ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಎಂಬ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಮನ ಗೆದ್ದವರು ಮೆಬಿನಾ. ಅವರು ಗೊರೂರು ಬಳಿಯ ಬನವಾಸಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಯಗಳಿಸಿದ್ದರು. ಅರಕಲಗೂಡಿನಲ್ಲಿ ಸಾಕಷ್ಟು ಜನಪ್ರೀಯತೆ ಗಳಿಸಿದ್ದರು.
ನಿನ್ನೆ ಸೋಮವಾರಪೇಟೆ ಬಳಿಯ ಸ್ವಗ್ರಾಮ ಐಗೂರಿಗೆ ಬರುತ್ತಿದ್ದ ವೇಳೆ ಬೆಳ್ಳೂರು ಕ್ರಾಸ್ ಬಳಿ ಕಾರು ಅಪಘಾತಕ್ಕೀಡಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.