ಬೆಂಗಳೂರು: ಮದ್ಯದ ಮತ್ತಿನಲ್ಲಿ ಪತಿಯೊಬ್ಬ ಪತ್ನಿಯನ್ನೇ ಕೊಲೆ ಮಾಡಿರುವ ಅಮಾನವೀಯ ಘಟನೆ ನೆಲಮಂಗಲ ಸಮೀಪದ ಸಿದ್ದೇಶ್ವರ ಬಡಾವಣೆಯಲ್ಲಿ ನಡೆದಿದೆ.

ನೆಲಮಂಗಲ ಸಮೀಪದ ಸಿದ್ದೇಶ್ವರ ಬಡಾವಣೆಯ ದಿವ್ಯ (24) ಕೊಲೆಯಾದ ದುರ್ದೈವಿ. ತೀರ್ಥಪ್ರಸಾದ್ ಕೊಲೆ ಆರೋಪಿಯಾಗಿದ್ದು, ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತೀರ್ಥಪ್ರಸಾದ್ ಈ ಕೃತ್ಯ ಎಸದಿದ್ದಾನೆ ಎನ್ನಲಾಗಿದೆ.

ಕಾರು ಚಾಲಕನಾಗಿದ್ದ ತೀರ್ಥಪ್ರಸಾದ್ ಮದ್ಯ ಕುಡಿದು ಮನೆಗೆ ಬಂದಿದ್ದ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಜಗಳ ಪ್ರಾರಂಭವಾಗಿದೆ. ಆದರೆ, ಕುಡಿದ ಮತ್ತಿನಲ್ಲಿ ಚಾಕುವಿನಿಂದ ಕತ್ತು ಸೀಳಿ ಪತ್ನಿಯನ್ನು ಕೊಲೆ ಮಾಡಿ ನಾಪತ್ತೆಯಾಗಿದ್ದಾನೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಸಚಿವ ಆರ್. ಅಶೋಕಗೆ ಕೋವಿಡ್ ಸೋಂಕು, ಆಸ್ಪತ್ರೆಗೆ ದಾಖಲು

ಬೆಂಗಳೂರು:  ಪದ್ಮನಾಭನಗರ ಕ್ಷೇತ್ರದ ಬಿಜೆಪಿ ಶಾಸಕ, ಕಂದಾಯ ಸಚಿವ ಆರ್. ಅಶೋಕಗೆ ಕೋವಿಡ್ ಸೋಂಕು ತಗುಲಿದೆ.…

ಪಿವರ್ಸ್ ಹಾಕದೆ ಕಾಮಗಾರಿ ಪೂರ್ಣ: ಲಕ್ಷ್ಮೇಶ್ವರದಲ್ಲಿ ಅಂಬೇಡ್ಕರ್ ನಗರ ಕಾಮಗಾರಿ ಮುಗಿದು ಐದು ತಿಂಗಳಾತು

ಕಾಂಕ್ರೀಟ್ ರಸ್ತೆ ಇಲ್ಲದೇ ಸಂಚಾರಕ್ಕೆ ಸಂಚಾಕಾರ ಬಂದಿದೆ ಎಂದು ಪಟ್ಟಣದ ಜನರು ಪಟ್ಟು ಹಿಡಿದ ಪರಿಣಾಮ ಕಾಂಕ್ರೀಟ್ ರಸ್ತೆಯೇನೋ ನಿರ್ಮಾಣ ಮಾಡಿದರು. ಆದರೆ ಕಾಮಗಾರಿ ಕಾಟಾಚಾರಕ್ಕೆ ಮಾಡಿದರಾ ಎನ್ನುವ ಪ್ರಶ್ನೆ ಲಕ್ಷ್ಮೇಶ್ವರ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಉದ್ಭವವಾಗಿದೆ.

ಇಂದು 6 ರಿಂದ 8 ನೇ ತರಗತಿ ಆರಂಭದ ಬಗ್ಗೆ ನಿರ್ಧಾರ

ಆರರಿಂದ ಎಂಟನೇ ತರಗತಿಗಳನ್ನು ಪೂರ್ಣಪ್ರಮಾಣದಲ್ಲಿ ಆರಂಭಿಸಲು ಸರ್ಕಾರ ಚಿಂತನೆ ನಡೆದಿದೆ. ಶಾಲೆ ಪುನಾರಂಭ ಕುರಿತಂತೆ ಇಂದು ಮಹತ್ವದ ಸಭೆ ನಡೆಯಲಿದೆ.

ಲಾಕ್ ಡೌನ್ ಸಮಯದಲ್ಲಿ ಬಾಲಿವುಡ್ ನಟ ಸಲ್ಲು ಬಾಯ್ ಮಾಡಿದ್ದೆನು ಗೊತ್ತಾ..?

ಬಾಲಿವುಡ್ ನಟ ಸಲ್ಲು ಬಾಯ್ ಅಭಿಮಾನಿಗಳಿಗೆ ಮಾತ್ರ ಲಾಕ್ ಡೌನ್ ನಲ್ಲಿ ಸಲ್ಲುಭಾಯ್ ಏನು ಮಾಡ್ತಿದ್ದಾರೆ ಅಂತ ಕುತೂಹಲ ಇತ್ತು. ಆದ್ರೆ ಅಭಿಮಾನಿಗಳಿಗೆ ತಾವು ಈ ಬಿಡುವಿನಲ್ಲಿ ಏನು ಮಾಡ್ತಿದ್ದಾರೆ ಅಂತ ತೋರಿಸಿದ್ದಾರೆ.