ಮಸ್ಕಿ: ಪಟ್ಟಣದ ಬ್ಯಾಂಕಿನ ಉದ್ಯೋಗಿಗೆ ಕೊರೊನಾ ಪಾಸಿಟಿವ್ ದೃಡ ಪಟ್ಟಿರುವ ಹಿನ್ನಲ್ಲೆಯಲ್ಲಿ ಬ್ಯಾಂಕ್ ವನ್ನು ಸಿಲ್ ಡೌನ್ ಮಾಡಲಾಗಿದೆ. ಬ್ಯಾಂಕಿನ ಸಿಬ್ಬಂದಿ ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕೆಸರೂ ಗ್ರಾಮದವರು. ಕೊಪ್ಳಳ ಜಿಲ್ಲೆಯಲ್ಲಿ ಕ್ವಾರೆಂಟೈನ್ ಗೆ ಹಾಕಲಾಗಿದ್ದರು, ಅಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಿರುವುದರಿಂದ ಕೊರೊನಾ ಪಾಸಿಟಿವ್ ಇರುವುದು ದೃಢ ಪಟ್ಟಿದೆ. ಇದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ವಿಷಯ ತಿಳಿದ ತಕ್ಷಣ ಲಿಂಗಸ್ಗೂರಿನ ಸಹಾಯಕ ಆಯುಕ್ತ ರಾಜಶೇಖರ ಡಂಬಳ ಅವರು ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಾಯದೊಂದಿಗೆ ಬ್ಯಾಂಕಿಗೆ ಆಗಮಿಸಿ ಬ್ಯಾಂಕ್ ನ್ನು ಸೀಲ್‌ಡೌನ್‌ ಮಾಡಿದರು.
ಬಳಿಕ ರಾಯಚೂರಿನ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ‌ಆಗಮಿಸಿ ಪರಿಶೀಲಿಸಿದರು. ತಾಲೂಕ ಮಟ್ಟದ ಅಧಿಕಾರಿಗಳ ತುರ್ತು ಸಭೆ ನಡೆಸಿದರು.‌ ಈ ಸಂದರ್ಭದಲ್ಲಿ ತಹಶೀಲ್ದಾರ್ ಬಲರಾಮ‌ ಕಟ್ಟಿಮನಿ. ಸಿಪಿಐ ದೀಪಕ್‌ ಬೂಸರೆಡ್ಡಿ. ಪಿಎಸ್ಐ ಸಣ್ಣ ಈರೇಶ, ಆರೋಗ್ಯ ಅಧಿಕಾರಿ ನಂದಕುಮಾರ ಸೇರಿದಂತೆ ಇನ್ನಿತರಿದ್ದರು.

Leave a Reply

Your email address will not be published. Required fields are marked *

You May Also Like

ನಿರಾಣಿಗೆ ಹೈಕಮಾಂಡ್ ಬುಲಾವ್

ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ಗಣಿ ಸಚಿವ ಮುರುಗೇಶ್ ನಿರಾಣಿ ದೆಹಲಿಗೆ ತೆರಳಿದ್ದು, ವರಿಷ್ಠರನ್ನು ಭೇಟಿಯಾಗಿ ಪಂಚಮಸಾಲಿ ಸಮಾವೇಶದ ಕುರಿತಾಗಿ ಮಾಹಿತಿ ನೀಡಲಿದ್ದಾರೆ.

ದೇಶದಲ್ಲಿ ಒಂದೇ ದಿನ 7,466 ಹೊಸ ಕೊರೊನಾ ಪ್ರಕರಣ: 175 ಸಾವು

ದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 7,466 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಇದೇ ಅವಧಿಯಲ್ಲಿ…

ಕಾಫಿ ನಾಡಿನಲ್ಲಿ ಸದ್ಯದಲ್ಲಿಯೇ ಶುರುವಾಗಲಿದೆ ವೈದ್ಯಕೀಯ ಕಾಲೇಜು!

ಬೆಂಗಳೂರು : ಕಾಫಿ ನಾಡಿನಲ್ಲಿ 24 ರಿಂದ 30 ತಿಂಗಳಲ್ಲಿ ಸುಸಜ್ಜಿತ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣವಾಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ.