ತುಮಕೂರು: ನಾನು ಕೂಡ ಸ್ವಾಭಿಮಾನಿ, ಹಾಗಂತ ನಮ್ಮ ನಾಯಕರು ನನ್ನನ್ನು ಕರೆದು ರೈತ ಮಹಿಳೆಯ ವಿಚಾರವಾಗಿ ರಾಜೀನಾಮೆ ಕೇಳಿದ್ರೆ ಒಂದು ಕ್ಷಣವೂ ಸುಮ್ಮನಿರೋದಿಲ್ಲ. ಇನ್ನು ಈ ಘಟನೆಯಿಂದ ಹೆಣ್ಣು ಮಕ್ಕಳ ಮನಸ್ಸಿಗೆ ನೋವಾಗಿದ್ರೆ ನಾನು ಅಪಾಲಜಿ ಕೇಳುತ್ತೇನೆ ಎಂದು ಸಚಿವ ಮಧುಸ್ವಾಮಿ ಹೇಳಿದರು.
ಈ ಕುರಿತು ತುಮಕೂರಿನಲ್ಲಿ ಮಾತನಾಡಿದ ಅವರು
ನಾವು ಆ ಭಾಗಕ್ಕೆ ನೀರು ಸಿಕ್ತಿಲ್ಲ ಎಂಬ ಕಾರಣಕ್ಕೆ ಅಲ್ಲಿಗೆ ಹೋಗಿದ್ವಿ, ಚಿಂತಾಮಣಿಯಲ್ಲಿ ಕೆರೆಗೆ ನೀರು ಬಿಡುವ ವಿಚಾರಕ್ಕೆ ಪರಿಶೀಲನೆಗಾಗಿ ತೆರಳಿದ್ವಿ. ಅಲ್ಲಿಗೆ ಒಂದಷ್ಟು ಜನ ಬಂದು ಸೇರಿದರು. ಅವರು ರೈತಸಂಘದವರೆಂದು ನಮಗೆ ಗೊತ್ತಿರಲಿಲ್ಲ. ಅಲ್ಲಿದ್ದ ಈ ಮಹಿಳೆ 130 ಎಕರೆ ಒತ್ತುವರಿಯಾಗಿದೆ ಎಂದು ಮಾತನಾಡಿದರು. ಆಗ ನಾನು ಸೆಕ್ರೆಟಯವರಿಗೆ ಇದಕ್ಕೆ ನಿಮ್ಮ ಉತ್ತರ ಹೇಳಿ ಎಂದು ಕೇಳಿದೆ. ಆಗ ಮಹಿಳೆ ನನಗೇ ಜೋರಾಗಿ ಮಾತನಾಡಿದರು. ಆಗ ನಾನು, ಏನಮ್ಮ ಈ ಪ್ರಶ್ನೆ ನನ್ನ ಕೇಳ್ತಿಯ ಅಂತ ಕೇಳ್ದೆ. ಮತ್ತೆ ಏನ್ರಿ ಮಾಡ್ತಿದ್ದೀರಿ? ಅಂತ ನನ್ನನ್ನೇ ಕೇಳಿದ್ರು. ನನಗೂ ಸ್ವಾಭಿಮಾನವಿದೆ. ನೋಡಮ್ಮ ನಾನು ಕೆಟ್ಟವನು, ನೀನು ಸ್ವಲ್ಪ ರಿಕ್ವೆಸ್ಟ್ ಮಾಡಿಕೊಬೇಕು. ಈ ರೀತಿ ಆದೇಶ ಕೊಡಲಿ ಅಂತ ನಾನು ಬಂದಿಲ್ಲ. ಅಂತ ಸಿಟ್ಟಿನಲ್ಲಿ ಮುಚ್ಚಮ್ಮ ಬಾಯಿ ರಾಸ್ಕಲ್ ಅಂತ ಹೇಳಿದೆ ಎಂದರು.
ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿ ನಾನೇಕೆ ರಾಜೀನಾಮೆ ನೀಡಬೇಕು? ನನ್ನನ್ನು ತಬ್ಬಿಕೊಂಡು ಯಾವ ಮಹಿಳೆಯೂ ಮುತ್ತುಕೊಟ್ಟಿಲ್ಲ! ಎಂದು ವ್ಯಂಗ್ಯವಾಡಿದರು.

Leave a Reply

Your email address will not be published. Required fields are marked *

You May Also Like

ಕೆಎಎಸ್ ಅಧಿಕಾರಿ ಸುಧಾ ಅವರ ಮನೆಯಲ್ಲಿ ಸಿಕ್ಕ ಚಿನ್ನಾಭರಣ ಎಷ್ಟು ಗೊತ್ತಾ?

ಬೆಂಗಳೂರು : ಕೆಎಎಸ್ ಅಧಿಕಾರಿ ಡಾ. ಸುಧಾ ಅವರ ಮನೆಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ದಾಳಿ ನಡೆಸಿದ್ದು, ಬರೋಬ್ಬರಿ 3.7 ಕೆಜಿ ಚಿನ್ನ ಹಾಗೂ 10.5 ಕೆಜಿ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಸರಿಯಾಗಿ ಕರ್ತವ್ಯ ನಿರ್ವಹಿಸದ ಸೂಪರ್ ಸ್ಪೆಷಾಲಿಟಿ ವೈದ್ಯರುಗಳ ವಿರುದ್ಧ ಕಠಿಣ ಕ್ರಮ – ಡಾ.ಸುಧಾಕರ್

ರಾಯಚೂರು: ಒಪೆಕ್ ಆಸ್ಪತ್ರೆಯನ್ನು ದುಃಸ್ಥಿತಿಯಿಂದ ಮುಕ್ತಗೊಳಿಸಿ ಅದನ್ನು ಗುಣಮಟ್ಟದ ಶ್ರೇಷ್ಠ ಆಸ್ಪತ್ರೆಯಾಗಿ ಪರಿವರ್ತಿಸಲು ಶ್ರಮಿಸುವಂತೆ ವೈದ್ಯಕೀಯ…

ಮೋದಿ ಸಭೆಗೆ ಹಾಜರಾಗದ ದೀದಿ!

ಕೋಲ್ಕತ್ತಾ: ಕೇಂದ್ರ ಸರ್ಕಾರದ ವಿರುದ್ಧ ಸದಾ ಕಾಲ ಗುಡುಗುತ್ತಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ,…

ಗದಗ ಸಮಾಜ ಕಲ್ಯಾಣ ಇಲಾಖೆಯ ವಿವಿಧ ವಸತಿ ನಿಲಯಗಳಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜರ 283 ನೇ ಜಯಂತಿಯ ಆಚರಣೆ

ಗದಗ:PPG SC/ST ವಸತಿ ನಿಲಯ ಗದಗದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಿಸಲಾಯಿತು.ಈ ಸಂದರ್ಭದಲ್ಲಿ…