ಬೆಂಗಳೂರು: ಸದ್ಯ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಹೀಗಾಗಿ ಬೇರೆ ಬೇರೆ ರಾಜ್ಯಗಳಿಂದಲೂ ಜನರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಂಕಷ್ಟು ಶುರುವಾಗಿದೆ ಹೀಗಾಗಿ ಸರ್ಕಾರ ಹೊಸ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದೆ.

ಕ್ವಾರಂಟೈನ್‌ ಸೇರಿದಂತೆ ಹಲವು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವವರಿಗೆ ಮಾತ್ರ ಬರುವುದಕ್ಕೆ ಅವಕಾಶ ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಮೃತದೇಹಗಳನ್ನು ರಾಜ್ಯದಲ್ಲಿ ಸಾಗಿಸಲು ಅವಕಾಶ ಇರುವುದಿಲ್ಲ. ಹೊರ ರಾಜ್ಯಗಳಲ್ಲಿ ಮೃತಪಟ್ಟ ವರ ದೇಹಗಳನ್ನೂ ರಾಜ್ಯಕ್ಕೆ ತರುವಂತಿಲ್ಲ ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಜೊತೆಗೆ ಬೇರೆ ಬೇರೆ ದೇಶ ಹಾಗೂ ರಾಜ್ಯಗಳಿಂದ ಕನ್ನಡಿಗರು ಮರಳಿ ಬರುತ್ತಿದ್ದು, ಅವರನ್ನು ಯಾವ ರೀತಿ ಕ್ವಾರಂಟೈನ್ ಮಾಡಬೇಕು ಎಂಬ ಕುರಿತು ಕೂಡ ಸರ್ಕಾರ ಹೇಳಿದೆ.

ಹೊರ ದೇಶ ಹಾಗೂ ಹೊರ ರಾಜ್ಯಗಳಿಂದ ಬರುವವರಿಗೆ, ಅನಿವಾರ್ಯ ಸಂದರ್ಭಗಳಲ್ಲಿ ಮೃತದೇಹಗಳನ್ನು ತರುವವರಿಗೆ ಹಲವು ಷರತ್ತುಗಳನ್ನು ಹಾಕಲಾಗಿದೆ. ಷರತ್ತುಗಳನ್ನು ಪಾಲಿಸಲು ಒಪ್ಪಿಕೊಳ್ಳುವವರಿಗೆ ಮಾತ್ರ ಅನುಮತಿ ಕೊಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಆನ್‌ಲೈನ್‌ ನೋಂದಣಿ ಖಡ್ಡಾಯ : ಹೊರ ರಾಜ್ಯದಿಂದ ರಾಜ್ಯಕ್ಕೆ ಬರುವ ಕನ್ನಡಿಗರು‌ ನಿರ್ದಿಷ್ಟ ವ್ಯವಸ್ಥೆಯಡಿ ಬರುವಂತೆ ಮಾಡಬೇಕು. ಹೀಗಾಗಿ ರಾಜ್ಯಕ್ಕೆ ಬರುವವರು ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಲೇಬೇಕು ಎಂದು ಸೂಚಿಸಿದೆ.

Leave a Reply

Your email address will not be published. Required fields are marked *

You May Also Like

ಕುರಿ ಹಿಂಡಿನ ಮೇಲೆ ಹರಿದ ಕಾರು : 8 ಕುರಿಗಳು ಸಾವು, 6 ಗಂಭೀರ

ನಿಡಗುಂದಿ: ರಸ್ತೆ ದಾಟುತ್ತಿದ್ದ ಕುರಿ ಹಿಂಡಿನ ಮೇಲೆ ಆಕಸ್ಮಿಕವಾಗಿ ಕಾರು ಹರಿದ ಪರಿಣಾಮ 8 ಕುರಿಗಳು…

ಕೋವಿಡ್: ಬಿಗಡಾಯಿಸುತ್ತಿದೆ ಬೆಂಗಳೂರು :25 ದಿನದಲ್ಲಿ 38,213 ಪಾಸಿಟಿವ್, 765 ಸಾವು

ಜುಲೈ 1 ರಿಂದ ಜುಲೈ 25ರ ಅವಧಿಯಲ್ಲಿ ಬೆಂಗಳೂರಿನಲ್ಲಿ ಪಾಸಿಟಿವ್ ಸಂಖ್ಯೆ 8 ಪಟ್ಟು ಹೆಚ್ಚಿದ್ದು, ಔಷಧಿ, ವೈದ್ಯರು ಮತ್ತು ಇತರ ಸಿಬ್ಬಂದಿಯ ಕೊರತೆಯಿದೆ.

ನನ್ನ ತೋಳಿನಾಸರೆ ನಿನಗೆ ಸಾಂತ್ವನ ನೀಡಲು ಕಾಯುತಿದೆ

ಪ್ರೇಮದ ಭಾಷೆ, ನೆನಪು,ತುಂಟಾಟಗಳ ಆಲಾಪವಾಗುತ್ತಿದೆ. ಸಾಂತ್ವಾನ ನೀಡಲು ತೋಳಿನಾಸರೆ ಸಖನಿಗಾಗಿ ಕಾಯುತ್ತಿವೆ. ಕಾಳಜಿ, ಪ್ರೀತಿ, ವಿಶ್ವಾಸ ಕಥೆಯ ಸಾರವಾಗಿದೆ. ಕಲ್ಪನಾ ಸಾಗರ್ ಅವರ ಲೇಖನವನ್ನು ನೀವು ಓದಿ…

ಸುರಕ್ಷಿತ ಅಂತರ ಕಾಯ್ದುಕೊಳ್ಳದೆ ಜನ್ಮದಿನಾಚರಣೆ ಮಾಡಿದ ಸರ್ಕಾರಿ ಅಧಿಕಾರಿ

ಬಾಗಲಕೋಟೆ: ಜಮಖಂಡಿ ತಾಲ್ಲೂಕಿನ ಸಾವಳಗಿಯಲ್ಲಿ ಕೋವಿಡ್-೧೯ ಸಂದರ್ಭದಲ್ಲಿ ಸರಕಾರಿ ಆದೇಶ ಪ್ರಕಾರ ಜನ ಸಾಮಾನ್ಯರಾಗಲಿ ಹಾಗೂ…