ಬೆಂಗಳೂರು: ರಾಜ್ಯದಲ್ಲಿ ಇಂದು ಒಂದೇ ದಿನ ಬರೋಬ್ಬರಿ 135 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ನಿಟ್ಟಿನಲ್ಲಿ ಸೋಂಕಿತರ ಸಂಖ್ಯೆ 2418ಕ್ಕೆ ಏರಿಕೆ ಕಂಡಿದೆ. ಅಲ್ಲದೇ, ಮೂವರು ಕೊರೊನಾಗೆ ಬಲಿಯಾಗಿದ್ದಾರೆ. ಬಲಿಯಾದವರ ಸಂಖ್ಯೆ 47ಕ್ಕೆ ಏರಿಕೆ ಕಂಡಿದೆ.

ಇಂದು ಸಂಜೆ ಬಿಡುಗಡೆಯಾದ ಬುಲೆಟಿನ್ ನಲ್ಲಿ ಕಲಬುಗಿಯಲ್ಲಿ 28, ಯಾದಗಿರಿಯಲ್ಲಿ 16, ಹಾಸನ 15, ದಕ್ಷಿಣ ಕನ್ನಡ 11, ಬೀದರ್ 13, ಉತ್ತರ ಕನ್ನಡ 6, ಉಡುಪಿ 9, ದಾವಣಗೆರೆ 6, ಚಿಕ್ಕಬಳ್ಳಾಪುರ 4, ರಾಯಚೂರು 5, ಬೆಳಗಾವಿ 4, ಬೆಂಗಳೂರು ನಗರ 6, ಚಿಕ್ಕಮಗಳೂರು 3, ವಿಜಯಪುರ 1, ಕೋಲಾರ 1 ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ತಲಾ 2, ಬಳ್ಳಾರಿ ಹಾಗೂ ಮಂಡ್ಯ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಯಾದಗಿರಿ ಜಿಲ್ಲೆಯ ನಿವಾಸಿ 69 ವರ್ಷದ ವೃದ್ಧೆ ಕೊರೊನಾ ವೈರಸ್‍ನಿಂದ ಸಾವನ್ನಪ್ಪಿದ್ದಾರೆ. ವೃದ್ಧೆಯು ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ ಹೊಂದಿದ್ದರು. ಬೀದರ್ ವಿದ್ಯಾನಗರ ಕಾಲೋನಿಯ ನಿವಾಸಿ 49 ವರ್ಷದ ವ್ಯಕ್ತಿಗೆ ಮೇ 22ರಂದು ಕೊರೊನಾ ಸೋಂಕು ಪತ್ತೆಯಾಗಿತ್ತು. 80 ವರ್ಷದ ವೃದ್ಧನಿಗೆ ಮೇ 22ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ಮೇ 26ರ ರಾತ್ರಿ ಹೃದಯಾಘಾತದಿಂದ ವೃದ್ಧ ಸಾವನ್ನಪ್ಪಿದ್ದರು.

Leave a Reply

Your email address will not be published. Required fields are marked *

You May Also Like

ಶ್ರೀಲಂಕಾ ಬ್ಯಾಟ್ಸಮನ್ ಮೆಂಡಿಸ್ ಅರೆಸ್ಟ್!

ಕೊಲಂಬೊ : ಶ್ರೀಲಂಕಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಕುಸಲ್ ಮೆಂಡಿಸ್ ಅವರನ್ನು ಶ್ರೀಲಂಕಾ…

ಮಾಸ್ಕ-ಸಾಮಾಜಿಕ ಅಂತರಕಡ್ಡಾಯ : ಪಾಲಿಸದಿದ್ದರೆ ದಂಡ

ಇಂದಿನಿಂದ ಮುಂದಿನ 15 ದಿನಗಳ ವರೆಗೆ ರಾಜ್ಯದಲ್ಲಿ ಯಾವುದೇ ಪ್ರತಿಭಟನೆ, ರ್ಯಾಲಿಗೆ ಅವಕಾಶವಿಲ್ಲ. ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯವಾಗಿದೆ. ನಿಯಮ ಪಾಲಿಸದಿದ್ದರೇ ದಂಡ ವಿಧಿಸಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ರಾಜ್ಯಪಾಲ ಆಗಮನ- ಆಲಮಟ್ಟಿ ಫೂಲ್ ಟೈಟ್ : ಎತ್ತ ನೋಡಿದರೂ ಪೋಲೀಸ್ ಸರ್ಪಗಾವಲು-ಬಿಗಿ ಭದ್ರತೆ

ಉತ್ತರಪ್ರಭಆಲಮಟ್ಟಿ: ರಾಜ್ಯಪಾಲ ಥಾವರ್ ಚೆಂದ ಗೆಹ್ಲೂಟ್ ಮಂಗಳವಾರ ಮುಸ್ಸಂಜೆ ಆಗಮನದ ಹಿನ್ನಲೆಯಲ್ಲಿ ಕೃಷ್ಣಾ ತೀರದ ಹಸಿರು…

ಲಾಕ್ ಡೌನ್ ಮಾನದಂಡ ಸಡಿಲಿಕೆಯಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆಯಾ?

ಲಾಕ್‌ಡೌನ್ ಮಾನದಂಡಗಳನ್ನು ಸಡಿಲಿಸಿದ ನಂತರ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಏರಿಕೆಯಾಗಿದೆಯೇ ಎಂಬುವುದನ್ನು ಖಚಿತಪಡಿಸಿಕೊಳ್ಳಲು, ಆರೋಗ್ಯ ಇಲಾಖೆ ಎಲ್ಲ ನಾಗರಿಕರ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿದೆ.