ಭೋಪಾಲ್: ಲಾಕ್ ಡೌನ್ ಸಂದರ್ಭದಲ್ಲಿ ಹುಟ್ಟಿದ ಅವಳಿ ಮಕ್ಕಳಿಗೆ ಕ್ವಾರಂಟೈನ್ ಹಾಗೂ ಸ್ಯಾನಿಟೈಸರ್ ಎಂದು ಹೆಸರಿಟ್ಟಿರುವ ಪ್ರಸಂಗ ನಡೆದಿದೆ.

ಕೊರೊನಾ ವೈರಸ್ ನ ಹಾವಳಿ ದೇಶವಲ್ಲದೇ ವಿದೇಶಗಳಲ್ಲಿಯೇ ಸದ್ದು ಮಾಡುತ್ತಿದೆ. ಹೀಗಾಗಿ ಕ್ವಾರಂಟೈನ್ ಹಾಗೂ ಸ್ಯಾನಿಟೈಸರ್ ಗಳ ಮಾತು ಸಾಮಾನ್ಯವಾಗಿದೆ. ಹೀಗಾಗಿ ದಂಪತಿಯೊಂದು ತಮ್ಮ ಮಕ್ಕಳಿಗೆ ಈ ಹೆಸರನ್ನೇ ಇಟ್ಟಿದ್ದಾರೆ.

ಕೊರೊನಾ ವೈರಸ್‌ನಿಂದ ದೂರ ಇರಲು ಆಗಾಗ ಸ್ಯಾನಿಟೈಸರ್ ಮೂಲಕ ಕೈ ತೊಳೆದುಕೊಳ್ಳಬೇಕಾದ್ದು ಅನಿವಾರ್ಯ. ಹಾಗೆಯೇ ದೂರದ ಊರುಗಳಿಂದ ಬಂದವರು 14 ದಿನಗಳ ಕಾಲ ತಮ್ಮನ್ನ ತಾವು ಕ್ವಾರಂಟೈನ್‌ಗೆ ಒಳಪಡಿಸಿಕೊಳ್ಳುವುದು ಸಾಮಾನ್ಯವಾಗಿದೆ. ಹೀಗಾಗಿ ಈ ದಂಪತಿ ಈ ಹೆಸರನ್ನೇ ಇಟ್ಟಿದ್ದಾರೆ.

ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಹಿಂದೆಯೂ ಈ ರಾಜ್ಯದಲ್ಲಿ ಹುಟ್ಟಿದ ಅವಳಿ ಮಕ್ಕಳಿಗೆ ಕೋವಿಡ್ ಹಾಗೂ ಕೊರೊನಾ ಎಂದು ಹೆಸರಿಡಲಾಗಿತ್ತು. ಸದ್ಯ ಕೊರೊನಾಗೆ ಸಂಬಂಧಿಸಿದ ಅಂತಹ ಹೆಸರುಗಳು ಬೆಳಕಿಗೆ ಬಂದಿವೆ.

Leave a Reply

Your email address will not be published.

You May Also Like

ರಾಹುಲ್ ಗಾಂಧಿ ಬಟಾಟೆಯಲ್ಲಿ ಚಿನ್ನ ತೆಗೆದಂತೆ ಸಿದ್ದರಾಮಯ್ಯ ಹೂವಿನಲ್ಲಿ ಚಿನ್ನ ತೆಗೆಯುತ್ತಿದ್ದಾರೆ : ಕಟೀಲ್

ರಾಹುಲ್ ಗಾಂಧಿ ಬಟಾಟೆಯಲ್ಲಿ ಚಿನ್ನ ತೆಗೆದ ರೀತಿಯಲ್ಲಿ, ಸಿದ್ದರಾಮಯ್ಯ ಹೂವಿನಲ್ಲಿ ಚಿನ್ನ ತೆಗೆಯಲು ಹೊರಟಿದ್ದಾರೆ. ಸಂಕಷ್ಟದ ಈ ಸಂದರ್ಭದಲ್ಲಿ ರಾಜಕೀಯ ಮಾಡುವ ಹೇಯ ಕೃತ್ಯ ಸಿದ್ದರಾಮಯ್ಯ ನಡೆಸಿದ್ದಾರೆ.

ರಾಜ್ಯಕ್ಕೆ ಮುಂಗಾರು ಯಾವಾಗ ಪ್ರವೇಶಿಸುವುದು ಯಾವಾಗ ಗೊತ್ತಾ?

ಪ್ರತಿ ವರ್ಷ ಜೂನ್ 1ಕ್ಕೆ ನೈರುತ್ಯ ಮುಂಗಾರು ಕೇರಳ ಪ್ರವೇಶಿಸಿ ನಂತರ ರಾಜ್ಯಕ್ಕೆ ಆಗಮಿಸುತ್ತಿತ್ತು. ಆದರೆ, ಈ ಬಾರಿ ಜೂ. 5ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ

ಶಾಲೆ ಆರಂಭಕ್ಕೆ ಸಿದ್ದರಾಮಯ್ಯ ವಿರೋಧ

ರಾಜ್ಯ ಸರ್ಕಾರ ಶಾಲೆ ಆರಂಭಕ್ಕೆ ಚಿಂತನೆ ನಡೆಸಿದ್ದು ಇದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ.