ಮಹಾರಾಷ್ಟ್ರ:ನಿನ್ನೆಯಷ್ಟೆ ವಿಶಾಖಪಟ್ಟಣ ದುರಂತದ ಬೆನ್ನಲ್ಲೆ ಇಂದು ಔರಂಗಾಬಾದ್ ಪ್ರಕರಣ ಜನರನ್ನು ಬೆಚ್ಚಿ ಬೀಳಿಸಿದೆ. ಔರಂಗಾಬಾದ್ ರೈಲು ಹಳಿ ಮೇಲೆ ಮಲಗಿರುವ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದ ಪರಿಣಾಮ 16 ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಎಲ್ಲರೂ ರೈಲು ಟ್ರಾಕ್ ಮೇಲೆ ರಾತ್ರಿ ಮಲಗಿದ್ದರು. ಈ ವೇಳೆ ರೈಲು ಹರಿದ ಪರಿಣಾಮ 16 ಕಾರ್ಮಿಕರು ಸಾವನ್ನಪ್ಪಿದ್ದಾರೆ‌.
ಇನ್ನೂ ನಾಲ್ವರಿಗೆ ಗಂಭೀರ ಗಾಯವಾಗಿದೆ. ಔರಂಗಾಬಾದ್ – ಜಾಲನಾ ಮಧ್ಯ ಘಟನೆ ಸಂಭವಿಸಿದೆ.
ಎಲ್ಲರೂ ಜಾಲನಾ ಎಮ್ ಆಯ್.ಡಿ.ಸಿ ಕಾರ್ಮಿಕರು ಎಂಬ ಮಾಹಿತಿ ಲಭ್ಯ ವಾಗಿದೆ.
ಎಲ್ಲಾ ಕಾರ್ಮಿಕರು ಮಧ್ಯಪ್ರದೇಶ ರಾಜ್ಯದ ನಿವಾಸಿಗಳಾಗಿದ್ದಾರೆ.
ಗಾಯಾಳುಗಳಿಗೆ ಔರಂಗಾಬಾದ್ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೈಲು ಸಂಚಾರ ಬಂದ್ ಇದೇ ಎಂದು ಭಾವಿಸಿ ರೈಲು ಟ್ರ್ಯಾಕ್ ಮೆಲೆ ಮಲಗಿದ್ದರು. ಬೆಳಿಗ್ಗೆ 6:30 ರ ಸಮಯಕ್ಕೆ ಘಟನೆ ಸಂಬಂಧಿಸಿದೆ.
ರೈಲು ಟ್ರಾಕ್ ಮೇಲಿಂದ ಕಾರ್ಮಿಕರು ನಡೆದುಕೊಂಡು ಬರುತ್ತಿದ್ದಾಗ ಹಳಿಯ ಮೇಲೆ ಮಲಗಿದ್ದರು ಎನ್ನಲಾಗಿದ್ದು ಸ್ಥಳಕ್ಕೆ ರೈಲ್ವೆ ಪೋಲಿಸರು ಭೆಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಮೋದಿ ಗೇಲಿ ಮಾಡಲು ಹೋಗಿ ಬೇಸ್ತು ಬಿದ್ದ ರಾಹುಲ್

ದೆಹಲಿ: ಚೀನಾ ವಿಷಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ನಡುವೆ ಭಾರೀ ಕಂದಕ ಏರ್ಪಟ್ಟಿದೆ.…

ರೋಣದ ‘ಕೆಜಿ ಬಾಸ್’ಗೆ ಟಿಕೆಟ್ ಬೇಕಾ ಎಂದ ರಾಜಾಹುಲಿ: ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ ಬಂಡಿ, ಯಡ್ಡಿ ಮಾತು..!

ಉತ್ತರಪ್ರಭ ಸುದ್ದಿಗದಗ: ಜಿಲ್ಲೆ ಶಿರಹಟ್ಟಿ ಪಟ್ಟಣದಲ್ಲಿ ನಿನ್ನೆ ನಡೆದ ಅದ್ಧೂರಿ ಸಮಾವೇಶ ಕೇಸರಿ ಪಾಳೆಯದಲ್ಲಿ ಹೊಸ…

ಅರಳದಿನ್ನಿ : ಮಹಿಳಾ ಶೌಚಾಲಯ ಗೋಡೆ ಎತ್ತರಕ್ಕೆ ಆಗ್ರಹ

ಆಲಮಟ್ಟಿ : ಸಮೀಪದ ಅರಳದಿನ್ನಿ ಗ್ರಾಮದಲ್ಲಿನ ಸಾರ್ವಜನಿಕ ಮಹಿಳಾ ಶೌಚಾಲಯದ ಗೋಡೆಯನ್ನು ಎತ್ತರಿಸಬೇಕು ಹಾಗು ಹೊಸದೊಂದು…

ಇಟಲಿ ದಾಟಿ ಮುಂದೆ ಹೋದ ಭಾರತ!!

ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ…