ಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕೊರೊನಾ ತಂದ ಸಂಕಷ್ಟದ ಎರಡು ಘಟನೆಗಳನ್ನು ಹೇಳಿದ್ದಾರೆ. ಬೆಂಗಳೂರಿನ ಓರ್ವ ಯುವತಿ ಎಂ.ಟೆಕ್ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ 2017 ರಲ್ಲಿ ಹೊರದೇಶಕ್ಕೆ ಹೋಗಿದ್ದಾರೆ.‌ ಆ ಹೆಚ್ಚಿನ ಶಿಕ್ಷಣ ಮುಗಿಸಿದ ನಂತರ ಅಲ್ಲಿ ಒಳ್ಳೆಯ ಕೆಲಸವೂ ಸಿಕ್ಕಿದೆ. ಸದ್ಯ ಆ ಯುವತಿಗೆ ಬ್ಲಡ್ ಕ್ಯಾನ್ಸರ್ ಬಂದು ಅಪ್ಪಳಿಸಿದೆ. ಅಲ್ಲಿನ ಡಾಕ್ಟರ್ ಗಳು ಕೈ ಚಲ್ಲಿದ್ದಾರೆ. ಸದ್ಯ ನಿಮ್ಮ ದೇಶಕ್ಕೆ ಹೋಗಿ ಎಂದು ಹೇಳುತ್ತಿದ್ದಾರೆ. ಆ ಮಹಿಳೆ ಅಲ್ಲಿಂದ ಬರಬೇಕೆಂದರೆ ವಿಮಾನದಲ್ಲಿಯೇ ಬರಬೇಕು. ಆಕೆಯ ಇಲ್ಲಿನ ಬಂಧುಗಳು ನನಗೆ ತಿಳಿಸಿದಂತೆ ಇನ್ನು ಏಳು ದಿನಗಳೊಳಗೆ ಆಕೆ ವಿಮಾನ ಹತ್ತಿ ಬರಬೇಕು. ಇಲ್ಲದಿದ್ದರೆ ಆಕೆಯ ರೋಗ ನಿರೋಧಕ ಶಕ್ತಿ (immunity) ತೀರಾ ಕ್ಷೀಣವಾಗುತ್ತದೆ. ನಾನು ಕೇಂದ್ರ ಸಚಿವ ಸದಾನಂದ ಗೌಡರ ಜೊತೆ ಮಾತನಾಡಿ, ವಿದೇಶಾಂಗ ಸಚಿವಾಲಯದ‌ ಮೂಲಕ ಈಕೆಗೆ ನೆರವು ಯಾಚಿಸಿದ್ದೇನೆ.‌ ಅವರು ಪೂರ್ಣ ವಿವರ ಕೇಳಿದ್ದಾರೆ. ಈಗ ಅದನ್ನೂ ಕಳಿಸಿದ್ದೇನೆ. ಒಂದು ತೊಂದರೆಯೆಂದರೆ, ಅಲ್ಲಿಂದ ಭಾರತಕ್ಕೆ ನೇರ ಫ್ಲೈಟ್ ಇಲ್ಲವಂತೆ.

ಇನ್ನೊಂದು ಘಟನೆಯಲ್ಲಿ, ನಮ್ಮ ಕ್ಷೇತ್ರದ ಜಡ್ಜಸ್ ಕಾಲೋನಿಯಲ್ಲಿ 91 ವರ್ಷದ ನಿವೃತ್ತ ನ್ಯಾಯಮೂರ್ತಿ ಶ್ಯಾಮಯ್ಯಂಗಾರ್ ನಿನ್ನೆ ರಾತ್ರಿ ತೀರಿಕೊಂಡರು.‌ ಅವರಿಬ್ಬರು ಮಕ್ಕಳು ಅಮೆರಿಕಾದಲ್ಲಿದ್ದಾರೆ. ಸದ್ಯಕ್ಕೆ ಬರಲು ಸಾಧ್ಯವೇ ಇಲ್ಲ. ಹನ್ನೊಂದು ತಿಂಗಳ ಹಿಂದೆ ಶಾಮಯ್ಯಂಗಾರ್ ರವರ ಪತ್ನಿ ತೀರಿಕೊಂಡಾಗಲೂ ಆ ಮಕ್ಕಳು ಬರಲಾಗಿರಲಿಲ್ಲ. ಈಗ ತಂದೆಯ ಅಂತಿಮ ಕ್ರಿಯೆ ನಡೆಸಬೇಕಿದ್ದವರು Skype ಮೂಲಕ ಅಂತಿಮ ಕ್ರಿಯೆಯನ್ನು ನೋಡಬೇಕಾಗಿದೆ. ಈ ರೀತಿ ಬರೆದುಕೊಳ್ಳುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ನಟ ಸಲ್ಮಾನ್ ಖಾನ್ ಈ ರೀತಿ ಮಾಡಿದ್ದು ಸತ್ಯವೇ? ಸರಿಯೇ?

ಮುಂಬಯಿ : ಕೊರೊನಾದ ಅಬ್ಬರದ ನಡುವೆ ಬಾಲಿವುಡ್ ನ ಒಂದೊಂದೆ ಮುಖಗಳು ಅನಾವರಣಕ್ಕೆ ಬರುತ್ತಿವೆ. ಯುವ ನಟ ಸುಶಾಂತ್‌ ಸಿಂಗ್‌ ರಜಪೂತ್‌ ನಿಧನದ ನಂತರ ಅನೇಕ ಸತ್ಯಗಳು ಹೊರ ಬರುತ್ತಿವೆ. ಪಕ್ಷಪಾತ, ಗುಂಪುಗಾರಿಕೆ, ಕೀಳು ರಾಜಕೀಯದ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.

ಗದಗ ನಗರ ಸಭೆ ಚುನಾವಣೆ: ವ್ಹಿಲ್ ಚೆರ್ ನಲ್ಲಿ ಬಂದು ಮತಚಲಾಯಿಸಿದ ವೃದ್ದರು

ಗದಗ: ನಗರಸಭೆ ಯ ಚುನಾವಣೆಯ ಮತದಾನ ಇಂದು ನಡೆಯುತ್ತಿದ್ದು ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಮತಗಟ್ಟೆಯ…

ಗ್ರಾಪಂ ಚುನಾವಣೆ: ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ

ಗ್ರಾಪಂ ಚುನಾವಣೆ ಮತಗಟ್ಟೆ ಅಧಿಕಾರಿ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಗಳಿಗೆ ಸ್ಥಳೀಯ ಎಫ್ ಎಂ.ಡಬಾಲಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ತರಬೇತಿ ಕಾರ್ಯಕ್ರಮ ನಡೆಯಿತು.

ನಾಳೆ ರಾಜ್ಯ ಬಂದ್ – ರೈತರ ಹೋರಾಟದಿಂದಾಗಿ ಏನಿರತ್ತೆ? ಏನಿರಲ್ಲ?

ಬೆಂಗಳೂರು : ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ವಿಧೇಯಕ ವಿರೋಧಿಸಿ…