ಕಲಬುರಗಿ: ಕ್ವಾರಂಟೈನ್ ಕೇಂದ್ರದಲ್ಲಿ ತಮಗೆ ಚಿಕನ್ ಕೊಡಲಿಲ್ಲ ಎಂದು ಆರೋಪಿಸಿ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆಸಿದ ಘಟನೆ ಕಲಬುರ್ಗಿ ಜಿಲ್ಲೆಯಲ್ಲಿ ನಡೆದಿದೆ. ಚಿಕನ್ ಊಟ ಕೊಡದಿದ್ದಕ್ಕೆ ಆಶಾ ಕಾರ್ಯಕರ್ತೆಯನ್ನು ಥಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಲಬುರ್ಗಿ ಜಿಲ್ಲೆ ಆಳಂದ ತಾಲೂಕಿನ ಕಿಣ್ಣಿ ಅಬ್ಬಾಸ್ ಗ್ರಾಮದಲ್ಲಿ ಆಶಾ ಕಾರ್ಯಕರ್ತೆ ರೇಣುಕಾ ಕುಡಕಿ ಹಲ್ಲೆಗೊಳಗಾಗಿದ್ದಾರೆ.

ಚಿಕನ್ ಗಾಗಿ ಸೋಮನಾಥ್ ಕಾಂಬಳೆ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದ್ದು ಇದರಿಂದ ರೇಣುಕಾ ಕೈ ಮೂಳೆ ಮುರಿದಿದೆ. ಚಿಕಿತ್ಸೆಗಾಗಿ ರೇಣುಕಾ ಅವರನ್ನು ಆಳಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕ್ವಾರಂಟೈನ್ ಇರುವ ಕಾರಣಕ್ಕೆ ಸದ್ಯಕ್ಕೆ ಆರೋಪಿಯನ್ನು ಬಂಧಿಸಿಲ್ಲ. ಕ್ವಾರಂಟೈನ್ ಮುಗಿದ ಮೇಲೆ ಆತನ ವಿರುದ್ಧ ಕ್ರಮ ಕೈಗೊಳ್ಳೋ ಸಾಧ್ಯತೆಗಳಿವೆ.

ಮುಂಬೈನಿಂದ ಬಂದು ಗ್ರಾಮದ ಸರ್ಕಾರಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿರುವ ಸೋಮನಾಥ, ಊಟಕ್ಕೆ ಚಿಕನ್ ಬೇಕು, ಮಕ್ಕಳಿಗೆ ಚಿಪ್ಸ್ ಬೇಕೆಂದು ಬೇಡಿಕೆ ಇಟ್ಟಿದ್ದಾನೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಆಶಾ ಕಾರ್ಯಕರ್ತೆ ರೇಣುಕಾ ಸೋಮನಾಥ್ ಗೆ ತಿಳಿ ಹೇಳಿದ್ದಾರೆ.

ಇದಕ್ಕೆ ಸುಮ್ಮನಾಗದ ಸೋಮನಾಥ ಕೋಪಗೊಂಡ ಹೆಂಡತಿ ಮತ್ತು ಕುಟುಂಬದ ಐವರು ಸದಸ್ಯರು ಸೇರಿ ರೇಣುಕಾ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇಲ್ನೋಟಕ್ಕೆ ಇದು ಕೋಳಿಗಾಗಿ ಜಗಳದಂತೆ ಕಂಡು ಬಂದರೂ ಆಂತರಿಕ ಕಾರಣ ಬೇರೆಯೇ ಇದೆ ಎನ್ನುವ ಮಾತು ಕೇಳಿ ಬರುತ್ತಿವೆ.

Leave a Reply

Your email address will not be published. Required fields are marked *

You May Also Like

ಏಲಕ್ಕಿ ನಾಡಿನಲ್ಲೂ ಖಾತೆ ತೆರೆದ ಕೊರೋನಾ

ಈವರೆಗೂ ಯಾವುದೇ ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗದ ಹಿನ್ನೆಲೆ ಹಾವೇರಿ ಜಿಲ್ಲೆ ಗ್ರೀನ್ ಝೋನ್‌ನಲ್ಲಿತ್ತು. ಆದರೆ ಇದೀಗ ಹಾವೇರಿಯಲ್ಲೂ ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಈ ಮೂಲಕ ಏಲಕ್ಕಿ ನಾಡಿನಲ್ಲಿ ಮಹಾಮಾರಿ ಕೊರೋನಾ ಖಾತೆ ತೆರೆದಿದೆ.

ಮುಳುಗದ ರವಿ‌ ಬೆಳಗು

ಪತ್ರಕರ್ತ, ಕವಿ, ಕತೆಗಾರ, ಅನುವಾದಕ, ವಿವಾದಾತ್ಮಕ ಬರಹಗಾರ ರವಿ ಬೆಳಗೆರೆ ನಿರೀಕ್ಷಿತವಾಗಿ ದೈಹಿಕವಾಗಿ ಹೋಗಿದ್ದಾರೆ. ಕುಡಿತ, ಸಿಗರೇಟ್, ರಸಿಕತೆ ರವಿಯನ್ನು ಬಲಿ ತೆಗೆದುಕೊಂಡಿದೆ. ಯಾವತ್ತಾದರೂ ಒಂದು ದಿನ ಸಾಯೋದೇ, ಹ್ಯಾಗ ಬದುಕಿದರೆ ಏನು? ಎಂಬ ಉಡಾಫೆಯೂ ಇತ್ತಲ್ಲ! ಆದರೆ ರವಿ very very colourful ಕನಸುಗಾರ. ಬದುಕಿನ ರಹಸ್ಯಗಳನ್ನು ಬಿಚ್ಚಿಟ್ಟ ಎದೆಗಾರ. ತುಂಬಾ ಕಾಡಿ ಕನಲಿದ ಹುಟ್ಟಿನ ರಹಸ್ಯ ಬಿಚ್ಚಿಟ್ಟು ನಿರಾಳವಾದ ಹೊತ್ತಲ್ಲಿ ಜೀವ ಬಿಟ್ಟ ಜಾದೂಗಾರ.

ಮಗನಿಗೆ ‌ಪರೀಕ್ಷೆಗೆ ಕರೆದೊಯ್ಯುವಾಗ ಅಪಘಾತ: ಸ್ಥಳದಲ್ಲೆ ತಂದೆ ಸಾವು.!

ರಾಯಚೂರು: ಮಗನನ್ನು ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯಲು ಕರೆದೊಯ್ಯುವ ವೇಳೆ ಅಪಘಾತ ಸಂಭವಿಸಿ ತಂದೆ ಸ್ಥಳದಲ್ಲೇ…

ಕೊರೊನಾ: ಒಂದೇ ದಿನ 2,003 ಸಾವು, 10,974 ಹೊಸ ಪ್ರಕರಣ

ಕಳೆದ 24 ಗಂಟೆಗಳಲ್ಲಿ ಕೊರೊನಾ ರೋಗಕ್ಕೆ 2,003 ನಾಗರಿಕರು ಬಲಿಯಾಗಿದ್ದು, ಇದೇ ಅವಧಿಯಲ್ಲಿ ಹೊಸದಾಗಿ 10,974 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ.