ಮಂಗಳೂರು: ಹಡಗುಗಳನ್ನು ದೀಪಗಳಿಂದ ಅಲಂಕರಿಸುವ ಮೂಲಕ ಕೊರೋನಾ ವಾರಿಯರ್ಸ್ ಗೆ ವಿಶಿಷ್ಟ ರೀತಿಯಿಂದ ಅಭಿನಂದನೆ ಸಲ್ಲಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಕೋವಿಡ್‌–19 ವಿರುದ್ಧ ಹೋರಾಡುತ್ತಿರುವ ಯೋಧರಿಗೆ ಭಾರತೀಯ ಕರಾವಳಿ ಕಾವಲು ಪಡೆ ಐಸಿಜಿಯ ವರಹಾ ಒಪಿವಿ ಮತ್ತು ಅಮರ್ತ್ಯಾ ಎಫ್‌ಪಿವಿ ಹಡಗನ್ನು ದೀಪಗಳಿಂದ ಬೆಳಗಿಸುವ ಮೂಲಕ ಇಂಡಿಯಾ ಥ್ಯಾಂಕ್ಸ್ ಕೋವಿಡ್–19 ವಾರಿಯರ್ಸ್ ಎಂದು ಗೌರವ ಸೂಚಿಸಲಾಯಿತು.

ದೀಪಾಲಂಕಾರದ ಮೂಲಕ ಕೊರೋನಾ ವಾರಿಯರ್ಸ್ ಗೆ ಅಭಿನಂದನೆ ಸಲ್ಲಿಸಿದ ದೃಷ್ಯ

ಈ ಹಡಗುಗಳು ಪಣಂಬೂರಿನ ತೀರಕ್ಕೆ ಸಮೀಪ ಬಂದ ಕಾರಣ ಅಂಚಿನಲ್ಲಿ ಹಸಿರು ಬೆಳಕು ಹಾಗೂ ಬೆಳಕಿನ ಚಿತ್ರಣಗಳು ಸುಂದರವಾಗಿ ಗೋಚರಿಸಿದವು.
ಕೋವಿಡ್–19 ವಾರಿಯರ್ಸ್ ಶ್ರಮವನ್ನು ಅಭಿನಂದಿಸಲು ಕರಾವಳಿ ತೀರದ ಸುಮಾರು 25 ಕಡೆಗಳಲ್ಲಿ ಕರಾವಳಿ ಕಾವಲು ಪಡೆಯು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ದೇಶದಾದ್ಯಂತ ಒಟ್ಟು ಸುಮಾರು 46 ಹಡಗುಗಳು, ಹೆಲಿಕಾಪ್ಟರ್‌ಗಳು ಪಾಲ್ಗೊಂಡಿದ್ದವು.

Leave a Reply

Your email address will not be published. Required fields are marked *

You May Also Like

ಮುದ್ದು ಮಾಡೋ ಗೆಳೆಯ ಪೋಸ್ಟರ್ ಅನಾವರಣ

ಆರ್ ಟಿ ರೆಕಾರ್ಡಿಂಗ್ ಸ್ಟುಡಿಯೋ ಪ್ರೊಡಕ್ಷನ್ ಬಾಗಲಕೋಟೆ ಅವರ ಮುದ್ದು ಮಾಡೋ ಗೆಳೆಯ ಮ್ಯೂಸಿಕ್ ಆಲ್ಬಂ ಸಾಂಗ್ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಾಗಲಕೋಟೆಯ ಸಮಗ್ರ ಜೀವನ ವಿಕಾಸ ಸಂಸ್ಥೆಯ ಅಂಧ ಮಕ್ಕಳ ವಸತಿ ಶಾಲೆಯಲ್ಲಿ ಬಿಡುಗಡೆ ಮಾಡಲಾಯಿತು.

ಕೊರೊನಾ ಕಾಟ: ರಾಜಸ್ಥಾನ ಗಡಿ ಬಂದ್!!

ಜೈಪುರ: ಮಹಾಮಾರಿಯ ಅಟ್ಟಹಾಸ ದೇಶದ ಹಲವು ರಾಜ್ಯಗಳಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನದ ಗಡಿ ಬಂದ್…

ಮುಂಬಯಿನಲ್ಲಿ ಮನೆ ಮಾಡುತ್ತಿರುವ ಆತಂಕ!

ಮಹಾರಾಷ್ಟ್ರದಲ್ಲಿ ಕೊರೊನಾ ಮಹಾಮಾರಿ ಮಿತಿ ಮೀರಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಹೀಗಾಗಿ ರಾಜ್ಯದ ಜನತೆಯಲ್ಲಿ ಆತಂಕ ಮನೆ ಮಾಡಿದೆ.

ಒಂದೇ ದಿನದಲ್ಲಿ 10,956 ಕೊರೊನಾ ಪಾಸಿಟಿವ್: 4ನೇ ಸ್ಥಾನಕ್ಕೇರಿದ ಭಾರತ!

ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 10,956 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ…