ಬೀದರ್: ಕ್ವಾರಂಟೈನ್ ನಲ್ಲಿದ್ದ ಯುವಕನೊಬ್ಬ ಇಂದು ಬೆಳಗ್ಗಿನ ಜಾವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಔರಾದ್ ತಾಲೂಕಿನ ವನಮಾರಪ್ಪಳ್ಳಿ ಗ್ರಾಮದಲ್ಲಿ ನಡೆದಿದೆ.

ಸಚಿನ್ ಜಾದವ್ (21) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಈಗಾಗಲೇ ಯುವಕ ಜಾದವ್ ಗೆ ಮದುವೆಯಾಗಿದ್ದು, ಎಂಟು ದಿನಗಳ ಹಿಂದೆ ಮುಂಬೈನಿಂದ ಪತ್ನಿಯ ಜೊತೆ ಜಿಲ್ಲೆಗೆ ಬಂದಿದ್ದನು.
ಮುಂಬೈನಿಂದ ಬಂದ ಕಾರಣ ದಂಪತಿಯನ್ನು ಔರಾದ್ ತಾಲೂಕಿನ ವನಮಾರಪ್ಪಳ್ಳಿ ಗ್ರಾಮದ ಕಿತ್ತೂರ ರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ರಾತ್ರಿ ಪತ್ನಿಯ ಜೊತೆಗಿದ್ದ ಜಾದವ್ ಇಂದು ಬೆಳಗಿನ ಜಾವ ನೇಣು ಬಿಗಿದುಕೊಂಡು ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಾಹಿತಿ ತಿಳಿದು ಸ್ಥಳಕ್ಕೆ ಔರಾದ್ ಪೊಲೀಸರು ಭೇಟಿ ಪರಿಶೀಲನೆ ಮಾಡುತ್ತಿದ್ದಾರೆ. ಆದರೆ ಜಾದವ್ ಆತ್ಮಹತ್ಯೆಗೆ ಇನ್ನೂ ನಿಖರವಾದ ಕಾರಣ ತಿಳಿದು ಬಂದಿಲ್ಲ.

Leave a Reply

Your email address will not be published. Required fields are marked *

You May Also Like

ಅಮೆರಿಕದಲ್ಲಿ ಮಹಾಮಾರಿಯ ಅಟ್ಟಹಾಸ ತಗ್ಗಿತೇ?

ಅಮೆರಿಕದಲ್ಲಿ ಮಹಾಮಾರಿಯ ಅಟ್ಟಹಾಸ ತಗ್ಗಿತೇ? ವಾಷಿಂಗ್ಟನ್ : ಮಹಾಮಾರಿ ವೈರಸ್ ನಿಂದ ತತ್ತರಿಸಿ ಹೋಗಿದ್ದ ಅಮೆರಿಕದಲ್ಲಿ…

ಡಿಕೆಶಿ ಮಗಳ ಮದುವೆ; ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐಶ್ವರ್ಯ-ಅಮರ್ಥ್ಯ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಗಳು ಐಶ್ವರ್ಯ ಹಾಗೂ ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಹೆಗ್ಡೆ ಅವರ ಮಗ ಅಮರ್ಥ್ಯ ಹೆಗ್ಡೆ ಪ್ರೇಮಿಗಳ ದಿನದಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದ್ದೂರಿಯಾಗಿ ನಡೆದ ಮದುವೆಯಲ್ಲಿ ಶಾಸ್ತ್ರೋಕ್ತವಾಗಿ ಇಬ್ಬರೂ ಸಪ್ತಪದಿ ತುಳಿದಿದ್ದಾರೆ. ಎಸ್.ಎಂ.ಕೃಷ್ಣ ಅವರ ಮೊಮ್ಮಗ ಅಮರ್ಥ್ಯ ಹೆಗ್ಡೆ ಹಾಗೂ ಡಿ.ಕೆ.ಶಿವಕುಮಾರ್ ಪುತ್ರಿಯ ಮದುವೆಯಲ್ಲಿ ಇಂದು ಕಾಂಗ್ರೆಸ್, ಬಿಜೆಪಿ ರಾಜಕೀಯ ನಾಯಕರೂ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇಂದಿನ ಮದುವೆಗೆ ಒಟ್ಟು ೮೦೦ ಗಣ್ಯರಿಗೆ ಆಹ್ವಾನ ನೀಡಲಾಗಿದೆ.

ಚಂದನ ಶಾಲೆಯ ಪುಟಾಣಿಗಳ ಕೊರೋನಾ ಜಾಗೃತಿ

ಶಾಲೆಯ ಅಂಗಳದಲ್ಲಿ ಪುಟ್ಟ ಕಂದಮ್ಮಗಳು ಕೊರೋನಾ ಬಗ್ಗೆ ನೀಡಿದ ಜಾಗೃತಿ ಸಂದೇಶ ಅದ್ಭುತವಾದದ್ದು. ಇಂತಹ ಪ್ರಯತ್ನಕ್ಕೆ ಮುಂದಾದ ಚಂದನ್ ಶಾಲೆಯ ಪ್ರಯತ್ನ ಕೂಡ ಸಾಮಾಜಿಕ ಕಾಳಜಿ ತೋರಿಸುವಂತಹದ್ದು.

ಕುಡುಕರ ನಶೆಗೆ ಸುಟ್ಟು ಭಸ್ಮವಾದ ಬೈಕ್ ಗಳು!

ಉಡುಪಿ : ಕುಡುಕರ ನಶೆಗೆ ಮೂರು ಬೈಕ್ ಗಳು ಸುಟ್ಟು ಭಸ್ಮವಾದ ಘಟನೆ ನಡೆದಿದೆ.