ಬೆಂಗಳೂರು: ಇಲ್ಲಿಯ ಶಿವಾಜಿನಗರದಲ್ಲಿ ಮತ್ತೆ 14 ಜನರಲ್ಲಿ ಸೋಂಕು ಇರುವುದು ಬೆಳಕಿಗೆ ಬಂದಿದೆ.

ಹೌಸ್ ಕೀಪಿಂಗ್ ಜೊತೆ ದ್ವಿತೀಯ ಸಂಪರ್ಕದಲ್ಲಿದ್ದ ವ್ಯಕ್ತಿಗಳಿಗೆ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ 20 ಜನರ ಗಂಟಲು ದ್ರವ ಪರೀಕ್ಷೆ ನಡೆಸಿದ್ದು, ಇದರಲ್ಲಿ 14 ಜನರಲ್ಲಿ ಪಾಸಿಟಿವ್ ಕಂಡು ಬಂದಿದೆ.

ಶುಕ್ರವಾರ 22 ಜನರ ಗಂಟಲು ದ್ರವ ಪರೀಕ್ಷೆಯಲ್ಲಿ 11 ಜನರಿಗೆ ಸೋಂಕು ಇರುವುದು ಖಚಿತವಾಗಿತ್ತು. ಈ ನಿಟ್ಟಿನಲ್ಲಿ ಶಿವಾಜಿನಗರದಲ್ಲಿ ಸೋಂಕಿತರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ನಿನ್ನೆ 202 ಪ್ರಕರಣ ಪತ್ತೆಯಾಗಿದ್ದು, ಇಂದಿನ 14 ಪ್ರಕರಣ ಸೇರಿ 216ಕ್ಕೆ ಏರಿಕೆಯಾಗಿದೆ.

ಒಂದೇ ಬಿಲ್ಡಿಂಗ್ ನಲ್ಲಿ ಇದ್ದ 72 ಜನರನ್ನು ಕ್ವಾರಂಟೈನ್ ಮಾಡಲಾಗಿತ್ತು. ಅದರಲ್ಲಿ ನಿನ್ನೆ 22 ಜನರ ಗಂಟಲು ದ್ರವ ಪರೀಕ್ಷೆಯಲ್ಲಿ 11 ಪಾಸಿಟಿವ್ ದೃಢಪಟ್ಟಿತ್ತು. ಇಂದು 20 ಜನರ ಗಂಟಲು ದ್ರವ ಪರೀಕ್ಷೆಯಲ್ಲಿ 14 ಪಾಸಿಟಿವ್ ಬಂದಿದೆ.

Leave a Reply

Your email address will not be published. Required fields are marked *

You May Also Like

ಚುನಾವಣೆ ಮುಂದೂಡಲು ಸರ್ಕಾರದ ಹುನ್ನಾರ: ತಾಪಂ ರದ್ದು ವಿಚಾರಕ್ಕೆ ಶಾಸಕ ಎಚ್.ಕೆ. ಪಾಟೀಲ ಕಿಡಿ

ರಾಜ್ಯ ಸರ್ಕಾರ ತಾಲೂಕು ಪಂಚಾಯತಿಯನ್ನು ರದ್ದು ಪಡಸಲು ಮುಂದಾಗಿದ್ದು, ಸAವಿಧಾನದಲ್ಲಿ ತಿದ್ದುಪಡಿಯಾಗಿದ್ದನ್ನು ರಾಜ್ಯ ಸರಕಾರ ರದ್ದು ಪಡಿಸೋಕೆ ಬರುವದಿಲ್ಲ. ಆದರೆ ಯಾವ ಆಧಾರದ ಮೇಲೆ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ ಎಂದು ಮಾಜಿ ಸಚಿವ, ಶಾಸಕ ಎಚ್.ಕೆ.ಪಾಟೀಲ್ ಪ್ರಶ್ನಿಸಿದರು.

ಭೀಮ ಆರ್ಭಟ: ವಿಜಯಪುರ ಜನ ತತ್ತರ – 400 ಕುಟುಂಬಗಳ ಸ್ಥಳಾಂತರ!

ಜಿಲ್ಲೆಯ ಇಂಡಿ ಹಾಗೂ ಸಿಂದಗಿ ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, 400ಕ್ಕೂ ಹೆಚ್ಚು ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ.

ಪತ್ರಕರ್ತನ ಮೇಲೆ ದರ್ಪ: ತಪ್ಪೊಪ್ಪಿಕೊಂಡ ಗಜೇಂದ್ರಗಡ ತಹಶೀಲ್ದಾರ

ಈ ಘಟನೆ ನಡೆಯಬಾರದಿತ್ತು. ಘಟನೆಗೆ ಸಂಬಂಧಿಸಿದಂತೆ ಈ ರೀತಿ ಮುಂದೆ ಆಗದಂತೆ ಎಚ್ಚರಿಕೆ ವಹಿಸುತ್ತೇನೆ. ನನ್ನಿಂದ ತಪ್ಪಾಗಿದೆ ಎಂದು ಗಜೇಂದ್ರಗಡ ತಹಶೀಲ್ದಾರ್ ಅಶೋಕ್ ಕಲಘಟಗಿ ಉತ್ತರಪ್ರಭಕ್ಕೆ ತಪ್ಪೊಪ್ಪಿಕೊಂಡಿದ್ದಾರೆ.