ಗದಗ: ಲಾಕ್ ಡೌನ್ ಹಿನ್ನೆಲೆ ಅದೆಷ್ಟೋ ಜನ ಒಂದಲ್ಲ ಒಂದು ಕಾರಣಕ್ಕೆ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿ ವೃದ್ಧನೊಬ್ಬ ಗೋಳಾಟ ಇದಕ್ಕೊಂದು ಉದಾಹರಣೆ.

ಇತ್ತಿಚೆಗಷ್ಟೆ ತನ್ನ ಮೊಮ್ಮಗಳನ್ನು ನೋಡಿಕೊಂಡು ಬರಲು ಗಜೇಂದ್ರಗಡ ಸಮೀಪದ ಪೋತನಾಳ ಗ್ರಾಮಕ್ಕೆ ವೃದ್ಧ ಬಿಜ್ಜಪ್ಪ ತೆಳೆದ್ದರು. ಗದುಗಿನ ಈ ವೃದ್ಧನಿಗೆ ಯಾರು ಇಲ್ಲ. ಇರುವ ಮೊಮ್ಮಗಳನ್ನು ಮದುವೆ ಮಾಡಿ ಕೊಟ್ಟ ಪರಿಣಾಮ ಆಕೆಯೂ ಗಂಡನ ಮನೆಯಲ್ಲಿದ್ದಾಳೆ. ಹೀಗಾಗಿ ಹೇಗೋ ಹರಸಾಹಸ ಪಟ್ಟು ಬಿಚ್ಚಪ್ಪ ಮೊಮ್ಮಗಳ ಊರಿಗೆ ಹೋಗಿದ್ದ. ಆದರೆ ಬರೋವಾಗ ಮಾತ್ರ ಯಾರದೋ ಬೈಕ್ ನಲ್ಲಿ ಬಂದಿದ್ದರಿಂದ ಅವರು ಗಜೇಂದ್ರಗಡದ ಇದ್ಗಾ ಬಳಿ ಇಳಿಸಿ ಹೋಗಿದ್ದಾರೆ. ಇದರಿಂದ ದಿಕ್ಕು ತೋಚದಂತಾಗಿ ವೃದ್ಧ ಬಿಚ್ಚಪ್ಪ ಇದ್ಗಾದಲ್ಲೆ ಟಿಕಾಣಿ ಹೋಡಿದ್ದಾರೆ. ಮೂರು ದಿನದಿಂದ ಅನ್ನ ನೀರಿಲ್ಲದೇ ನಿತ್ರಾಣನಾಗಿದ್ದ, ಮೂರನೇ ದಿನಕ್ಕೆ ಅನಿರೀಕ್ಷಿತವಾಗಿ ಯಾರದ್ದೋ ಕಣ್ಣಿಗೆ ಬಿದ್ದ ಪರಿಣಾಮ ಈ ವೃದ್ಧನ ವಿಷಯ ಸ್ಥಳೀಯರಿಗೆ ಗೊತ್ತಾಯಿತು.

ನಂತರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಇದರಿಂದ ಗುಣಮುಖನಾದ ನಂತರ ಬಿಚ್ಚಪ್ಪನನ್ನು ಗದುಗಿನಲ್ಲಿರುವ ತನ್ನ ಮನೆಗೆ ಬಿಡಲಾಯಿತು.

Leave a Reply

Your email address will not be published. Required fields are marked *

You May Also Like

ಸಚಿವ ಸುಧಾಕರ್ ಪತ್ನಿ, ಪುತ್ರಿಗೂ ಕೊರೊನಾ ಪಾಸಿಟಿವ್..!

ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಪತ್ನಿ ಹಾಗೂ ಪುತ್ರಿಗೂ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ…

ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆ ಅಧ್ಯಕ್ಷರಾಗಿ ಸೋಮಣ್ಣ ಬೆಟಗೇರಿ ನೇಮಕ

ಲಕ್ಷ್ಮೇಶ್ವರ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾನವ ಹಕ್ಕುಗಳು ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆ ರಾಜ್ಯ ಆರೋಗ್ಯ ಘಟಕ…

60 ಜನರಿರುವ ಕುಟುಂಬಕ್ಕೆ ಎಂಟ್ರಿ ಕೊಟ್ಟ ಸೋಂಕು!

ಧಾರವಾಡ : ಜಿಲ್ಲೆಯಲ್ಲಿ ಕೊರೊನಾ ಹಾವಳಿ ದಿನದಿಂದ ದಿನಕ್ಕ ಏರಿಕೆಯಾಗುತ್ತಿದೆ.  ನವಲಗುಂದ ತಾಲೂಕಿನ ಶಿರಕೋಳ ಗ್ರಾಮಕ್ಕೂ…

ದೆಹಲಿಯಲ್ಲಿ ಸಮುದಾಯಕ್ಕೆ ಹಬ್ಬಿದ ಸೋಂಕು – ಸಭೆ!

ನವದೆಹಲಿ : ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಭೀತಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ…