ಕಮಿಶನ್ ಗೆ ಒಳಗಾಗಿ ಗಣಿಗಾರಿಕೆಗೆ ಅವಕಾಶ ಬೇಡ: ತೋಂಟದ ಶ್ರೀಗಳು

ಗದಗ: ಕಪ್ಪತ್ತಗುಡ್ಡ ನಾಶವಾದರೆ ಈ ಭಾಗ ಮರಭೂಮಿಯಾಗುತ್ತದೆ. ಬಲ್ದೋಟದಂತಹ ಕಂಪನಿ ಸರ್ಕಾರದ ಮೇಲೆ ಪ್ರಭಾವ ಬೀರುತ್ತವೆ. ಈ ಕಾರಣದಿಂದ ಸರ್ಕಾರ ಕಮಿಶನ್ ಗೆ ಒಳಗಾಗಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ತೋಂಟದ ಸಿದ್ಧರಾಮಶ್ರೀಗಳು ಎಚ್ಚರಿಸಿದರು.
ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿರುವ ಆರೋಪ ಹಿನ್ನೆಲೆ ತೋಂಟದ ಸಿದ್ಧರಾಮಶ್ರೀಗಳು ಪ್ರತಿಕ್ರಿಸಿದರು.

ಸರ್ಕಾರದ ನಡೆ ಹೀಗೆ ಮುಂದುವರೆದರೆ ನಾವು ಕೂಡ ಹೋರಾಟ ಮುಂದುವರೆಸುತ್ತೇವೆ. ಆಗ ಹೋರಾಟ ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತವೆ. ಇಂತಹ ಸಂದರ್ಭದಲ್ಲಿ ಯಾರು ಕೂಡ
ಪ್ರಲೋಭನೆಗೆ ಒಳಗಾಗಬಾರದು.
ಯಾವ ಕಾರಣಕ್ಕೂ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ನಡೆಯಬಾರದು. ರಾಜಕಾರಣಿಗಳು ಮುಂದಿನ ಎಲೆಕ್ಷನ್ ಬಗ್ಗೆ ಯೋಚನೆ ಮಾಡಬಾರದು. ಎಲೆಕ್ಷನ್ ಗೆ ಹಣ ಕೂಡಿಸಲು ಯೋಚಿಸುವ ರಾಜಕಾರಣಿ ನಿಜವಾದ ರಾಜಕಾರಣಿ ಅಲ್ಲ. ಹೀಗೆ ಮಾಡಿದರೆ ರಾಜಕಾರಣಿಗಳ ತಂತ್ರಗಾರಿಕೆಗೆ ಜನ ಸ್ಪಂದಿಸಿಲ್ಲ. ನಮ್ಮ ಸಂಪತ್ತುನ್ನು ಎಲ್ಲಿಂದಲೋ ಬಂದವರು ಲೂಟಿ ಹೊಡೆಯಲು ಅವಕಾಶ ನೀಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಪನ್ಮೂಲ ನಾಶ ಮಾಡಿದರೆ ಉಳಿಗಾಲವಿಲ್ಲ
ಮನುಷ್ಯನ ಬದುಕಿಗೆ ಪೂರಕವಾದ ಎಲ್ಲ ಸಂಪನ್ಮೂಲ ಭೂಮಿ ಮೇಲಿದೆ. ನಾವು ಬದಕಲು ಇರುವ ಸಂಪನ್ಮೂಲ ಸರಿಯಾಗಿ ಬಳಿಸಿಕೊಳ್ಳಬೇಕು. ಆದರೆ ಸಂಪನ್ಮೂಲ ನಾಶ ಮಾಡುವ ಕೆಲಸ ಮಾಡಿದರೆ ಯಾರಿಗೂ ಉಳಿಗಾಲವಿಲ್ಲ ಎಂದರು.

ಗಣಿಗಾರಿಕೆಯಿಂದ ಸಂಪನ್ಮೂಲ ನಾಶ ಮಾಡುವುದು ಪಕೃತಿ ಮೇಲಿನ ಅತ್ಯಾಚಾರ. ಹೀಗಾಗಿ ಚಿನ್ನದ ಮೊಟ್ಟೆ ಇಡುವ ಕೋಳಿ ಸಾಕಿದ ವ್ಯಕ್ತಿಯ ಕಥೆಯನ್ನು ಪ್ರತಿಯೊಬ್ಬರು ನೆನೆಪಿಸಿಕೊಳ್ಳಬೇಕು. ಇಲ್ಲದಿದ್ದರೆ ಚಿತ್ರ ತೋರಿಸಿ ಪ್ರಾಣಿ ಪರಿಚಯಿಸುವ ಕಾಲ ಬರುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.

ನಾವು ಮಾಡಿದ ಹ್ಯೇಯ ಕೃತ್ಯಕ್ಕೆ ಮುಂದಿನ ಪಿಳಿಗೆ ಬಲಿ ಪಶುವಾಗುತ್ತದೆ. ಪಾಕೃತಿಕ ಸಂಪನ್ಮೂಲವನ್ನು ಕಾಳಜಿಯಿಂದ ಉಳಿಸಿಕೊಳ್ಳಬೇಕು.
ಈಗಾಗಲೇ ಕಪ್ಪತ್ತಗುಡ್ಡದಲ್ಲಿ ಪವನ ಯಂತ್ರಗಳನ್ನು ಸ್ಥಾಪಿಸಿ ಇವುಗಳಿಗಾಗಿ ರಸ್ತೆ ನಿರ್ಮಿಸಿದ್ದಾರೆ. ಇದರಿಂದ ಸಸ್ಯ ವೈವಿಧ್ಯಕ್ಕೆ ಬೆಂಕಿ ಬೀಳುತ್ತದೆ. ಈ ಕಾರಣದಿಂದ ಸಾಕಷ್ಟ ಸಸ್ಯ ಹಾಗೂ ವನ್ಯ ಸಂಪತ್ತು ಹಾನಿಯಾಗುತ್ತದೆ.
ನಿರಂತರ ಕಪ್ಪತ್ತಗುಡ್ಡದ ಮೇಲೆ ಆಘಾತಕಾರಿ ಘಟನೆಗಳು ನಡೆಯುತ್ತಲಿದೆ. ಗಣಿಗಾರಿಕೆ ನಡೆಸಿ ಸಂಪತ್ತು ಕೊಳ್ಳೆ ಹೊಡೆಯಲು ವಿದೇಶಿ ಕಂಪನಿಗಳು ಹುನ್ನಾರ ನಡೆಸಿವೆ.

ಆರ್ಥಿಕ ಸಂಕಷ್ಟ ಮುಕ್ತಕ್ಕೆ ಅನ್ಯಮಾರ್ಗ ಬೇಡ

ಸರ್ಕಾರ ಕೊರೋನಾ ಆರ್ಥಿಕತೆ ಸಂಕಷ್ಟ ಮುಕ್ತವಾಗಲೂ ಗಣಿಗಾರಿಕೆ ನಡೆಸಬಹುದು. ಈ ಘಟನೆ ಸೂಚ್ಯವಾಗಿ ಗಮನಿಸಲಾಗ್ತಿದೆ. ಆರ್ಥಿಕತೆ ಹದಗೆಟ್ಟ ಮಾತ್ರಕ್ಕೆ ಗಣಿಗಾರಿಕೆ ಅಥವಾ ಯಾವುದೇ ಚಟುವಟಿಕೆ ನಡೆಸುವುದು ಸೂಕ್ತವಲ್ಲ. ಕಾಂಗ್ರೆಸ್-ಬಿಜೆಪಿ ಯಾರೇ ಇರಲಿ
ಗಣಿಗಾರಿಕೆಯಿಂದ ಆಗುವ ತೊಂದರೆ ಬಗ್ಗೆ ಅವರಿಗೆ ಅರಿವಿದೆ. ಬಳ್ಳಾರಿ ಸದ್ಯದ ಸ್ಥಿತಿ ಇದಕ್ಕೆ ಉದಾಹರಣೆಯಾಗಿದೆ. ಸರ್ಕಾರ ಯಾವುದೇ ಕಾಲಕ್ಕೂ ಗಣಿಗಾರಿಕೆಗೆ ಅವಕಾಶ ನೀಡಬಾರದು.
ಸಪ್ಪಳವಿಲ್ಲದಂತೆ ಗಣಿಗಾರಿಕೆ ಆರಂಭಿಸಿದರೆ ಪ್ರಾಕೃತಿಕ ಸಂಪನ್ಮೂಲ ಕಳೆದುಕೊಂಡಂತಾಗುತ್ತದೆ ಎಂದು ಎಚ್ಚರಿಸಿದರು.

Exit mobile version