ಬೀಜಿಂಗ್: ಕೊರೊನಾಗೆ ಜನ್ಮ ಸಿಕ್ಕಿದ್ದ ವುಹಾನ್ ನಗರದಲ್ಲಿ ಮತ್ತೆ ಕೊರೊನಾ ಕಾಣಿಸಿಕೊಂಡಿದೆ. ಇದರಿಂದಾಗಿ ಮತ್ತೆ ವಿಶ್ವದಲ್ಲಿ ಆತಂಕ ಮನೆ ಮಾಡಿದೆ.

ನಗರದ ಒಂದೇ ಕಾಂಪೌಂಡಿನಲ್ಲಿ ವಾಸಿಸುತ್ತಿದ್ದ ಐವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಸದ್ಯ ಆ ಜಾಗವನ್ನು ಕ್ಲಸ್ಟರ್ ಎಂದು ಗುರುತಿಸಲಾಗಿದೆ. ಒಂದು ತಿಂಗಳ ಹಿಂದೆ ವುಹಾನ್ ನಗರದಲ್ಲಿ ಲಾಕೌಡೌನ್ ತೆರೆಯಲಾಗಿತ್ತು. ಈಗ ಮತ್ತೆ 5 ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕ್ಲಸ್ಟರ್ ರಚಿಸಲಾಗಿದೆ.

ಈ ಹಿಂದೆ ಏಪ್ರಿಲ್ 3 ರಂದು ವುಹಾನ್ ನಗರದಲ್ಲಿ ಕೊನೆಯದಾಗಿ ಸೋಂಕು ಕಾಣಿಸಿಕೊಂಡಿತ್ತು. ಆದಾದ ಬಳಿಕ ಮತ್ತೆ ಸದ್ಯ ಐವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಈ ಜಾಗವನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

ಶುಕ್ರವಾರ ಚೀನಾ ಸರ್ಕಾರ ಸಿನಿಮಾ ಮಂದಿರ, ಮ್ಯೂಸಿಯಂಗಳನ್ನು ತೆರೆಯಲು ಅನುಮತಿ ನೀಡಲಾಗುವುದು ಎಂದು ಹೇಳಿತ್ತು. ಈ ಎಲ್ಲ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.

Leave a Reply

Your email address will not be published. Required fields are marked *

You May Also Like

ಒಂದು ಮಶಿನ್ ಹೊತ್ತ ಟ್ರಕ್: ಮಹಾರಾಷ್ಟ್ರದಿಂದ ಕೇರಳ ತಲುಪಲು ಒಂದು ವರ್ಷ!

ಎಷ್ಟೊತ್ತೋ ಬರಾದು? ನಡಕೊಂಡ್ ಬರಾಕ್ ಹತ್ತೀಯನು?’ ಅಂತೀವಲ್ಲ ಹಂಗಾತಿದು. ಕೇರಳದಲ್ಲಿರುವ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಬೃಹತ್ ಯಂತ್ರವೊಂದನ್ನು ಮಹಾರಾಷ್ಟ್ರದ ನಾಸಿಕ್ ನಲ್ಲಿ ತಯಾರಿಸಲಾಯಿತು. ಅದರ ತೂಕ, ಎತ್ತರ ಮತ್ತು ಅಗಲದ ಕಾರಣದಿಂದ ಅದನ್ನು ಕೇರಳಕ್ಕೆ ಸಾಗಿಸುವುದೇ ಇಂದು ದೊಡ್ಡ ಸವಾಲಾಗಿತ್ತು. ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಸೂಕ್ಷ್ಮ ಭಾಗಗಳನ್ನು ಒಳಗೊಂಡಿದ್ದರಿಂದ ಹುಷಾರಾಗಿ ಮತ್ತು ನಾಜೂಕಾಗಿ ಅದನ್ನು ಸಾಗಿಸಿ ತರಲಾಗಿದೆ.

ಗದಗನಲ್ಲಿ ‌ಮತ್ತೊಂದು ಕೊರೊನಾ ಪಾಸಿಟಿವ್..!

ಜಿಲ್ಲೆಯ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಬೆಂಗಳೂರಿನಲ್ಲಿ ಪತ್ತೆಯಾಗಿದೆ. P-4079 ರೋಗಿ ಗದಗನ ನಗರದ ನಿವಾಸಿಯಾಗಿದ್ದು ಇತ್ತಿಚೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಮಗಳ ಮದುವೆಗೆ ಕೂಡಿಟ್ಟ ಹಣ ಆಕ್ಸಿಜನ್ ಖರಿದಿಗೆ ದೇಣಿಗೆ ನೀಡಿದ ರೈತ

ಕೊರೋನಾ ಲಾಕ್ ಡೌನ್ ಸಮಯದಲ್ಲಿ ಎಲ್ಲರೂ ಕೈಚೆಲ್ಲಿ ಕೂತಿರುವಾಗ, ಇಲ್ಲೊಬ್ಬ ರೈತ ತನ್ನ ಮಗಳ ಮದುವೆಗಾಗಿ ಕೂಡಿಟ್ಟಿರುವ ಹಣವನ್ನು ಆಕ್ಸಿಜನ‌ ಖರೀದಿ ಮಾಡಲು ದೇಣಿಗೆ ನೀಡಿದ್ದಾನೆ.

ಗ್ರಾಮ ಪಂಚಾಯತಿಗಳಿಗೆ ನೇಮಕವಾದ ಆಡಳಿತಾಧಿಕಾರಿಗಳ ಕರ್ತವ್ಯಗಳೇನು..?

ನೇಮಕಗೊಂಡ ಆಡಳಿತಾಧಿಕಾರಿಗಳ ಕರ್ತವ್ಯಗಳ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ಆದೇಶ ಹೊರಡಿಸಿದ್ದಾರೆ.