ವಾಷಿಂಗ್ಟನ್: ಅಮೇರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರ ಮಾಧ್ಯಮ ಕಾರ್ಯದರ್ಶಿಗೆ ಕೊರೋನಾ ವೈರಸ್ ತಗಲಿದೆ. ಶ್ವೇತ ಭವನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಳೆದೊಂದು ವಾರದಲ್ಲಿ ಕೊರೊನಾ ಸೋಂಕು ತಗಲಿಸಿಕೊಂಡಿರುವ ಎರಡನೇ ವ್ಯಕ್ತಿ ಇವರಾಗಿದ್ದಾರೆ.

ಶ್ವೇತಭವನದಲ್ಲಿ ಕೊರೋನಾ ಹರಡುತ್ತಿರುವುದು ತಮಗೆ ಆತಂಕ ತಂದಿಲ್ಲ ಎಂದಿದ್ದಾರೆ. ಶ್ವೇತ ಭವನದ ಸುರಕ್ಷತೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ನಿನ್ನೆ ಕೊರೊನಾ ಸೋಂಕು ಪತ್ತೆಯಾದ ಮೈಕ್ ಪೆನ್ಸ್ ಅವರ ಮಾಧ್ಯಮ ವಕ್ತಾರೆ ಕೇಟೀ ಮಿಲ್ಲರ್ ಇತ್ತೀಚೆಗೆ ಮೈಕ್ ಪೆನ್ಸ್ ಅವರೊಂದಿಗೆ ಸಂಪರ್ಕ ಹೊಂದಿದ್ದರು. ಆದರೆ ಅಧ್ಯಕ್ಷ ಟ್ರಂಪ್ ಅವರನ್ನು ಭೇಟಿ ಮಾಡಿರಲಿಲ್ಲ. ಟ್ರಂಪ್ ಅವರಿಗೆ ಉನ್ನತ ಮಟ್ಟದ ಸಲಹೆಗಾರರಾಗಿರುವ ಸ್ಟೆಫನ್ ಮಿಲ್ಲರ್ ಅವರ ಪತ್ನಿಯಾಗಿರುವ ಕೇಟೀ, ಈ ಸಂದರ್ಭದಲ್ಲಿ ಸ್ಟೆಫನ್ ಅವರಿಗೆ ಕೂಡ ಕೊರೊನಾ ಸೋಂಕು ತಗಲಿದೆಯೇ, ಅವರು ಕೂಡ ಶ್ವೇತಭವನದಲ್ಲಿ ಕೆಲಸ ಮಾಡುತ್ತಿದ್ದರೇ ಎಂಬ ಬಗ್ಗೆ ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ.

Leave a Reply

Your email address will not be published. Required fields are marked *

You May Also Like

ಚೀನಾ ವಿಚಾರ ರಾಹುಲ್ ಹೇಳಿಕೆ ಹಾಸ್ಯಾಸ್ಪದ : ಪ್ರಹ್ಲಾದ್ ಜೋಷಿ

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಚೀನಾ ವಿಚಾರದಲ್ಲಿ ಹಾಸ್ಯಾಸ್ಪದ ಹೇಳಿಕೆ ನೀಡುತ್ತಿದ್ದಾರೆ. ಹದಿನೈದು ನಿಮಿಷದಲ್ಲಿ ಚೀನಾದ ಸೈನಿಕರನ್ನು ಹೊರಹಾಕುವ ಹೇಳಿಕೆ ನೀಡುತ್ತಾರೆ ಇದು ಹಾಸ್ಯಾಸ್ಪದ ಹೇಳಿಕೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 512ಕ್ಕೆ ಏರಿಕೆ

ಕೊರೋನಾ ಸೊಂಕಿಗೆ ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಿದ್ದು, ರಾಜ್ಯ-ದೇಶ-ರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಅಪ್ಡೇಟ್ ಮಾಹಿತಿ..

ರಾಜ್ಯದಲ್ಲಿ ಇನ್ನೆಷ್ಟು ದಿನ ಲಾಕ್ ಡೌನ್?

ಬಹುತೇಕರು ಲಾಕ್ ಡೌನ್ ಯಾವಾಗ ಮುಕ್ತಾಯವಾಗುತ್ತದೆ? ಅಥವಾ ಮುಂದುವರೆಯುತ್ತಾ? ಒಂದು ವೇಳೆ ಮುಂದುವರೆದರೆ ಏನೆಲ್ಲ ಸಡಿಲಿಕೆ ಇರುತ್ತೆ ಎನ್ನುವ ಬಗ್ಗೆ ಸರ್ಕಾರದ ಆದೇಶಕ್ಕಾಗಿ ಜನಸಾಮಾನ್ಯರು ಎದುರು ನೋಡುತ್ತಿದ್ದರು. ಇದೀಗ ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ.

ಸಾಲಕ್ಕೆ ಹೆದರಿ ನೇಣಿಗೆ ಶರಣಾದ..!

ಉತ್ತರಪ್ರಭ ಸುದ್ದಿ ಕೊಪ್ಪಳ: ತಾಲೂಕಿನ ಲೆಬಗೇರಿ ಗ್ರಾಮದ ನಾಗರಾಜ (೩೫) ಜಡಿಯಪ್ಪ ಚಿಲವಾಡಗಿ ಎಂಬಾತನು ಬ್ಯಾಂಕ್…