ಬಳ್ಳಾರಿ: ರಾಜ್ಯದಲ್ಲಿ ಲಾಕ್ ಡೌನ್ ಹಿನ್ನೆಲೆ 45 ದಿನಗಳ ಕಾಲ ಸಂಪೂರ್ಣ ಸಾರಾಯಿ ಮಾರಾಟ ನಿಶೇಧಿಸಿತ್ತು. ಆದರೆ ಇದೀಗ ಮತ್ತೆ ಸಾರಾಯಿ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದ್ದು, ಇದರಿಂದ ಬಹುತೇಕ ಕುಟುಂಬಗಳ ನೆಮ್ಮದಿಗೆ ತೀವ್ರ ತೊಂದರೆಯಾಗಿದೆ. ಹೀಗಾಗಿ ಸಾರಾಯಿ ಮಾರಾಟ ಸಂಪೂರ್ಣ ನಿಶೇಧಿಸಬೇಕು ಎಂದು ಗೋರ್ ಸೇನಾ ಸಂಘಟನೆಯಿಂದ ಹೂವಿನ ಹಡಗಲಿಯಲ್ಲಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.

ಮತ್ತೆ ಮದ್ಯ ಮಾರಾಟ ಮಾಡುತ್ತಿರುವುದರಿಂದ ಸಮಾಜದ ನೆಮ್ಮದಿಗೆ ಭಂಗ ಬರುತ್ತಿದೆ. ಸಾರಾಯಿ ಬಂದ್ ವೇಳೆ ಊರುಗಳು ಶಾಂತವಾಗಿದ್ದವು ಜನರು ದುಶ್ಚಟಗಳಿಂದ ಮುಕ್ತರಾಗುವತ್ತ ಸಾಗಿದ್ದರು. ಅಷ್ಟರಲ್ಲಿ ಮತ್ತೆ ಸಾರಾಯಿ ಮಾರಾಟ ಆರಂಭಿಸಿದ್ದು ಜನರನ್ನು ದುಶ್ಚಟಗಳ ದಾಸರಾಗುವಂತೆ ಮಾಡಿದೆ. ಕೂಡಲೇ ಸರ್ಕಾರ ಮದ್ಯೆ ಮಾರಾಟ ಸಂಪೂರ್ಣ ನಿಷೇಧಿಸಬೇಕು. ಅದರಲ್ಲೂ ತಾಂಡಾಗಳಲ್ಲಿ ಕಡ್ಡಾಯವಾಗಿ ನಿಷೇಧ ಮಾಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಗೋರಾ ಸೇನಾ ಗೌರವ ಅಧ್ಯಕ್ಷ ರವಿ ನಾಯ್ಕ್ ಎಸ್, ಅಧ್ಯಕ್ಷ ಸೇವ್ಯಾ ನಾಯ್ಕ್ ಎಸ್, ಕಾರ್ಯದರ್ಶಿ ನೀಲಾ ನಾಯ್ಕ್ ವಿ,ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ನಾಯ್ಕ್, ಕೃಷ್ಣಾ ನಾಯ್ಕ್, ಲೋಕ್ಯಾ ನಾಯ್ಕ್, ರವಿ ನಾಯ್ಕ್, ಸಂತೋಷ ನಾಯ್ಕ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *

You May Also Like

ಕಿಯೋನಿಕ್ಸ್ ಅಧ್ಯಕ್ಷರಾಗಿ ಬಿಜೆಪಿ ನಾಯಕ ಹರಿಕೃಷ್ಣ ಬಂಟ್ವಾಳ್ ಆಯ್ಕೆ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಅವರಿಗೆ ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್…

ಮಳೆ ಬಂದರೆ ಸಾಕು ಹಾಸ್ಟೆಲ್ ತುಂಬ ನೀರು; ಪರದಾಡುತ್ತಿರುವ ಹಾಸ್ಟೆಲ್ ವಿದ್ಯಾರ್ಥಿಗಳು..!

ಉತ್ತರಪ್ರಭಗದಗ: ನಿನ್ನೆ ರಾತ್ತಿಯಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯ ಕಾರಣದಿಂದಾಗಿ ಗದಗ ನಗರದ ಹಾತಲಗೇರಿ ರಸ್ತೆಯಲ್ಲಿರುವ…

ಅಧಿಕಾರಿಗಳ ಆತುರ: ನರೆಗಲ್ಲನಲ್ಲಿ ಅನಾಥವಾದ ಉದ್ಯಾನವನ..!

ಗದಗ ಜಿಲ್ಲೆಯ ನರೇಗಲ್ಲ ನಲ್ಲಿ ಅಧಿಕಾರಿಗಳ ಆತುರದ ನಿರ್ಧಾರದಿಂದ ಉದ್ಯಾನವನ ಇದ್ದು ಇಲ್ಲದಂತಾಗಿದೆ.

ಡೋಣಿ ಅವಾಂತರ – ನಡುಗಡ್ಡೆಯಲ್ಲಿಯೇ ಕೈಯಲ್ಲಿ ಜೀವ ಹಿಡಿದು ನಿಂತಿರುವ ಜನ!

ವಿಜಯಪುರ : ಉತ್ತರ ಕರ್ನಾಟಕದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಜನರ ಬದುಕು ಅಕ್ಷರಶಃ ಬೀದಿಗೆ ಬಂದು ನಿಂತಿದೆ.