ರಿಪಬ್ಲಿಕ್‌ ಟಿವಿಯ ಸಂಪಾದಕ ಅರ್ನಾಬ್ ಗೋಸ್ವಾಮಿ ಮೇಲೆ ಕೋಮು ದ್ವೇಷ ಸೃಷ್ಟಿ ಆರೋಪ

ಮುಂಬೈ: ರಿಪಬ್ಲಿಕ್‌ ಟಿವಿಯ ಸಂಪಾದಕ ಅರ್ನಾಬ್ ಗೋಸ್ವಾಮಿ ಕೋಮು ದ್ವೇಷ ಸೃಷ್ಟಿಸಿದ ಆರೋಪ ಹೊತ್ತುಕೊಂಡಿದ್ದಾರೆ. ಈ ಸಂಬಂಧ ಮುಂಬೈ ಪೊಲೀಸರು ಪ್ರಕರಣವನ್ನೂ ದಾಖಲಿಸಿಕೊಂಡಿದ್ದಾರೆ. ಏಪ್ರಿಲ್‌ 14 ರಂದು ಮುಂಬೈನ ಬಾಂದ್ರಾ ರೈಲು ನಿಲ್ದಾಣದ ಬಳಿ ಸಾವಿರಾರು ಜನ ವಲಸೆ ಕಾರ್ಮಿಕರು ತಮ್ಮ ಸ್ವಂತ ಗ್ರಾಮಗಳಿಗೆ ತೆರಳಲು ಜಮಾಯಿಸಿದ್ದರು.

ಲಾಕ್‌ ಡೌನ್‌ ನಡುವೆಯೂ ಕೇಂದ್ರ ಸರ್ಕಾರ ರೈಲನ್ನು ಬಿಟ್ಟಿದ್ದು ವಲಸೆ ಕಾರ್ಮಿಕರು ತವರಿಗೆ ತೆರಳಲು ಸಹಸ್ರ ಸಂಖ್ಯೆಯಲ್ಲಿ ಕೆಲ ಘಂಟೆಗಳಲ್ಲೇ ಜಮಾಯಿಸಿದ್ದರು. ವಾಸ್ತವವಾಗಿ ಈ ರೀತಿ ವಲಸೆ ಕಾರ್ಮಿಕರ ಜಮಾವಣೆಗೆ ಸ್ಥಳೀಯ ಚಾನೆಲ್‌ ಒಂದು ನೀಡಿದ ಸುಳ್ಳು ಸುದ್ದಿಯೇ ಇದಕ್ಕೂ ಕಾರಣವಾಗಿತ್ತು. ಆದರೆ ವಲಸೆ ಕಾರ್ಮಿಕರ ಈ ಜಮಾವಣೆ ಬಗ್ಗೆ ವರದಿ ಮಾಡುವಾಗ ಗೋಸ್ವಾಮಿ ಅವರ ರಿಪಬ್ಲಿಕ್‌ ಚಾನೆಲ್‌ ಸಂಭಂದವೇ ಇಲ್ಲದ ಬಾಂದ್ರಾದ ಮಸೀದಿಯ ದೃಶ್ಯವನ್ನು ಪದೇ ಪದೇ ತೋರಿಸಿತ್ತು. ಆದರೆ ಇದರಲ್ಲಿ ಮಸೀದಿಯ ಪಾತ್ರವೇನೂ ಇರಲಿಲ್ಲ ಎಂದು ಈ ಪ್ರಕರಣದ ದೂರುದಾರ ಇರ್ಫಾನ್ ಅಬೂಬಕರ್ ಶೇಖ್ ಆರೋಪಿಸಿದ್ದಾರೆ. ಈ ಬಗ್ಗೆ ಮುಂಬೈನ ಪೈಧೋನಿ ಪೋಲೀಸ್‌ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

Exit mobile version