ಧಾರವಾಡ: ಆಸ್ತಿ ವಿವಾದ ಕೊಲೆಯಲ್ಲಿ ಅಂತ್ಯವಾದ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.

ಮೇ. 15ರಂದು ಈ ಕೊಲೆ ನಡೆದಿದ್ದು, ಕೊಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಉಮೇಶ್ ಬಾಳಗಿ (39) ಕೊಲೆಯಾದ ವ್ಯಕ್ತಿ. ಚೆನ್ನಬಸಪ್ಪ ಬಾಳಗಿ ಮತ್ತು ಬಸಪ್ಪ ಬಾಳಗಿ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ವಿಕಲಚೇತನನಾಗಿದ್ದ ಉಮೇಶ್ ತ್ರಿಚಕ್ರ ಬೈಕ್ ಮೇಲೆ ಹೊರಟಿದ್ದ ಸಂದರ್ಭದಲ್ಲಿ ಬಂದ ಆರೋಪಿಗಳು ಕೊಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹತ್ತಿರವೇ ಇದ್ದ ಪತ್ನಿ ಜೋರಾಗಿ ಚೀರಾಡಿ ಜನರನ್ನು ಸೇರಿಸಲು ಪ್ರಯತ್ನಿಸಿದ್ದಾರೆ. ಇದನ್ನು ಕಂಡು ಓರ್ವ ಸುಮಾ ಅವರನ್ನು ಅಟ್ಟಿಸಿಕೊಂಡು ಬಂದಿದ್ದಾನೆ. ಆಗ ಪತ್ನಿ ಸುಮಾ ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ.

ಮೃತ ಉಮೇಶ್ ಮೇಲೆ ಈ ಹಿಂದೆಯೂ ಕೂಡ ಹಲ್ಲೆಯಾಗಿತ್ತು. ಈ ಹಿನ್ನೆಲೆಯಲ್ಲಿ ಉಮೇಶ್ ತನ್ನ ಮನೆ ಹಾಗೂ ಮನೆ ಸುತ್ತ ಸಿಸಿಟಿವಿ ಅಳವಡಿಸಿದ್ದರು. ಇದೀಗ ಸಿಸಿಟಿವಿಯ ಮೂಲಕ ಅವರ ಕೊಲೆ ರಹಸ್ಯ ಬಯಲಾಗಿದೆ. ಈ ಕುರಿತು ಮೃತನ ಪತ್ನಿ ಚೆನ್ನಬಸಪ್ಪ ಬಾಳಗಿ ಮತ್ತು ಬಸಪ್ಪ ಬಾಳಗಿ ಮೇಲೆ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಶಿರಹಟ್ಟಿ ತಾಲೂಕಿನ ಕೇರಹಳ್ಳಿ ಗ್ರಾಮದಲ್ಲಿ ಜೋಡಿ ಹತ್ಯೆ

ಕನ್ಯಾ ನೋಡಲು ಬಂದವನು ತನ್ನ ಜೊತೆಗೊಬ್ಬನನ್ನು ಸ್ಮಶಾನಕ್ಕೆ ಕರೆದೋಯ್ದ. ಕನ್ನ್ಯೆ ಯನ್ನು ನೋಡಿ ಬಂದು ನಗುನಗುತ್ತಲೆ…

ಸರಕಾರ ಮಂಜಪ್ಪ ಹಡೇ೯ಕರ ಉತ್ಸವ ಆಚರಿಸಲಿ- ಶಂಕರ ಜಲ್ಲಿ

ಆಲಮಟ್ಟಿ : ಅನ್ನದಾಸೋಹ, ಖಾದಿಧಾರಿ, ಪತ್ರಕರ್ತ, ಸಂಪಾದಕರಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ವಿಶೇಷ ಕೊಡುಗೆ ನೀಡಿದ ಅನರ್ಘ್ಯ…

ಕಣ್ಮನ ಸೆಳೆದ ಗೊಂಬೆಗಳ ಕುಣಿತ- ಗಣೇಶ ವಿಸರ್ಜನೆ ರಂಗು…!

ವರದಿ: ಗುಲಾಬಚಂದ ಜಾಧವ ಉತ್ತರಪ್ರಭ ಸುದ್ದಿಆಲಮಟ್ಟಿ: ಬ್ರಹತ್ತಾಕಾರದ ರಂಗು ರಂಗಿನ ಗೊಂಬೆಗಳ ನಲಿದಾಟ. ಹಲಿಗೆ ವಾದ್ಯ…

ಮಹಾರಾಷ್ಟ್ರದಲ್ಲಿ ಕೊರೋನಾ ಪಾಸಿಟಿವ್ 11,506ಕ್ಕೆ ಏರಿಕೆ

ಮಹಾರಾಷ್ಟ್ರ ಒಂದೇ ರಾಜ್ಯದಲ್ಲಿ ಒಂದೇ ದಿನ 1008 ಜನರಲ್ಲಿ ವೈರಸ್ ಪತ್ತೆಯಾಗಿದೆ. ಈ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಪ್ರತೀನಿತ್ಯ ಏರಿಕೆಯಾಗುತ್ತಲೇ ಇದೆ. ಈವರೆಗೆ ಮಹಾರಾಷ್ಟ್ರದಲ್ಲಿ ಪತ್ತೆಯಾದ ಕೊರೋನಾ ಪಾಸಿಟಿವ್ ಸಂಖ್ಯೆ ಎಷ್ಟು ಗೊತ್ತಾ..?