ಬ್ಯಾಂಕಿನಲ್ಲಿಟ್ಟ ಠೇವಣಿಯ ಬಡ್ಡಿದರ ಇಳಿಕೆ..!

ಮುಂಬಯಿ: ತಾವು ಇಟ್ಟ ಹಣಕ್ಕೆ ಬಡ್ಡಿಯಾದರೂ ಸಿಗುತ್ತೆ ಎನ್ನುವ ಕಾರಣಕ್ಕೆ ಬಹುತೇಕರು ಬ್ಯಾಂಕಿನಲ್ಲಿ ಹಣ ಠೇವಣಿ ಇಡುವುದು ಸಹಜ. ಆದರೆ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಡೆಪಾಸಿಟ್ ಮೇಲಿನ ಬಡ್ಡಿ ಹಣವನ್ನೇ ಇಳಿಕೆ ಮಾಡಿದೆ. ಈ ಮೂಲಕ ಠೇವಣಿದಾರರಿಗೆ ಎಸ್.ಬಿ.ಐ ಆಘಾತ ನೀಡಿದೆ. ಇನ್ನು ಎಸ್.ಬಿ.ಐನ ಈ ನಿರ್ಧಾರವನ್ನೇ ಉಳಿದ ಬ್ಯಾಂಕ್ ಗಳು ಕೂಡ ಪಾಲಿಸುವ ಸಾದ್ಯತೆ ಇದೆ ಎನ್ನಲಾಗುತ್ತಿದೆ.

ರಿಸರ್ವ್ ಬ್ಯಾಂಕ್ ರೆಪೊ ದರಗಳನ್ನು ಕಡಿತ ಮಾಡಿದ ಬೆನ್ನಲ್ಲಿಯೇ ಎಸ್.ಬಿ.ಐ ಕೂಡ ಈ ನಿರ್ಧಾರ ಕೈಗೊಂಡಿದೆ. ಎಲ್ಲ ಬಗೆಯ ಠೇವಣಿಗಳ ಮೇಲಿನ ಬಡ್ಡಿಯನ್ನು ಶೇ.4ರಷ್ಟು ಇಳಿಕೆ ಮಾಡಿದೆ. ಹೊಸ ಬಡ್ಡಿ ದರ ಬುಧವಾರದಿಂದಲೇ ಜಾರಿಗೆ ಬಂದಿದೆ. ಹೊಸ ಠೇವಣಿ ಹಾಗೂ ನವೀಕರಣಗೊಳ್ಳುವ ಠೇವಣಿಗಳಿಗೆ ಹೊಸ ದರವೇ ಅನ್ವಯವಾಗಲಿದೆಯಂತೆ. ಶೇ. 7.75 ಬಡ್ಡಿ ನೀಡುತ್ತಿದ್ದ ಆರ್.ಬಿ.ಐನ ಸಣ್ಣ ಉಳಿತಾಯ ಯೋಜನೆಯನ್ನು ಸರಕಾರ ಸ್ಥಗಿತಗೊಳಿಸಿದ ಬೆನ್ನಲ್ಲಿಯೇ ಈಗ ಎಸ್.ಬಿ.ಐ ಈ ಕ್ರಮಕ್ಕೆ ಮುಂದಾಗಿದೆ. ಏಳು ದಿನಗಳ ಕನಿಷ್ಟ ಅವಧಿಯ ಠೇವಣಿ ಮೇಲೆ ಈವರೆಗೆ ಶೇ. 3.3 ಬಡ್ಡಿ ಸಿಗುತ್ತಿತ್ತು. ಆದರೆ ಇದೀಗ ಶೇ. 2.9ರ ಬಡ್ಡಿ ಹಣ ಸಿಗಲಿದೆ.

ಮೇ.12ರಂದು ಮೊದಲ ಕಂತಿನಲ್ಲಿ ಠೇವಣಿ ಮೇಲಿನ ಬಡ್ಡಿ ದರ ಇಳಿಕೆ ಮಾಡಲಾಗಿತ್ತು. ಈ ಮೂಲಕ ತಿಂಗಳಲ್ಲಿ ಎರಡನೇ ಬಾರಿ ಎಸ್.ಬಿ.ಐ ಠೇವಣಿ ಮೇಲಿನ ಬಡ್ಡಿ ದರ ಇಳಿಕೆ ಮಾಡಿದಂತಾಗಿದೆ.

Exit mobile version