ಮುಂಬಯಿ: ಕೊರೊನಾ ಸೋಂಕು ನಿಯಂತ್ರಣ ದೃಷ್ಟಿಯಿಂದ ದೇಶವನ್ನು ಲಾಕ್ ಡೌನ್ ಮಾಡಲಾಗಿದ್ದು, ಇದರಿಂದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಪ್ರತಿದಿನ ರೂ.1.5 ಕೋಟಿ ನಷ್ಟವಾಗುತ್ತಿದೆ ಎಂದು ಸಾಯಿಬಾಬಾ ಮಂದಿರ ಟ್ರಸ್ಟ್ ತಿಳಿಸಿದೆ.

ಮಾ. 17ರಿಂದ ಮೇ.3ರ ವರೆಗೆ ದೇವಸ್ಥಾನ ಬಂದ್ ಆಗಿದ್ದು, ದೇವಸ್ಥಾನದ ಟ್ರಸ್ಟ್ ರೂ.2.53 ಕೋಟಿ ರೂಪಾಯಿ ಸ್ವೀಕರಿಸಿದೆ. ಅಲ್ಲದೇ ಆನ್ ಲೈನ್ ಮೂಲಕ ಪ್ರತಿ ದಿನ ರೂ. 6 ಲಕ್ಷ ದೇಣಿಗೆ ಬರುತ್ತಿದೆ.

ಸಾಯಿ ಬಾಬಾ ದೇವಸ್ಥಾನ ವಾರ್ಷಿಕ ಆದಾಯ 600 ಕೋಟಿ ರೂಪಾಯಿ, ಅಂದರೆ ದಿನಂಪ್ರತಿ 1.64 ಕೋಟಿ ರೂಪಾಯಿಗಿಂತಲೂ ಹೆಚ್ಚು ಆದಾಯ ಬರುತ್ತಿತ್ತು. ಇದೀಗ ಲಾಕ್ ಡೌನ್ ನಿಂದ 1 ಕೋಟಿ 58 ಲಕ್ಷ ರೂಪಾಯಿ ನಷ್ಟವಾಗುತ್ತಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

Leave a Reply

Your email address will not be published.

You May Also Like

ಹಿಂದುಳಿದವರ್ಗದ ಕಾನೂನು ಪದವೀಧರರಿಗೆ ಶಿಷ್ಯವೇತನಕ್ಕೆ ಒತ್ತಾಯ

ಗದಗ: ನೂತನವಾಗಿ ವಕೀಲಿ ವೃತ್ತಿ ಆರಂಭಿಸಿದ ಹಿಂದುಳಿದ ವರ್ಗದ ಕಾನೂನು ಪದವೀಧರರ ಮಾಸಿಕ ಶಿಷ್ಯವೇತನ ತಡೆ…

ಅಂಬ್ಯೂಲೆನ್ಸ್ ನಲ್ಲಿ ಜಿಂಕೆ ಮಾಂಸ ಸಾಗಣೆ..!

ಶಿವಮೊಗ್ಗ: ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಸರ್ಕಾರಿ ಕೋವಿಡ್-19 ವಿಶೇಷ ಆಂಬುಲೆನ್ಸ್ ದುರುಪಯೋಗಿಸಿಕೊಂಡು ಜಿಂಕೆ ಮಾಂಸ ಸಾಗಾಟ…

ಕೊರೋನಾ ಸೊಂಕು: ಪೊಲೀಸರಲ್ಲೂ ಆತಂಕ

ಕೊರೋನಾ ಸೊಂಕು: ಪೊಲೀಸರಲ್ಲೂ ಆತಂಕ ಬೆಂಗಳೂರು : ಬೇಗೂರು ಪೊಲೀಸ್ ಠಾಣೆಯ ಪೇದೆಯೊಬ್ಬರಿಗೆ ಕೊರೊನಾ ಸೋಂಕು…

ಗೋಧ್ರಾ ಹತ್ಯಾಕಾಂಡ: 19 ವರ್ಷಗಳ ಬಳಿಕ ಪ್ರಮುಖ ಆರೋಪಿ ಬಂಧನ

ಗೋಧ್ರಾ ರೈಲು ಹತ್ಯಾಕಾಂಡದ ಪ್ರಮುಖ ಆರೋಪಿಯನ್ನು 19 ವರ್ಷಗಳ ಬಳಿಕ ಬಂಧಿಸಲಾಗಿದೆ. ಗೋಧ್ರಾ ನಗರದ ರಫೀಕ್ ಹುಸೇನ್ ಭಾತುಕ್ ಬಂಧಿತ ಆರೋಪಿ. ಈತನೇ ಸಂಚು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ಪಂಚಮಹಲ್ ಪೊಲೀಸ್ ವರಿಷ್ಠಾಧಿಕಾರಿ ಲೀನಾ ಪಾಟೀಲ್ ತಿಳಿಸಿದ್ದಾರೆ.