ಮುಂಬಯಿ: ಕೊರೊನಾ ಸೋಂಕು ನಿಯಂತ್ರಣ ದೃಷ್ಟಿಯಿಂದ ದೇಶವನ್ನು ಲಾಕ್ ಡೌನ್ ಮಾಡಲಾಗಿದ್ದು, ಇದರಿಂದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಪ್ರತಿದಿನ ರೂ.1.5 ಕೋಟಿ ನಷ್ಟವಾಗುತ್ತಿದೆ ಎಂದು ಸಾಯಿಬಾಬಾ ಮಂದಿರ ಟ್ರಸ್ಟ್ ತಿಳಿಸಿದೆ.

ಮಾ. 17ರಿಂದ ಮೇ.3ರ ವರೆಗೆ ದೇವಸ್ಥಾನ ಬಂದ್ ಆಗಿದ್ದು, ದೇವಸ್ಥಾನದ ಟ್ರಸ್ಟ್ ರೂ.2.53 ಕೋಟಿ ರೂಪಾಯಿ ಸ್ವೀಕರಿಸಿದೆ. ಅಲ್ಲದೇ ಆನ್ ಲೈನ್ ಮೂಲಕ ಪ್ರತಿ ದಿನ ರೂ. 6 ಲಕ್ಷ ದೇಣಿಗೆ ಬರುತ್ತಿದೆ.

ಸಾಯಿ ಬಾಬಾ ದೇವಸ್ಥಾನ ವಾರ್ಷಿಕ ಆದಾಯ 600 ಕೋಟಿ ರೂಪಾಯಿ, ಅಂದರೆ ದಿನಂಪ್ರತಿ 1.64 ಕೋಟಿ ರೂಪಾಯಿಗಿಂತಲೂ ಹೆಚ್ಚು ಆದಾಯ ಬರುತ್ತಿತ್ತು. ಇದೀಗ ಲಾಕ್ ಡೌನ್ ನಿಂದ 1 ಕೋಟಿ 58 ಲಕ್ಷ ರೂಪಾಯಿ ನಷ್ಟವಾಗುತ್ತಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿಂದು 947 ಕೊರೊನಾ ಪಾಸಿಟಿವ್! : ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 946 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 15242…

ಕೇಂದ್ರ ಸರ್ಕಾರದ ನಡೆ ಸ್ವಾಗತಿಸಿದ ಪಿ.ಚಿದಂಬರಂ!

ಕೇಂದ್ರ ಸರ್ಕಾರ ತೆಗೆದುಕೊಂಡಿರು ನಿರ್ಧಾರವನ್ನು ಮಾಜಿ ವಿತ್ತ ಸಚಿವ ಚಿದಂಬರಂ ಬೆಂಬಲಿಸಿದ್ದಾರೆ. ಇಲ್ಲಿಯವರೆಗೂ ಕೇಂದ್ರ ಸರ್ಕಾರದ ಪ್ರತಿ ನಡೆಯನ್ನು ಟೀಕಿಸುತ್ತಿದ್ದ ಚಿದಂಬರಂ ಮೊದಲ ಬಾರಿಗೆ ಬೆಂಬಲಿಸಿದ್ದಾರೆ.

ಶಿವಾಜಿನಗರದಲ್ಲಿ ಮತ್ತೆ 14 ಜನರಲ್ಲಿ ಕಂಡು ಬಂದ ಸೋಂಕು!

ಬೆಂಗಳೂರು: ಇಲ್ಲಿಯ ಶಿವಾಜಿನಗರದಲ್ಲಿ ಮತ್ತೆ 14 ಜನರಲ್ಲಿ ಸೋಂಕು ಇರುವುದು ಬೆಳಕಿಗೆ ಬಂದಿದೆ. ಹೌಸ್ ಕೀಪಿಂಗ್…

ಆಯುಷ್ ಇಲಾಖೆಯ ವೆಬಿನಾರ್-ಸೆಮಿನಾರ್ ಗಳಲ್ಲಿ ಹಿಂದಿ ಹೇರಿಕೆ ಬೇಡ

ಕೇಂದ್ರ ಸರ್ಕಾರದ ಆಯುಷ್ ಇಲಾಖೆಯ ಸಚಿವ ಶ್ರೀಪಾದ್ ಯಶೊ ನಾಯಕ್ ಅವರಿಗೆ ತಮಿಳು ನಾಡಿನ ಲೋಕಸಭಾ ಸದಸ್ಯ ಕನಿಮೋಜಿ ಕರುಣಾನಿಧಿ ಪತ್ರ ಬರೆದಿದ್ದಾರೆ. ಕೇಂದ್ರ ಸರ್ಕಾರದ ಆಯುಷ್ ಇಲಾಖೆಯ ಸಚಿವ ಶ್ರೀಪಾದ್ ಯಶೊ ನಾಯಕ್ ಅವರಿಗೆ ತಮಿಳು ನಾಡಿನ ಲೋಕಸಭಾ ಸದಸ್ಯ ಕನಿಮೋಜಿ ಕರುಣಾನಿಧಿ ಪತ್ರ ಬರೆದಿದ್ದಾರೆ.