ತುಮಕೂರು: ಪತಿಯ ಮೇಲೆ ಪತ್ನಿಯೇ ಬಿಸಿಯಾದ ಮಟನ್ ಸಾಂಬಾರ್ ಸುರಿದು ಹಲ್ಲೆಗೆ ಯತ್ನಿಸಿದ ಘಟನೆ ತಿಪಟೂರು ತಾಲ್ಲೂಕಿನ ರಂಗಾಪುರ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ರಂಗಾಪುರ ಗ್ರಾಮದ ವ್ಯಕ್ತಿ ಗಂಗಾಧರ್ (55) ಹಲ್ಲೆಗೊಳಗಾದ ಪತಿ. ಈತನ ಮೇಲೆ ಪತ್ನಿ ತಾರಾ, ಸಾಂಬಾರ್ ಸುರಿದು ಹಲ್ಲೆಗೆ ಯತ್ನಿಸಿದ್ದಾಳೆ.

ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ಗಂಗಾಧರ್ ಹಾಗೂ ತಾರಾ ವಿವಾಹವಾಗಿದ್ದು, ಅಲ್ಲಿಂದಲೂ ತನ್ನ ಪತಿಗೆ ತಾರಾ ಕಿರುಕುಳ ನೀಡುತ್ತಿದ್ದಳು ಎನ್ನಲಾಗಿದೆ. ಆದರೆ, ಇದನೆಲ್ಲ ಸಹಿಸಿಕೊಂಡ ಗಂಗಾಧರ್ ಮನೆ ಬಿಟ್ಟು ಹೋಗದೆ ಹೆಂಡ್ತಿ ಕಾಟ ಸಹಿಸಿಕೊಂಡು ಸುಮ್ಮನಿದ್ದ.

ಆದರೆ, ಕಳೆದ ರಾತ್ರಿ ಮಾತ್ರ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಊಟಕ್ಕೆ ಕುಳಿತ್ತಿದ್ದ ಗಂಗಾಧರ್‌ನ ಮೇಲೆ ಪತ್ನಿ ತಾರಾ ಬಿಸಿ ಬಿಸಿಯಾದ ಮಟನ್ ಸಾಂಬಾರ್ ಸುರಿದು ಹಲ್ಲೆ ಮಾಡಲು ಯತ್ನಿಸಿದ್ದಾಳೆ. ಹೀಗಾಗಿ ಘಟನೆಯಲ್ಲಿ ಗಂಗಾಧರ್‌ಗೆ ಮುಖ ಸೇರಿದಂತೆ ದೇಹದ ಕೆಲವು ಭಾಗಗಳು ಸುಟ್ಟು ಹೋಗಿದ್ದು, ಆತನೀಗ ತಿಪಟೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You May Also Like

ನಟ ಚಿರು ಸಮಾಧಿಗೆ ಕುಟುಂಬಸ್ಥರಿಂದ ಪೂಜೆ

ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾಗಿ ಹಿನ್ನಲೆಯಲ್ಲಿ ಕುಟುಂಬಸ್ಥರು ಬೆಂಗಳೂರಿನ ಹೊರವಲಯ ಕನಕಪುರದಲ್ಲಿರುವ ಧ್ರುವ ಸರ್ಜಾ ಫಾರ್ಮ್ ಹೌಸ್ಗೆ ತೆರಳಿ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.

ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸೋಣ ಎಂದ ಉಭಯ ದೇಶಗಳು!

ನವದೆಹಲಿ: ಲಡಾಖ್ ಪ್ರದೇಶದ ಗಾಲ್ವಾನ್‌ ಕಣಿವೆಯಲ್ಲಿ ಪೂರ್ವ ನಿಯೋಜಿತರಾಗಿ ಚೀನಾ ಸೈನಿಕರು ನಮ್ಮ ಸೈನಿಕರ ಮೇಲೆ…

ರಾಜ್ಯದಲ್ಲಿಂದು 2228 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು?

ಬೆಂಗಳೂರು: ರಾಜ್ಯದಲ್ಲಿಂದು 2228 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಒಟ್ಟು‌ ಸೋಂಕಿತರ ಸಂಖ್ಯೆ 31105…