ಜಿನೆವಾ: ಕೊರೊನಾ ವೈರಸ್ ಗೆ ಪರಿಣಾಮಕಾರಿ ಮದ್ದು ಎನ್ನಲಾಗುತ್ತಿದ್ದ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧದ ವೈದ್ಯಕೀಯ ಪ್ರಯೋಗಕ್ಕೆ ವಿಶ್ವ ಆರೋಗ್ಯ ಸಂಸ್ಥೆ ತಡೆ ನೀಡಿದೆ.

ಹೈಡ್ರಾಕ್ಸಿಕ್ಲೋರೋಕ್ವಿನ್ ಮದ್ದಿನಿಂದಾಗಿ ಕೊರೊನಾ ವೈರಸ್ ರೋಗಿಗಳು ಗುಣಮುಖರಾಗುವುದಕ್ಕಿಂತ ಸಾಯುವ ಅಪಾಯವೇ ಹೆಚ್ಚು ಎಂಬ ವೈದ್ಯಕೀಯ ವರದಿಯ ಹಿನ್ನಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮುನ್ನೆಚ್ಚರಿಕಾ ಕ್ರಮವಾಗಿ ಈ ತಡೆ ನೀಡಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್‌ ಅವರು, ಮುನ್ನೆಚ್ಚರಿಕೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿಶ್ವದಾದ್ಯಂತ ಸಾವಿರಾರು ಆಸ್ಪತ್ರೆಗಳು ಕ್ಲಿನಿಕಲ್‌ ಟ್ರಯಲ್‌ಗಾಗಿ ರೋಗಿಗಳನ್ನು ಆರೋಗ್ಯ ಸಂಸ್ಥೆಯ ಕಾರ್ಯನಿರ್ವಾಹಕ ಗುಂಪಿನ ಸಾಲಿಡಾರಿಟಿ ಟ್ರಯಲ್‌ನಲ್ಲಿ (ಒಗ್ಗಟ್ಟಿನ ಪ್ರಯೋಗ) ನೊಂದಾಯಿಸಿವೆ. ಈ ಕ್ಲಿನಿಕಲ್‌ ಪ್ರಯೋಗದಲ್ಲಿ ಮಲೇರಿಯಾ ನಿರೋಧಕ ಹೈಡ್ರಾಕ್ಸಿಕ್ಲೋರೋಕ್ವಿನ್‌ನ ಬಳಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಹೇಳಿದ್ದಾರೆ.

ಈಗಾಗಲೇ ವಿಶ್ವಾದ್ಯಂತ ಲಕ್ಷಾಂತರ ಜನರನ್ನು ಬಲಿ ಪಡೆದಿರುವ ಮಾರಕ ಕೊರೊನಾ ವೈರಸ್ ಗೆ ಔಷಧಿ ಕಂಡು ಹಿಡಿಯುವ ಸಲುವಾಗಿ ವಿಶ್ವಾದ್ಯಂತ ನೂರಾರು ಔಷಧ ತಯಾರಿಕಾ ಸಂಸ್ಥೆಗಳು ಸಂಶೋಧನೆಯಲ್ಲಿ ತೊಡಗಿವೆ.

Leave a Reply

Your email address will not be published. Required fields are marked *

You May Also Like

ಬಂದ ಮತ್ತೊಬ್ಬ ಬಂಗಾರದ ಬಾಬಾ: ಈತನ ಚಿನ್ನದ ಮಾಸ್ಕ ರೇಟು 3.5 ಲಕ್ಷ ರೂ!

ಪುಣೆಯಲ್ಲಿ ಶಂಕರ್ ಕುರಾಡೆ ಎನ್ನುವಾತ 2.80 ಲಕ್ಷ ರೂ. ಮೌಲ್ಯದ ಚಿನ್ನದ ಮಾಸ್ಕ್ ಧರಿಸಿದ್ದನ್ನು ನೋಡಿ ಪ್ರೇರಣೆ ಪಡೆದ ಒರಿಸ್ಸಾದ ಚಿನ್ನ ಪ್ರಿಯನೊಬ್ಬ 3.6 ಲಕ್ಷ ರೂ ಮಾಸ್ಕ್ ಮಾಡಿಸಿಕೊಂಡಿದ್ದಾನೆ.

ಎಸ್.ಎಸ್.ಎಲ್.ಸಿ ಪರೀಕ್ಷೆ: ಗದಗನಲ್ಲಿ 3 ವಿದ್ಯಾರ್ಥಿಗಳು ಡಿಬಾರ್..!

ಗದಗ: ಇಲ್ಲಿನ ಮುನ್ಸಿಪಲ್ ಕಾಲೇಜ್ ಪರೀಕ್ಷಾ ಕೇಂದ್ರದಲ್ಲಿ ನಕಲು ಮಾಡುತ್ತಿದ್ದ ಮೂವರು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಡಿಬಾರ್…

ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ರಾಜ್ಯಕ್ಕೆ ಎಷ್ಟನೇ ಸ್ಥಾನ ಗೊತ್ತಾ..?

ನಿನ್ನೆ ಮಧ್ಯಾಹ್ನದವರೆಗೂ ಕರ್ನಾಟಕ ರಾಜ್ಯವು 12ನೇ ಸ್ಥಾನದಲ್ಲಿತ್ತು, ಆದರೆ, ಪ್ರತಿ ದಿನ ರಾಜ್ಯದಲ್ಲಿ 200ಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿರುವುದರಿಂದಾಗಿ ಒಂದು ಸ್ಥಾನ ಮೇಲೆ ಏರಿದೆ.

ಹೊಸ ಕಾರು ಖರೀದಿದಾರರಿಗೆ ಎಸ್ ಬಿಐ ನಿಂದ ರ್ಜರರಿ ಗುಡ್ ನ್ಯೂಸ್

ಭಾರತೀಯ ಕಾರು ಮಾರುಕಟ್ಟೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಸಾಲ ಲಭ್ಯತೆಯಿಂದ ಮಧ್ಯಮ ರ್ಗೆದ ಖರೀದಿ ಸಾರ್ಥ್ಯಕ ಹೆಚ್ಚಿದೆ.