ಹುಬ್ಬಳ್ಳಿ: ಆಹಾರ ಕಿಟ್ ಗಾಗಿ ಬಿಜೆಪಿ ಶಾಸಕರ ಮನೆಯ ಮುಂದೆ ಜನಸ್ತೋಮವೇ ತುಂಬಿದ್ದ ಪ್ರಸಂಗ ಜಿಲ್ಲೆಯ ಕಲಘಟಗಿಯಲ್ಲಿ ಕಂಡು ಬಂದಿದೆ.

ಕಲಘಟಗಿ ಶಾಸಕ ಸಿ.ಎಂ.ನಿಂಬಣ್ಣವರ ಮನೆ ಮುಂದೆ ಸುತ್ತಮುತ್ತಲಿನ ಗ್ರಾಮದ ನೂರಾರು ಜನರು ಆಹಾರ ಕಿಟ್ ನೀಡುವಂತೆ ಆಗ್ರಹಿಸಿ ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಮಹಿಳೆಯರು ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಕಂಡು ಬಂದಿದೆ.

ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ವಿತರಣೆ ಮಾಡಲು ನೀಡಿದ ಕಿಟ್ಗಳನ್ನು ಶಾಸಕರು ಬಿಜೆಪಿ ಕಾರ್ಯಕರ್ತರಿಗೆ ನೀಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿತ್ತು. ಇದರಿಂದಾಗಿ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಶಾಸಕರ ಮನೆಗೆ ಮುತ್ತಿಗೆ ಹಾಕಿದರು. ರಾಜ್ಯದ ವಿವಿಧೆಡೆ ಬಡವರಿಗೆ ಆಹಾರ ಕಿಟ್ ವಿತರಿಸುತ್ತಿದ್ದಾರೆ. ನಮಗೂ ಆಹಾರದ ಕಿಟ್ಗಳನ್ನು ಕೊಡಿ ಎಂದು ಆಗ್ರಹಿಸಿದರು.

ಪ್ರತಿಭಟನೆಗೆ ಮುಂದಾಗಿದ್ದ ಮಹಿಳೆಯರನ್ನು ಶಾಸಕರ ಸಹಾಯಕರು ತಡೆದು ಮರಳಿ ಕಳುಹಿಸಿದರು. ಇದರಿಂದಾಗಿ ಕೋಪಗೊಂಡ ಮಹಿಳೆಯರು, ಬಡವರಿಗೆ ವಿತರಿಸಲು ಸರ್ಕಾರ ಕೊಟ್ಟ ಆಹಾರದ ಕಿಟ್ಗರಳನ್ನು ಇವರೇ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಕರ್ನಾಟಕದಲ್ಲಿ ಮತ್ತೆ ಕೊರೊನಾ ವೈರಸ್ ಸೋಂಕಿನ ಹಾವಳಿ..!

ರಾಜ್ಯದಲ್ಲಿ ಒಂದೇ ದಿನದಲ್ಲಿ 760 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. 331 ಸೋಂಕಿತರು ಗುಣಮುಖರಾಗಿದ್ದು, ಆರು ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.

ನೀಟ್ ನಲ್ಲಿ ಒಬಿಸಿಯವರಿಗೆ ಮೀಸಲಾತಿ ನೀಡಿ: ಪ್ರಿಯಾಂಕ ಗಾಂಧಿ

ದೆಹಲಿ: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವೈದ್ಯಕೀಯ ಸಂಸ್ಥೆಗಳಲ್ಲಿ ನೀಟ್ ಪರೀಕ್ಷೆ ಬರೆಯಲು ಅರ್ಹ ಒಬಿಸಿ…

ಪತ್ನಿ ಮತ್ತು ಮಗುವನ್ನು ಕೊಂದ ಪಾಪಿಗೆ ಜೀವಾವಧಿ ಶಿಕ್ಷೆ

ಉತ್ತರಪ್ರಭ ಸುದ್ದಿ ಗೋನಾಳ ಗ್ರಾಮದಲ್ಲಿ ಆರೋಪಿ ರಮೇಶ ದುಂಡಪ್ಪ ತೇಲಿ ಇವನು ಹೆಂಡತಿ ಮೇಲೆ ಸಂಶಯ…

ಉಸಿರಾಟ ತೊಂದರೆಯಿಂದ ನಟ ಚಿರಂಜೀವಿ ಸರ್ಜಾ ಸಾವು..!

ನಟ ಚಿರಂಜೀವಿ ಸರ್ಜಾ ಉಸಿರಾಟದ ತೊಂದರೆ ಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದರು.