ಮಸ್ಕಿ: ಕ್ವಾರೆಂಟೈನ್ ಗೆ ಒಳಗಾಗಿ 20 ದಿನಗಳು ಕಳೆದು ಹೋದರು ಕೊರೊನಾ ವರದಿ ಬಂದಿಲ್ಲ ಮೊದಲು ಕೊರೊನಾ ವರದಿ ಕೊಡಿ ಎಂದು ಊಟ ಮಾಡದೇ ಕ್ವಾರೆಂಟೈನ್ ನೊಳಗೆ ಧರಣಿ ನಡಿಸಿದ ಘಟನೆ ಮಸ್ಕಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಮಹಾರಾಷ್ಟ್ರ ರಾಜ್ಯಕ್ಕೆ ತುತ್ತಿನ ಚೀಲ ತುಂಬಿಕೊಳ್ಳಲು ಗುಳೆ ಹೋಗಿದ್ದರು. ಲಾಕಡೌನ ಆಗಿರುವ ಹಿನ್ನಲೆಯಲ್ಲಿ ವಾಪಾಸ್ಸು ಸ್ವಗ್ರಾಮಕ್ಕೆ ತೆರಳಿದ್ದರು. ಕೋವಿಡ್-19 ಹರಡದಂತೆ ತಡಯುವುದಕ್ಕಾಗಿ 180ಕ್ಕೂ ಅಧಿಕ ಜನರಿಗೆ ಮಸ್ಕಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರೆಂಟೈನ್ ಮಾಡಲಾಗಿದೆ. ಇದೀಗ ಕ್ವಾರೆಂಟೈನ್ ಗೆ ಒಳಗಾಗಿ 20ದಿನಗಳು ಕಳೆದು ಹೋಗಿವೆ. ಇನ್ನೂ ಕೊರೊನಾ ವರದಿ ಬಂದಿಲ್ಲ. ಈ ಕ್ವಾರೆಂಟೈನ್ ನಲ್ಲಿರುವ ಇಬ್ಬರಿಗೆ ಪಾಸಿಟಿವ್ ವರದಿ ಕೊಟ್ಟಿದ್ದಿರಾ ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿಗೆ ಕಳುಹಿಸಿದ್ದಿರಿ ನೆಗೆಟಿವ್ ಬಂದಿರುವ ಜನರಿಗೆ ಮನೆಗೆ ಕಳುಹಿಸಿ ಎಷ್ಟು ದಿನ ಒಳಗೆ ಇರಬೇಕೆಂದು ಕ್ವಾರೆಂಟೈನ್ ನಲ್ಲಿದ್ದ ಜನರು ಗುರುವಾರ ರಾತ್ರಿ ಊಟ ಮಾಡದೇ ಪಟ್ಟು ಹಿಡಿದರು ಎನ್ನಲಾಗಿದೆ. ಮೊದಲು ನಮಗೆ ಊಟ ಸರಿ ಕೊಡಿ ಇಲ್ಲವಾದರೆ ಕೊರೊನಾ ವರದಿ ತಂದು ನಗೆಟಿವ್ ಬಂದಿರುವರಿಗೆ ಮನೆಗೆ ಕಳುಹಿಸಿ ಎಂದು ಜನ ಅಧಿಕಾರಿಗಳ ವಿರುದ್ಧ ಅಕ್ರೋಶ ಹೊರ ಹಾಕಿದರಂತೆ. ಆದರೆ ತಹಶೀಲ್ದಾರ್ ಬಲರಾಮ ಕಟ್ಟಿಮನಿ ಅವರು ಬೇಜವಾಬ್ದಾರಿ ಯಿಂದ ಮಾತನಾಡುತ್ತಾರೆ ಎಂದು ಅಧಿಕಾರಿಗಳ ವಿರುದ್ಧ ದೂರಿದರು. ಕ್ವಾರೆಂಟೈನ್ ನಲ್ಲಿ ಮೂಲ ಸೌಕರ್ಯ ಮರಿಚೀಕೆಯಾಗಿವೆ. ಸರಿಯಾದ ಊಟದ ವ್ಯವಸ್ಥೆಯೂ ಇಲ್ಲ ಎಂದು ದೂರಿದರು.
ಕ್ವಾರೆಂಟೈನ್ ನಲ್ಲಿರುವ ಬಹುತೇಕ ಜನ ರೈತಾಪಿ ವರ್ಗದವರಿದ್ದು, ಮಳೆಯಾಗಿದೆ. ಹೊಲ ಹಸನು ಮಾಡಿ ಭಿತ್ತನೆ ಮಾಡಬೇಕು. ಹೀಗಾಗಿ ನಮ್ಮ ವರದಿ ನೆಗೆಟಿವ್ ಬಂದಲ್ಲಿ ನಮ್ಮನ್ನು ಬಿಟ್ಟು ಬಿಡಿ ಎಂದು
ಕ್ವಾರೆಂಟೈನ್ ನಲ್ಲಿದ್ದ ವ್ಯಕ್ತಿಯೊಬ್ಬರು ಅಸಮಾಧಾನ ಹೊರ ಹಾಕಿದರು ಎಂದು ತಿಳಿದು ಬಂದಿದೆ.
ನಮಗೆ ಮಹಾರಾಷ್ಟ್ರ ದಲ್ಲಿ 20 ದಿನ ಕ್ವಾರೆಂಟೈನ್ ಗೆ ಹಾಕಿದ್ದಾರೆ ಅಲ್ಲಿ ಕೊರೊನಾ ನೆಗಟಿವ್ ವರದಿ ಬಂದಿದೆ. ಮಸ್ಕಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರೆಂಟೈನ್ ಗೆ ಹಾಕಿ 20 ದಿನಗಳು ಕಳೆದಿವೆ ಇನ್ನೂವರೆಗೆ ಕೊರೊನಾ ವರದಿ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿ
ಊಟ ಮಾಡದೇ ಉಪವಾಸ ಮಲಗಿದ್ದಾರೆ ಎಂದು ತಿಳಿದು ಬಂದಿದೆ.
ಜಿಲ್ಲಾಧಿಕಾರಿಗಳು ಪರಿಶೀಲಿಸಿ ಕ್ವಾರೆಂಟೈನ್ ನಲ್ಲಿರುವವರ ಕೊರೊನಾ ವರದಿ ತರಿಸಿ ನಗೆಟಿವ್ ವರದಿ ಬಂದಿರುವ ಕೂಲಿ ಕಾರ್ಮಿಕರಿಗೆ ಕ್ವಾರೆಂಟೈನ್ ನಿಂದ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

You May Also Like

ನಾಗಾವಿ ಬಿಕೆ ಗ್ರಾಮದಲ್ಲಿ ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ನೂತನ ರಥೋತ್ಸವ

ಉತ್ತರಪ್ರಭ ವರದಿ: ಇಸ್ಲಾಯಿಲ್ ಎಮ್ ಶೇಖ.    ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ನಾಗಾವಿ ಬಿಕೆ…

ಗದಗ ನಗರದ ಹುಡ್ಕೋ ಕಾಲನಿ ಕಂಟೇನ್ಮೆಂಟ್ ಝೋನ್ ಘೋಷಣೆ

ಇಲ್ಲಿನ ವಾರ್ಡ 35ರ ಹುಡ್ಕೋ ಕಾಲನಿ 2ನೇ ಕ್ರಾಸ್ ಇದರ ಸುತ್ತಲಿನ 100 ಮೀ. ಪ್ರದೇಶವನ್ನು ತಕ್ಷಣದಿಂದ ಕೊವಿಡ್-19 ಸೋಂಕು ನಿಯಂತ್ರಿತ (ಕಂಟೇನ್ಮೆಂಟ) ಪ್ರದೇಶವೆಂದು

ವಿಜಯನಗರ ಸಾಮ್ರಾಜ್ಯದ ಗತ ವೈಭವ ಬಿಂಬಿಸುವ ಹಂಪಿ ಉತ್ಸವ ಈ ಬಾರಿ ಹೇಗಿರಲಿದೆ?

ಬಳ್ಳಾರಿ : ವಿಶ್ವವಿಖ್ಯಾತ ಹಂಪಿ ಉತ್ಸವವನ್ನು ಈ ವರ್ಷ ಒಂದೇ ದಿನ ಆಚರಿಸಲು ನಿರ್ಧರಿಸಲಾಗಿದೆ.

ಹೀಗೆ ಮುಂದುವರಿದರೆ ಸ್ಯಾಂಡಲ್‍ ವುಡ್ ಗೆ ಉಳಿಗಾಲವಿಲ್ಲ

ಸೋಮವಾರ ಮೈಸೂರಿನ ಚಿತ್ರೀಕರಣದ ಸೆಟ್ ನಲ್ಲಿ ದರ್ಶನ್ ಅಭಿಮಾನಿಗಳು ತಮ್ಮ ಮೇಲೆ ನಡೆಸಿದ ಅಂಧಾದುಂದಿ ವರ್ತನೆಗೆ ಹಿರಿಯ ನಟ ಜಗ್ಗೇಶ್‍ ಬೇಸರ ವ್ಯಕ್ತಪಡಿಸಿದ್ದಾರೆ.