ಗದಗ: ಇದು ಗದಗಿನ ಜಿಮ್ಸ್ ವೈದ್ಯರು ನಡೆಸಿದ ‘ಆಪರೇಷನ್ ಪಾಸಿಟಿವ್’ ಕಾರ್ಯಾಚರಣೆ. ಶುಕ್ರವಾರವಷ್ಟೇ ಪಾಸಿಟಿವ್ ದೃಢಪಟ್ಟಿದ್ದ 9 ತಿಂಗಳ ಗರ್ಭಿಣಿಗೆ ಶನಿವಾರದ ಮುಂಜಾನೆ ಹೊತ್ತಿಗೆಲ್ಲ ಹೆರಿಗೆ ನೋವು ಕಾಣಿಸಿಕೊಂಡಿತ್ತು.

ಜಿಮ್ಸ್ ವೈದ್ಯರಿಗೆ ಇದು ಸವಾಲಿನ ಕೆಲಸವಾಗಿತ್ತು. ತಾಯಿ ದೇಹದೊಳಗೊಂದು ನವಜಾತ ಕೂಸು, ಅದೇ ದೇಹದೊಳಗೆ ಕೊರೋನಾ ಸೋಂಕು ಕೂಡ ಇತ್ತು.

ಸಹಜ ಹೆರಿಗೆಗೆ ಕಾಯುತ್ತ ಕೂಡುವಂತಿರಲಿಲ್ಲ. ಸಿಸೇರಿಯನ್ ಮೊರೆ ಹೋಗದೇ ಬೇರೆ ವಿಧಿ ಇರಲಿಲ್ಲ. ಈ ಅಪರೂಪದ ರಿಸ್ಕಿ ಕೆಲಸಕ್ಕೆ ಕೈ ಹಾಕಿದ ವೈದ್ಯರು ಮಾನಸಿಕವಾಗಿ ಪಾಸಿಟಿವ್ ಅಟಿಟ್ಯೂಡ್ ಹೊಂದಿದ ಕಾರಣಕ್ಕೇ ಪಾಸಿಟಿವ್ ಗರ್ಭಿಣಿಗೆ ಸುರಕ್ಷಿತ ಸಿಸೇರಿಯನ್ ಹೆರಿಗೆ ಮಾಡುವ ಮೂಲಕ ಯಶಸ್ವಿಯಾಗಿದ್ದಾರೆ. ಹೆಣ್ಣು ಕೂಸು ಮತ್ತು ತಾಯಿ ಸುರಕ್ಷಿತವಾಗಿದ್ದಾರೆ.

2.7 ಕೆಜಿ ತೂಕವಿರುವ ಮಗುವಿಗೆ ಉಸಿರಾಟದ ತೊಂದರೆಯಾದ ಕಾರಣ ಕೊವಿಡ್ ವಾರ್ಡಿನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಮ್ಸ್ ವೈದ್ಯರಾದ ಡಾ. ಶಿವನಗೌಡ ಜೋಳದರಾಶಿ, ಡಾ.ಶೃತಿ ಭಾವಿ ಮತ್ತು ಡಾ. ಅಜಯ್ ಬಸರಿಗಿಡದ ಈ ಆಪರೇಷನ್ ಯಶಸ್ವಿಗೊಳಿಸಿದ್ದಾರೆ. ಇದು ರಾಜ್ಯದಲ್ಲೇ ವಿಶಿಷ್ಟ ಪ್ರಕರಣವಾಗಿದ್ದು, ಪಾಸಿಟಿವ್ ಮಹಿಳೆಯ ಸಿಸೇರಿಯನ್ ಹೆರಿಗೆ ಯಶಸ್ವಿಯಾದ ಮೊದಲ ಪ್ರಕಣವೂ ಆಗಿದೆ ಎಂದು ಜಿಮ್ಸ್ ನಿರ್ದೇಶಕ ಡಾ. ಪಿ. ಎಸ್. ಭೂಸರಡ್ಡಿ ತಿಳಿಸಿದ್ದಾರೆ.

ಮಹಿಳೆಗೆ ಶುಕ್ರವಾರ ಪಾಸಿಟಿವ್ ದೃಢಪಟ್ಟಿತ್ತು. ನಂತರ ಹೆರಿಗೆ ಆಸ್ಪತ್ರೆಯನ್ನು ಸೀಲ್ ಮಾಡಲಾಗಿತ್ತು. ಜಿಮ್ಸ್ ಕೊವಿಡ್ ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಇಂದು ಶನಿವಾರ ಹೆರಿಗೆ ಮಾಡಲಾಗಿತು.

ಈ ಹಿಂದೆ ರೋಣ-ಬಾದಾಮಿಯ ಪಾಸಿಟಿವ್ ಗರ್ಭಿಣಿ ಒಬ್ಬರಿಗೆ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿದ್ದರೂ ಕೂಸು ಉಳಿದಿರಲಿಲ್ಲ.

Leave a Reply

Your email address will not be published. Required fields are marked *

You May Also Like

60 ಜನರಿರುವ ಕುಟುಂಬಕ್ಕೆ ಎಂಟ್ರಿ ಕೊಟ್ಟ ಸೋಂಕು!

ಧಾರವಾಡ : ಜಿಲ್ಲೆಯಲ್ಲಿ ಕೊರೊನಾ ಹಾವಳಿ ದಿನದಿಂದ ದಿನಕ್ಕ ಏರಿಕೆಯಾಗುತ್ತಿದೆ.  ನವಲಗುಂದ ತಾಲೂಕಿನ ಶಿರಕೋಳ ಗ್ರಾಮಕ್ಕೂ…

ರಾಜ್ಯದಲ್ಲಿ ಇನ್ನೆಷ್ಟು ದಿನ ಲಾಕ್ ಡೌನ್?

ಬಹುತೇಕರು ಲಾಕ್ ಡೌನ್ ಯಾವಾಗ ಮುಕ್ತಾಯವಾಗುತ್ತದೆ? ಅಥವಾ ಮುಂದುವರೆಯುತ್ತಾ? ಒಂದು ವೇಳೆ ಮುಂದುವರೆದರೆ ಏನೆಲ್ಲ ಸಡಿಲಿಕೆ ಇರುತ್ತೆ ಎನ್ನುವ ಬಗ್ಗೆ ಸರ್ಕಾರದ ಆದೇಶಕ್ಕಾಗಿ ಜನಸಾಮಾನ್ಯರು ಎದುರು ನೋಡುತ್ತಿದ್ದರು. ಇದೀಗ ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ.

ಆಗಸ್ಟ್ 2ರವರೆಗೆ ಗದಗ ಜಿಲ್ಲೆಯಾದ್ಯಂತ ಪ್ರತಿಬಂಧಕಾಜ್ಞೆ

ಗದಗ: ರಾಜ್ಯ ಸರ್ಕಾರದ ನಿರ್ದೇಶನ ರೀತ್ಯ ಗದಗ ಜಿಲ್ಲೆಯಾದ್ಯಂತ  ಅಗಸ್ಟ 2 ರ ಮಧ್ಯರಾತ್ರಿಯವರೆಗೆ ಪ್ರತಿದಿನ…

ನೌಕರರ ವಲಯದಲ್ಲಿ ನಿರಾಸೆ ಕಾಮೋ೯ಡ ಮೂಡಿಸಿದ ಬಜೆಟ್-ಚಂದ್ರಶೇಖರ ನುಗ್ಲಿ

ಆಲಮಟ್ಟಿ : ಮುಖ್ಯ ಮಂತ್ರಿಗಳು ಇಂದು ಮಂಡಿಸಿದ ಬಜೆಟ್ ರಾಜ್ಯದ ನೌಕರರಿಗೆ ಹಾಗೂ ಶಿಕ್ಷಕರ ಸಮೂಹಕ್ಕೆ…