ಬೆಂಗಳೂರು: ರೈತರು ಕೋವಿಡ್ ಸಂದರ್ಭದಲ್ಲಿಯೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ ಕೃಷಿ ಅಧಿಕಾರಿಗಳು ಸಹ ಕೊರೊನಾ ವಾರಿಯರ್ಸ್‌ಗಳಂತೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಕಾಸಸೌಧದಲ್ಲಿ ನಡೆದ‌ 2020-21ನೇ ಸಾಲಿನ‌ ಮುಂಗಾರು ಹಂಗಾಮು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿ ಇಲಾಖೆ ಮುಳ್ಳಿನ ಹಾಸಿಗೆ ಇದ್ದಂತೆ. ಬಹಳಷ್ಟು ಸವಾಲುಗಳು ಈ ಇಲಾಖೆಯಲ್ಲಿ ಬರುತ್ತವೆ. ಕೃಷಿ ಮತ್ತು ರೈತರಿಗಾಗಿ ದುಡಿಯುವ ಅವಕಾಶ ತಮಗೆ ಲಭಿಸಿದೆ. ಕೃಷಿ ಇಲಾಖೆಯಲ್ಲಿ ಅಭಿವೃದ್ಧಿಗಳಾದರೆ ಸರ್ಕಾರಕ್ಕೂ ಹೆಸರು ಬರುತ್ತದೆ. ದೇಶದ ಜನರಿಗೆ ಅನ್ನವೂ ಸಿಗುತ್ತದೆ. ಕೋವಿಡ್ ಸಂದಿಗ್ಧತೆ ಎನ್ನುವುದು ಯುದ್ಧದಂತೆ‌ ಎಂದರು.

ಕೈಕೊಟ್ಟ ಸೋಯಾ ಬೆಳೆ
ಸೋಯಾಬಿನ್ ಮಧ್ಯಪ್ರದೇಶ ಹಾಗೂ ಆಂದ್ರದಿಂದ ಪೂರೈಕೆಯಾಗುತ್ತಿತ್ತು. ಸುಗ್ಗಿ ಸಂದರ್ಭದಲ್ಲಿ ಫ್ಲಡ್ ಬಂದಿರುವುದರಿಂದ ಬಹಳ ಕಡೆ ಸೋಯಾಬೀನ್ ಬೆಳೆ ಬಂದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಈ ಬಾರಿ ರೈತರು ಸೋಯಾ ಬೆಳೆಯುವುದಕ್ಕೂ ಮೊದಲೇ ಭೂಮಿ ಮತ್ತು ವಾತಾವರಣವನ್ನು ನೋಡಿಕೊಂಡು ಮುಂದಾಗಬೇಕು. 1.5 ಲಕ್ಷ ಕ್ವಿಂಟಾಲ್ ಸೋಯಾಬೀನ್ ಬೀಜಕ್ಕೆ ಬೇಡಿಕೆ ಇತ್ತು. ಈಗಾಗಲೇ 1.04 ಲಕ್ಷ ಕ್ವಿಂಟಾಲ್ ಪೂರೈಸಿದ್ದೇವೆ. ಕಳೆದ ಬಾರಿಯ ಪ್ರವಾಹದಿಂದಾಗಿ ಸೋಯಾ ಫಸಲು ಈ ಬಾರಿ ಉತ್ತಮವಾಗಿ ಬರುವುದು ಅನುಮಾನ‌. ಮುನ್ನೆಚ್ಚರಿಕೆ ಕ್ರಮವಾಗಿ ರೈತರು ತಮ್ಮ ಭೂಮಿ ಮತ್ತು ಪೂರಕ ವಾತಾವರಣಕ್ಕೆ ಅನುಗುಣವಾದ ಪರ್ಯಾಯ ಬಿತ್ತನೆಗೆ ಮುಂದಾಗಲಿ ಎಂದು ಸಲಹೆ ನೀಡಿದರು.

ಭೂಮಿ ಮಾರಾಟಕ್ಕೆ ಮಾರ್ಗಸೂಚಿ

ಕರ್ನಾಟಕದಲ್ಲಿ ಮಾತ್ರ ಕೃಷಿ ಭೂಮಿ ಮಾರಾಟಕ್ಕೆ ನಿಬಂಧನೆ ಇತ್ತು. ಈಗ ಮಾರಾಟಕ್ಕೆ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕೃಷಿ ಭೂಮಿ ಮಾರಾಟದ ಬಗ್ಗೆ ಸರ್ಕಾರ ಕಂದಾಯ ಇಲಾಖೆ ಮಾರ್ಗಸೂಚಿ ನಿಯಮಗಳನ್ನು ರೂಪಿಸಿ ಆದೇಶ ಹೊರಡಿಸಲಿದೆ.

ಕೋವಿಡ್‌ನಿಂದ ಪರಿಸ್ಥಿತಿಯೇ ಬದಲಾಗಿದೆ.
ವರ್ಷಕ್ಕೆ ಕೃಷಿ ವಿಶ್ವವಿದ್ಯಾಲಯದಿಂದ ನಾಲ್ಕು ಲಕ್ಷ ಪದವೀಧರರು ಹೊರಬರುತ್ತಿದ್ದಾರೆ. ಎಲ್ಲರಿಗೂ ಉದ್ಯೋ ಕಷ್ಟ.ಇಂತಹ ಪದವೀಧರರು ಈ ಹೊಸ‌ನಿಯಮದಿಂದ ಕೃಷಿಯತ್ತ ಆಕರ್ಷಕವಾಗಿ ಕೃಷಿಯಲ್ಲಿ ಆಗ್ರೋ ಇಂಡಸ್ಟ್ರೀಸ್‌ಗೂ ಕೃಷಿ ಭೂಮಿ ಅನುಕೂಲವಾಗಲಿದೆ. ಸಂಸ್ಕರಣಾ ಘಟಕ ಶೀಥಲೀಕರಣ ಆಹಾರ ಉತ್ಪಾದನಾ ಘಟಕಗಳಿಗೂ ಇದು ಬಳಕೆಯಾಗಬಹುದು.ಕೃಷಿ ಭೂಮಿ ಕೃಷಿಗೆ ಕೃಷಿ ಚಟುವಟಿಕೆಗಳಿಗೆ ಪೂರಕವಾಗಬೇಕು. ಕೃಷಿಭೂಮಿ ದುರ್ಬಳಕೆಯಾಗಬಾರದು ಎಂದು ಬಿ.ಸಿ.ಪಾಟೀಲರು ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *

You May Also Like

ಎಸ್.ಎಸ್.ಎಲ್.ಸಿ-ಪಿಯುಸಿ ಪರೀಕ್ಷೆ ವೇಳಾಪಟ್ಟಿ: ಪಾಲಕ, ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ..

ರಾಜ್ಯದಲ್ಲಿ ಜೂನ್ 25 ರಿಂದ ಜುಲೈ 4 ರವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ಹಾಗೂ ಜೂನ್ 18 ಕ್ಕೆ ಪಿಯುಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಇನ್ಮುಂದೆ ಪೊಲೀ‍‍ಸರಿಗೆ ವಾರದ ರಜೆ ಕಡ್ಡಾಯ

ಪೊಲೀಸರಿಗೆ ವಾರದ ರಜೆ ಕಡ್ಡಾಯಗೊಳಿಸುವಂತೆ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್​ ಸುತ್ತೋಲೆ ಹೊರಡಿಸಿದ್ದಾರೆ. ತುರ್ತು ಪರಿಸ್ಥಿತಿ ಬಿಟ್ಟು ಎಲ್ಲ ಸಂದರ್ಭದಲ್ಲಿ ವಾರದ ರಜೆ‌ ಕಡ್ಡಾಯವಾಗಿ ನೀಡಬೇಕು ಎಂದು ವಲಯ ಐಜಿಪಿ ಮತ್ತು ಎಸ್ ಪಿ ಗಳಿಗೆ ಆದೇಶ ಹೊರಡಿಸಿದ್ದಾರೆ.

ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ 6 ತಿಂಗಳ ಕೋವಿಡ್ ರಿಸ್ಕ್ ಭತ್ಯೆ

ಬೆಂಗಳೂರು: ಕೊರೋನಾ 2ನೇ ಅಲೆಯ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಮೊದಲ ಅಲೆಯಲ್ಲಿ ನೀಡಲಾಗಿದ್ದ ಕೋವಿಡ್ ರಿಸ್ಕ್ ಭತ್ಯೆಯನ್ನು ನಿಲ್ಲಿಸಲಾಗಿತ್ತು. ಆದರೆ ಇದೀಗ ಮತ್ತೆ ಸರ್ಕಾರ ಕೋವಿಡ್ ರಿಸ್ಕ್ ಭತ್ಯೆಯನ್ನು ಆರು ತಿಂಗಳ ಕಾಲ ನೀಡಲು ಮುಂದಾಗಿದೆ.

ಸರಕಾರಿ ಶಾಲೆಗೆ ಬೀಗ ಜಡಿದು ಗ್ರಾಮಸ್ಥರ ಅನಿರ್ಧಿಷ್ಟಾವಧಿ ಧರಣಿ

ಉತ್ತರಪ್ರಭ ಸುದ್ದಿ ಮಸ್ಕಿ: ತಾಲೂಕಿನ ಉಸ್ಕಿಹಾಳ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಗ್ರಾಮಸ್ತರು ಮತ್ತು ವಿದ್ಯಾರ್ಥಿಗಳು…