ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 925 ಕ್ಕೆ ಏರಿಕೆ

ಬೆಂಗಳೂರು: ಇಂದಿನ 63 ಪ್ರಕರಣಗಳು ಸೇರಿ ರಾಜ್ಯದಲ್ಲಿ ಪತ್ತೆಯಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 925 ಕ್ಕೆ ತಲುಪಿದೆ. ಇದುವರೆಗೂ 433 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು ಸಾವಿನ ಪ್ರಮಾಣ 31 ತಲುಪಿದೆ. 11 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
24 ಗಂಟೆಗಳಲ್ಲಿ ರಾಜ್ಯದಲ್ಲಿ ಬರೋಬ್ಬರಿ 63 ಕೊರೋನಾ ಸೋಂಕಿನ ಕೇಸ್ ಪತ್ತೆಯಾಗಿವೆ. ಮೇ 12ರ ಸಂಜೆ 5 ಗಂಟೆಗೆ ಆರೋಗ್ಯ ಇಲಾಖೆ ನೀಡಿದ ಕರೋನಾ ಸೋಂಕಿನ ಕುರಿತಾದ ಮಾಹಿತಿ ಪ್ರಕಾರ ಈಗ ರಾಜ್ಯದಲ್ಲಿ 460 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೇ 11 ಸಂಜೆ 05 ರಿಂದ ಮೇ 12 ರ ಸಂಜೆ 05 ರವರೆಗೆ ಪತ್ತೆಯಾದ ಪ್ರಕರಣದಲ್ಲಿ ಬಾಗಲಕೋಟ-15, ದಾವಣಗೆರೆ-12, ಧಾರವಾಡ- 9, ಗದಗ-3 ಕೋಲಾರ ಮತ್ತು ಹಾಸನದಲ್ಲಿ ತಲಾ 5, ಬೀದರ್‌, ದಕ್ಷಿಣ ಕನ್ನಡ ಹಾಗೂ ಯಾದಗಿರಿಯಲ್ಲಿ ತಲಾ 2 ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರದಲ್ಲಿ 4 ಪ್ರಕರಣಗಳು ಪತ್ತೆಯಾಗಿದ್ದು, ಮಂಡ್ಯ, ಕಲಬುರಗಿ, ಬಳ್ಳಾರಿ ಹಾಗೂ ಚಿಕ್ಕ ಬಳ್ಳಾಪುರದಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿವೆ.

Exit mobile version