ನವದೆಹಲಿ: ಮಹಾಮಾರಿ ಕೊರೊನಾ ಭಾರತದಲ್ಲಿ ತನ್ನ ಉಗ್ರ ಪ್ರತಾಪ ಮುಂದುವರೆಸಿದ್ದು, ದೇಶದಲ್ಲಿ 24 ಗಂಟೆಗಳಲ್ಲಿ 3,904 ಜನರಲ್ಲಿ ಸೋಂಕು ಇರುವುದು ದೃಢ ಪಟ್ಟಿದೆ.

ಸದ್ಯ ದೇಶದಲ್ಲಿ ಸೋಂಕಿತರ ಸಂಖ್ಯೆ 85 ಸಾವಿರ ಗಡಿ ದಾಟಿದೆ. ಈ ಮೂಲಕ ವಿಶ್ವದಲ್ಲಿಯೇ ಮೊದಲ ಬಾರಿಗೆ ಕೊರೋನಾ ವೈರಸ್ ಕಾಣಿಸಿಕೊಂಡ ಚೀನಾವನ್ನು ಭಾರತ ಹಿಂದಿಕ್ಕಿದೆ.

ಇದರ ಜೊತೆಗೆ ಅತೀ ಹೆಚ್ಚು ಸೋಂಕಿತರು ಇರುವ ವಿಶ್ವದ ದೇಶಗಳ ಪೈಕಿ 11ನೇ ಸ್ಥಾನಕ್ಕೆ ಏರಿಕೆ ಕಂಡಿದೆ. 1.16ಲಕ್ಷ ಸೋಂಕಿತರು ಇರುವ ಇರಾನ್ 10ನೇ ಸ್ಥಾನದಲ್ಲಿದೆ. ಇದೇ ಪ್ರಮಾಣದಲ್ಲಿ ಸೋಂಕಿತರು ಪ್ರತಿನಿತ್ಯ ಪತ್ತೆಯಾಗುತ್ತ ಹೋದರೆ, ಇರಾನ್ ದೇಶವನ್ನೂ ಭಾರತ ಹಿಂದಿಕ್ಕುವ ದಿನಗಳು ತೀರಾ ದೂರವೇನೂ ಇಲ್ಲ.

2019ರ ನ.17ರಂದು ಚೀನಾದಲ್ಲಿ ಮೊದಲ ಕೊರೊನಾ ಕೇಸ್ ಪತ್ತೆಯಾಗಿತ್ತು. ಈ ನಡುವೆ ಮೃತರ ಸಂಖ್ಯೆಯಲ್ಲಿ ಭಾರತದ ಚೀನಾ ಮಟ್ಟಕ್ಕೆ ತಲುಪಿಲ್ಲ ಎಂಬುವುದು ತುಸು ಸಮಾಧಾನಕರ ವಿಚಾರವಾಗಿದೆ.

Leave a Reply

Your email address will not be published. Required fields are marked *

You May Also Like

ಮುಂಬೈ ಎಕ್ಸಪ್ರೆಸ್ ನಲ್ಲಿ ಬಂದಿಳಿದರು 124 ಜನ..!

ಮುಂಬೈನಲ್ಲಿದ್ದ ಜನರು ಇಂದು ಮುಂಬೈ-ಗದಗ ಎಕ್ಸಪ್ರೆಸ್ ರೈಲಿನ ಮೂಲಕ ಗದಗ ನಗರಕ್ಕೆ ಆಗಮಿಸಿದರು. ಇದರಲ್ಲಿ 124 ಜನರು ರೈಲಿನ ಮೂಲಕ ನಗರಕ್ಕೆ ಆಗಮಿಸಿದರು.

ಚೀನಾಕ್ಕೆ ಟಾಂಗ್ ನೀಡಿದ ಭಾರತ ಹಾಗೂ ಅಮೆರಿಕ!

ನವದೆಹಲಿ : ಭಾರತ ಹಾಗೂ ಅಮೆರಿಕದ ನಡುವೆ ಮಹತ್ತರವಾದ ರಕ್ಷಣಾ ಒಪ್ಪಂದಗಳಾಗಿವೆ. ಎರಡೂ ರಾಷ್ಟ್ರಗಳ ನಡುವೆ ಮಿಲಿಟರಿ ತಂತ್ರಜ್ಞಾನ, ವರ್ಗೀಕೃತ ಉಪಗ್ರಹ ದತ್ತಾಂಶ ಹಾಗೂ ಸೂಕ್ಷ್ಮ ಮಾಹಿತಿಗಳ ವಿನಿಮಯದ ಕುರಿತು 2+2 ಮಾತುಕತೆ ನಡೆದಿವೆ.

ಕರುನಾಡಲ್ಲಿ ದಾಖಲೆಯ 1502 ಕೊರೊನಾ ಸೋಂಕಿತರು ಪತ್ತೆ!: ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 1502 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಈವರೆಗೆ ದೃಢಪಟ್ಟ ಸೋಂಕಿತರಲ್ಲಿ…

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಂದ ವಿವಿಧ ಸ್ಥಳಗಳ ಪರಿಶೀಲನೆ

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಇಂದು ಭೇಟಿ ನೀಡಿ ಗದಗ ನಗರದಲ್ಲಿ ವಲಸೆ ಕಾರ್ಮಿಕರಿಗೆ ಒದಗಿಸಲಾದ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು.