ಬೆಂಗಳೂರು: ಇಂದಿನ 63 ಪ್ರಕರಣಗಳು ಸೇರಿ ರಾಜ್ಯದಲ್ಲಿ ಪತ್ತೆಯಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 925 ಕ್ಕೆ ತಲುಪಿದೆ. ಇದುವರೆಗೂ 433 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು ಸಾವಿನ ಪ್ರಮಾಣ 31 ತಲುಪಿದೆ. 11 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
24 ಗಂಟೆಗಳಲ್ಲಿ ರಾಜ್ಯದಲ್ಲಿ ಬರೋಬ್ಬರಿ 63 ಕೊರೋನಾ ಸೋಂಕಿನ ಕೇಸ್ ಪತ್ತೆಯಾಗಿವೆ. ಮೇ 12ರ ಸಂಜೆ 5 ಗಂಟೆಗೆ ಆರೋಗ್ಯ ಇಲಾಖೆ ನೀಡಿದ ಕರೋನಾ ಸೋಂಕಿನ ಕುರಿತಾದ ಮಾಹಿತಿ ಪ್ರಕಾರ ಈಗ ರಾಜ್ಯದಲ್ಲಿ 460 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೇ 11 ಸಂಜೆ 05 ರಿಂದ ಮೇ 12 ರ ಸಂಜೆ 05 ರವರೆಗೆ ಪತ್ತೆಯಾದ ಪ್ರಕರಣದಲ್ಲಿ ಬಾಗಲಕೋಟ-15, ದಾವಣಗೆರೆ-12, ಧಾರವಾಡ- 9, ಗದಗ-3 ಕೋಲಾರ ಮತ್ತು ಹಾಸನದಲ್ಲಿ ತಲಾ 5, ಬೀದರ್‌, ದಕ್ಷಿಣ ಕನ್ನಡ ಹಾಗೂ ಯಾದಗಿರಿಯಲ್ಲಿ ತಲಾ 2 ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರದಲ್ಲಿ 4 ಪ್ರಕರಣಗಳು ಪತ್ತೆಯಾಗಿದ್ದು, ಮಂಡ್ಯ, ಕಲಬುರಗಿ, ಬಳ್ಳಾರಿ ಹಾಗೂ ಚಿಕ್ಕ ಬಳ್ಳಾಪುರದಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿವೆ.

Leave a Reply

Your email address will not be published. Required fields are marked *

You May Also Like

ರಾಜ್ಯಕ್ಕೆ ಮುಂಗಾರು ಯಾವಾಗ ಪ್ರವೇಶಿಸುವುದು ಯಾವಾಗ ಗೊತ್ತಾ?

ಪ್ರತಿ ವರ್ಷ ಜೂನ್ 1ಕ್ಕೆ ನೈರುತ್ಯ ಮುಂಗಾರು ಕೇರಳ ಪ್ರವೇಶಿಸಿ ನಂತರ ರಾಜ್ಯಕ್ಕೆ ಆಗಮಿಸುತ್ತಿತ್ತು. ಆದರೆ, ಈ ಬಾರಿ ಜೂ. 5ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ

ವೋಟ್ ಹಾಕಿದರೆ ಮಾತ್ರ ಲಸಿಕೆ ಕೊಟ್ಟು ಪ್ರಾಣ ಉಳಿಸುತ್ತೀರಾ? ಎಂದು ಬಿಜೆಪಿಯನ್ನೇ ಪ್ರಶ್ನಿಸಿದ ವಿಶ್ವನಾಥ್!

ಮೈಸೂರು : ವೋಟ್ ಹಾಕಿ ಉಳಿಸಿದರೆ ಮಾತ್ರ ಜನರನ್ನ ಬದುಕಿಸುತ್ತೀರಾ ಎಂದು ಪ್ರಶ್ನೆ ಮಾಡುವ ಮೂಲಕ ತಮ್ಮ ಪಕ್ಷದ ನಿರ್ಧಾರವನ್ನೇ ಬಿಜೆಪಿ ಶಾಸಕ ಎಚ್. ವಿಶ್ವನಾಥ್ ಪ್ರಶ್ನಿಸಿದ್ದಾರೆ.

ಹೊಳೆಆಲೂರ: ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ಹೊಳೆಆಲೂರ ವಿದ್ಯುತ್ ವಿತರಣಾ ಉಪ-ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳುವುದರಿಂದ ಅಕ್ಟೋಬರ್ 10 ರಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 05 ಘಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ.

ಕಳಸಾಪೂರ ಬಸವಕೇಂದ್ರ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಅವರಿಂದ ಉಪಹಾರ ಸೇವೆ

ಕಳೆದ 50 ದಿನಗಳಿಂದ ರಾಜ್ಯಾದ್ಯಂತ ಲಾಕ್‌ಡೌನ ಕಾರಣ ದಿನಗೂಲಿ ಕಾರ್ಮಿಕರು, ಬಡವರು, ನಿರ್ಗತಿಕರು ತುಂಬಾ ಸಂಕಷ್ಟದಲ್ಲಿದ್ದು ಈ ಕಾರಣದಿಂದ ಕಳಸಾಪೂರ ಬಸವಕೇಂದ್ರ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಗ. ಖಂಡಮ್ಮನವರ ವತಿಯಿಂದ ನಗರದ ಹೆರಿಗೆ ಆಸ್ಪತ್ರೆ ಆವರಣ, ಬೆಟಗೇರಿ ರಂಗಪ್ಪಜ್ಜನ ಮಠದ ಆವರಣ, ನಗರಸಭೆ ಹತ್ತಿರ, ಹೆಲ್ಥಕ್ಯಾಂಪ್‌ನಲ್ಲಿ ಉಪಹಾರ ಸೇವೆ ಮಾಡಲಾಯಿತು.