರಗಳ ಜೊತೆಗೆ ಚರ್ಚಿಸಿ ನಿರ್ಧರಿಸಲಾಗುವುದು
Leave a Reply

Your email address will not be published. Required fields are marked *

You May Also Like

ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್ ಪುತ್ರನ ಮದುವೆ : ಕೋವಿಡ್ ನಿಯಮಕ್ಕೆ ಡೋಂಟ್ ಕೇರ್..!!

ಹರಪನಹಳ್ಳಿ: ಕೊರೊನಾ ಹಿನ್ನೆಲೆ ಲಾಕ್ ಡೌನ್ ಸಡಿಲಿಸಿದರೂ ಸಾಕಷ್ಟು ಕಟ್ಟುನಿಟ್ಟಿನ ನಿಯಮ ಸರ್ಕಾರ ಸೂಚಿಸಿದೆ. ಆದರೆ…

ಇಂದಿನಿಂದ ವೈದ್ಯಕೀಯ ಕಾಲೇಜ್ ಆರಂಭ

ರಾಜ್ಯದಲ್ಲಿ ಡಿ. 1 ರಿಂದ ಎಲ್ಲ ವೈದ್ಯಕೀಯ ಕಾಲೇಜುಗಳು ಮತ್ತು ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಗಳ ತರಗತಿ ಆರಂಭಕ್ಕೆ ಸರ್ಕಾರ ಅವಕಾಶ ನೀಡಿದ ಹಿನ್ನಲೆಯಲ್ಲಿ ಪಟ್ಟಣದ ಭಗವಾನ್ ಮಹಾವೀರ ಜೈನ್ ಆರ್ಯುವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಸ್ಯಾನಿಟೈಜರ ಮಾಡಲಾಯಿತು.

ಮಸೀದಿ, ದರ್ಗಾಗಳು ಅನುಸರಿಸಬೇಕಾದ ಕ್ರಮಗಳೇನು?

ಬೆಂಗಳೂರು: ಲಾಕ್ ಡೌನ್ ಸಡಿಲಗೊಳಿಸಿದ ಪರಿಣಾಮ ಮಸೀದಿ ಹಾಗೂ ದರ್ಗಾಗಳಲ್ಲಿ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ…