ಬೆಂಗಳೂರು: ಇಂದು ಮೂರನೇ ಹಂತದ ಲಾಕ್ ಡೌನ್ ಕೊನೆಗೊಳ್ಳಲಿದೆ. ನಾಳೆಯಿಂದ ಹೊಸ ಸ್ವರೂಪದಲ್ಲಿ ಲಾಕ್ಡೌನ್ ಜಾರಿಯಾಗಲಿದೆ.

ಲಾಕ್ಡೌನ್ ಕಠಿಣವಿದ್ದಷ್ಟು ದಿನ ಸೋಂಕಿತರ ಸಂಖ್ಯೆ ಕಡಿಮೆಯಿತ್ತು. ಆದರೆ ಲಾಕ್ಡೌನ್ ಸಡಿಲಿಕೆಯಾದ ನಂತರ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆಯೇ ಮೂರನೇ ಹಂತದ ಲಾಕ್ ಡೌನ್ ಮುಗಿಯುತ್ತಿದೆ. ಕಂಟೈನ್ಮೆಂಟ್ ಝೋನ್ ಗಳಿಗಷ್ಟೇ ಲಾಕ್ಡೌನ್ ಎನ್ನಲಾಗುತ್ತಿದೆ.

ನಾಳೆಯಿಂದ ಬೆಂಗಳೂರಿನಲ್ಲಿ ಷರತ್ತುಬದ್ಧವಾಗಿ ಬಿಎಂಟಿಸಿ ಬಸ್ ಓಡಾಟಕ್ಕೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ. ಇದಕ್ಕೆ ಪೂರಕವಾಗಿ ಎಲ್ಲಾ ಬಸ್ ಡಿಪೋಗಳಲ್ಲಿ ಚಾಲಕರು ಹಾಗೂ ನಿರ್ವಾಹಕರ ಫಿಟ್ನೆಸ್ ಪರೀಕ್ಷೆ ನಡೆದಿದೆ.

ನಾಳೆಯಿಂದ ಬಿಎಂಟಿಸಿ ಬಸ್ ಗಳ ಓಡಾಟಕ್ಕೆ ಸರ್ಕಾರ ಸಿದ್ಧತೆ ಮಾಡಿಕೊಂಡಿದ್ದು, ಮೇ 18ರಿಂದ ಎಲ್ಲ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಬಸ್ ಗಳ ಜೊತೆಗೆ ಆಟೋ ಓಡಾಟ ನಡೆಸುವ ಸಾಧ್ಯತೆ ಇದೆ. ಟ್ಯಾಕ್ಸಿ, ಓಲಾ, ಊಬರ್ ಓಡಾಡಬಹುದು. ಜಿಮ್, ಸ್ಪಾ, ಸಲೂನ್ ಅಂಗಡಿಗಳಿಗೆ ಅನುಮತಿ ಸಿಗುವ ಸಾಧ್ಯತೆ ಇದೆ.

ಆದರೆ, ಥಿಯೇಟರ್, ಶಾಪಿಂಗ್ ಮಾಲ್, ಕಾಂಪ್ಲೆಕ್ಸ್, ಸ್ಪೋರ್ಟ್ಸ್, ದೇಗುಲ, ಜಾತ್ರೆ, ಸಂತೆ, ಧಾರ್ಮಿಕ ಉತ್ಸವ, ರಾಜಕೀಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇನ್ನೂ ಅನುಮತಿ ಸಿಗದೆ ಇರಬಹುದು.

Leave a Reply

Your email address will not be published. Required fields are marked *

You May Also Like

ಮೂರ್ತಿ ತೆರವಿಗೆ ಖಂಡನೆ: ರಾಯಣ್ಣ ಅಭಿಮಾನಿ ಬಳಗದಿಂದ ಮನವಿ

ಬೆಳಗಾವಿ ಜಿಲ್ಲೆಯ ಪೀರನವಾಡಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ತೆರವುಗೊಳಿಸದ್ದನ್ನು ಖಂಡಿಸಿ ತಾಲೂಕು ಕುರುಬರ ಸಂಘ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ಸೋಮವಾರ ಮನವಿ ಸಲ್ಲಿಸಲಾಯಿತು.

ಕಾಂಗ್ರೆಸ್ ನ ತಂತ್ರ-ಕುತಂತ್ರಗಳನ್ನು ಛಿದ್ರ ಮಾಡುತ್ತೇವೆ: ಸಚಿವ ಶ್ರೀರಾಮುಲು

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ತಂತ್ರ-ಕುತಂತ್ರಗಳನ್ನು ಬಿಜೆಪಿ ಪಕ್ಷ ಛಿದ್ರ ಮಾಡುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದರು.

ಕೊನೆಗೂ ರೈತ ಮಹಿಳೆಗೆ ಕ್ಷಮೆ ಕೇಳಿದ ಸಚಿವ

ತುಮಕೂರು: ನಾನು ಕೂಡ ಸ್ವಾಭಿಮಾನಿ, ಹಾಗಂತ ನಮ್ಮ ನಾಯಕರು ನನ್ನನ್ನು ಕರೆದು ರೈತ ಮಹಿಳೆಯ ವಿಚಾರವಾಗಿ…

ಗ್ರಾಮ ಪಂಚಾಯತಿ ಚುನಾವಣೆ: ಅಭಿಪ್ರಾಯ ಸಲ್ಲಿಕೆಗೆ ಚುನಾವಣಾ ಆಯೋಗ ನಿರ್ದೇಶನ

ಪಂಚಾಯತಿ ಅವಧಿ ಮುಕ್ತಾಯಗೊಳ್ಳುವ ಮುಂಚಿತವಾಗಿ ಹೊಸದಾಗಿ ಪಂಚಾಯತಿಗಳನ್ನು ರಚಿಸಲು ಚುನಾವಣೆ ನಡೆಸಬೇಕಾಗಿರುತ್ತದೆ. ಕರ್ನಾಟಕ ಗ್ರಾಮ್ ಸ್ವರಾಜ್ ಅಧಿನಿಯಮದ ಪ್ರಕಾರ ರಾಜ್ಯ ಚುನಾವಣಾ ಆಯೋಗವು ಪಂಚಾಯತಿಯ ಅವಧಿಯು ಪೂರ್ಣಗೊಳ್ಳುವುದಕ್ಕೆ ಮೊದಲು ಚುನಾವಣಾ ಪ್ರಕ್ರಿಯೇಯನ್ನು ಪೂರ್ಣಗೊಳಿಸಬೇಕಾಗಿರುತ್ತದೆ.