ರೋಣ: ಕೃಷಿ ಉತ್ಪನ್ನ ಮಾರುಕಟ್ಟೆ(ಕೇಂದ್ರ ಕಚೇರಿ ಹೊಳೆಆಲೂರ) ಸಮಿತಿಯ ಕೊನೆಯ ಅವಧಿಗೆ ನೂತನ ಅಧ್ಯಕ್ಷರಾಗಿ ರೋಣ ರೈತ ಕ್ಷೇತ್ರದ ಸದಸ್ಯ ಅಂದಾನಪ್ಪ ಉರ್ಫ ರಾಜಣ್ಣ ಹೂಲಿ,ಉಪಾಧ್ಯಕ್ಷರಾಗಿ ಹೊಳೆಆಲೂರ ಕ್ಷೇತ್ರದ ಸದಸ್ಯ ಶಿವಾನಂದ ಅರಹುಣಸಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬುಧವಾರ ರೋಣ ತಾಲೂಕಿನ ಹೊಳೆಆಲೂರಿನ ಎಪಿಎಮ್‌ಸಿ ಕೇಂದ್ರ ಕಛೇರಿಯಲ್ಲಿ ನಡೆದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಲಿತ ಅಭ್ಯರ್ಥಿಗಳಾದ ಅಂದಾನಪ್ಪ ಹೂಲಿ ಹಾಗೂ ಶಿವಾನಂದ ಅರಹುಣಸಿ ಅವರು ಕ್ರಮವಾಗಿ ನಾಮ ಪತ್ರ ಸಲ್ಲಿಸಿದ್ದರು.ಎರಡು ಸ್ಥಾನಗಳಿಗೆ ಒಂದೊಂದೆ ನಾಮ ಪತ್ರಗಳ ಸಲ್ಲಿಕೆಯಾಗಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ರೋಣ ತಹಶಿಲ್ದಾರ ಜಿ.ಬಿ.ಜಕ್ಕನಗೌಡ್ರ ಈ ಇಬ್ಬರು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು.
೧೪ ಚುನಾಯಿತ ಸದಸ್ಯರ ಬಲ ಹೊಂದಿರುವ ಈ ಎಪಿಎಂಸಿ ಯಲ್ಲಿ ೩ ನಾಮನಿರ್ದೇಶಿತ ಸದಸ್ಯರನ್ನೊಳಗೊಂಡು ಒಟ್ಟು ಬಿಜೆಪಿ ೧೦ ಸದಸ್ಯರನ್ನು ಹೊಂದುವ ಮೂಲಕ ಸರಳ ಬಹುತದೊಂದಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳನ್ನು ಬಿಜೆಪಿ ತನ್ನ ತೆಕ್ಕೆಗೆ ಪಡೆಯಿತು.
ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಶಾಸಕ ಕಳಕಪ್ಪ ಬಂಡಿ,ಅಭಿನಂಧಿಸಿದರು.
ಈ ಸಂದರ್ಭದಲ್ಲಿ ಮಾಜಿ ಎಪಿಎಂಸಿ ಅಧ್ಯಕ್ಷ ವಿರಣ್ಣ ಶೆಟ್ಟರ, ಅಂಬರೀಶ ಅರಳಿ,ಬಿಜೆಪಿ ಮುಖಂಡರಾದ ಅಂಬರೀಶ ಬಳಿಗೇರ, ಜಿ.ಪಂ ಸದಸ್ಯರಾದ ಶಿವುಕುಮಾರ ನೀಲಗುಂದ, ಪಡಿಯಪ್ಪ ಪೂಜಾರ,ತಾಪಂ ಅಧ್ಯಕ್ಷೆ ಪ್ರೇಮವ್ವ ನಾಯಕ, ವೆಂಕನಗೌಡ ಗೋವಿಂದಗೌಡ್ರ, ಮಗನಗೌಡ ಮಾಲಿಪಾಟೀಲ,ಮುದಿಯಪ್ಪ ಕರಡಿ, ಶಂಕರಪ್ಪ ಸೂಳಿಕೇರಿ, ಸಂಕನಗೌಡ ಅಮಾತಿಗೌಡ್ರ, ಬಾಜಪಾ ಹೋಬಳಿ ಘಟಕದ ಅಧ್ಯಕ್ಷ ಮುತ್ತಣ್ಣ ಜಂಗಣ್ಣವರ, ಗಿರೀಶ ಚನ್ನಪ್ಪಗೌಡ್ರ, ಬಸವರಾಜ ಕಾತರಕಿ, ಶ್ರೀಶೈಲ ಹಿರೇಹಾಳ, ವರ್ತಕರಾದ ಶಿವಣ್ಣ ಯಾವಗಲ್ಲ, ಶೇಕಪ್ಪ ಹಿರೇಹಾಳ ಬಸವರಾಜ ಸಂಗಟಿ ಹಾಗೂ ಸದಸ್ಯರು ಇದ್ದರು.

Leave a Reply

Your email address will not be published. Required fields are marked *

You May Also Like

ಬಾಗಲಕೋಟೆ ಜಿಲ್ಲೆಯಲ್ಲಿಂದು ಕೊರೊನಾ ಪಾಸಿಟಿವ್! 06

ಬಾಗಲಕೋಟೆ: ಜಿಲ್ಲೆಯಲ್ಲಿಂದು 06 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 161ಕ್ಕೆ…

ಸರಳ ಗಣರಾಜ್ಯೋತ್ಸವ ಆಲಮಟ್ಟಿ ಪ್ರವಾಸಿ ತಾಣ ಉತ್ತೇಜನಕ್ಕೆ ಸಂಕಲ್ಪ- ಎಚ್.ಸುರೇಶ್

ಆಲಮಟ್ಟಿ: ಈ ಭಾಗದ ಪ್ರವಾಸಿ ತಾಣವಾಗಿ ಖ್ಯಾತಿ ಪಡೆಯುತ್ತಿರುವ ಆಲಮಟ್ಟಿಯನ್ನು ಇನ್ನಷ್ಟು ಪ್ರವಾಸಿಗರನ್ನು ಇತ್ತ ಆಕಷಿ೯ಸಿ…

ಮಹಾರಾಷ್ಟ್ರದಲ್ಲಿ ಕೊರೋನಾ ಪಾಸಿಟಿವ್ 11,506ಕ್ಕೆ ಏರಿಕೆ

ಮಹಾರಾಷ್ಟ್ರ ಒಂದೇ ರಾಜ್ಯದಲ್ಲಿ ಒಂದೇ ದಿನ 1008 ಜನರಲ್ಲಿ ವೈರಸ್ ಪತ್ತೆಯಾಗಿದೆ. ಈ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಪ್ರತೀನಿತ್ಯ ಏರಿಕೆಯಾಗುತ್ತಲೇ ಇದೆ. ಈವರೆಗೆ ಮಹಾರಾಷ್ಟ್ರದಲ್ಲಿ ಪತ್ತೆಯಾದ ಕೊರೋನಾ ಪಾಸಿಟಿವ್ ಸಂಖ್ಯೆ ಎಷ್ಟು ಗೊತ್ತಾ..?