ಚೆನ್ನೈ: ಇಲ್ಲಿಯ ಬೀದಿಯೊಂದರಲ್ಲಿಯೇ ದಾಖಲೆಯ 42 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ವಿಆರ್ ಪಿಲೈ ಬೀದಿಯಲ್ಲಿ ಟಿ, ಕಾಫಿ ಮತ್ತಿತರ ಸ್ನ್ಯಾಕ್ಸ್ ವಿತರಿಸುತ್ತಿದ್ದ ಇಬ್ಬರಲ್ಲಿ ಕೊರೊನಾ ದೃಢಪಟ್ಟಿತ್ತು. ಆನಂತರ ಇಡೀ ಬೀದಿಗೆ ಅಂಟಿಕೊಂಡಿದೆ. ಸದ್ಯ ಬರೋಬ್ಬರಿ 42 ಜನರನ್ನು ಅದು ತಲುಪಿದೆ.
ಸೋಂಕಿನ ಮೂಲವೆಂದು ಶಂಕಿಸಲಾಗಿರುವ ಎರಡು ಪ್ರಾಥಮಿಕ ಪ್ರಕರಣಗಳ ವ್ಯಕ್ತಿಗಳು 35 ಮತ್ತು 49 ವಯಸ್ಸಿನವರಾಗಿದ್ದು, ವಿಆರ್ ಪಿಲೈ ಸ್ಟ್ರೀಟ್ ನಿವಾಸಿಯಾಗಿದ್ದಾರೆ. ಬೇಯಿಸಿದ ಆಹಾರ ವಿತರಿಸುವುದನ್ನು ಪಾಲಿಕೆ ತಡೆಗಟ್ಟಿದ್ದರೂ ಇವರಿಬ್ಬರೂ ಒಟ್ಟಾಗಿ ಬೇಯಿಸಿದ ಆಹಾರವನ್ನು ವಿತರಿಸುತ್ತಿದ್ದರು ಎನ್ನಲಾಗಿದೆ.
ಇವರಿಬ್ಬರೂ ಹೇಗೆ ಸೋಂಕಿಗೆ ತುತ್ತಾದರು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅವರು ಚೆನ್ನೈ ನಗರದಲ್ಲಿ ಸ್ವಲ್ಪ ಅಡ್ಡಾಡಿರುವುದಾಗಿ ತಿಳಿಸಿದ್ದು, ಸದ್ಯ ಎಲ್ಲರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಎಂದು ಕಾರ್ಪೋರೇಷನ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ಪೊಲೀಸ್ ಇಲಾಖೆಗೆ ಸೇರಿದ ಜಾಗವನ್ನೇ ಅತಿಕ್ರಮಣ ಮಾಡಿದ ಜನರು!

ಧಾರವಾಡ : ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಜಾಗಗಳನ್ನು ವಶಕ್ಕೆ ಪಡೆಯಲು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ…

ರಾಜ್ಯದಲ್ಲಿಂದು 515 ಕೊರೊನಾ ಸೋಂಕಿತರಲ್ಲಿ 482 ಕೇಸ್ ಗೆ ಅಂತರಾಜ್ಯ ಹಿನ್ನೆಲೆ: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು 515 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 4835 ಕ್ಕೆ ಏರಿಕೆಯಾದಂತಾಗಿದೆ.

ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ

ಬೆಂಗಳೂರು: ದಿನದಿಂದ ದಿನಕ್ಕೆ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಕೊರೊನಾ ಸೋಂಕಿತರ ವಿಶೇಷ ಚಿಕಿತ್ಸೆಗಾಗಿ ಐಸಿಯು ವಾರ್ಡನಲ್ಲಿ…

ಕಾರ್ಮಿಕರನ್ನು ಗಮ್ಯ ಸ್ಥಾನಕ್ಕೆ ತಲುಪಿಸುತ್ತಿರುವ ರೈಲ್ವೆ ಇಲಾಖೆ!

ಲಾಕ್ ಡೌನ್ ಹಿನ್ನೆಲೆಯಲ್ಲಿ ಸಿಲುಕಿದ್ದ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಯಾತ್ರಾರ್ಥಿಗಳನ್ನು ಸಾಗಿಸುವ ಕಾರ್ಯ ನಡೆದಿದೆ. ವಿಶೇಷ ರೈಲಿನಲ್ಲಿ ಸುಮಾರು 1200 ವಲಸಿಗರನ್ನು ಹೊತ್ತ ರೈಲು ತನ್ನ ಪ್ರಯಾಣ ಪ್ರಾರಂಭಿಸಿದೆ.