ಶನಿವಾರ ಒಂದೇ ದಿನ ದಾಖಲೆಯ ಸೋಂಕಿತರು ಪತ್ತೆ!!

ನವದೆಹಲಿ : ದೇಶದಲ್ಲಿ ಶನಿವಾರ ಒಂದೇ ದಿನ 2,294 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಅಲ್ಲದೇ, ಇಲ್ಲಿಯವರೆಗೆ 1,223 ಜನ ಸೋಂಕಿಗೆ ಬಲಿಯಾಗಿದ್ದಾರೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶನಿವಾರ ಮಾಹಿತಿ ನೀಡಿದೆ.

ಕೊರೊನಾ ಮಟ್ಟಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮೂರನೇ ಬಾರಿಯೂ ಲಾಕ್ ಡೌನ್ ನ್ನು ವಿಸ್ತರಿಸಿ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಮೇ. 17ರ ವರೆಗೂ ಲಾಕ್ ಡೌನ್ ಮುಂದುವರೆದಿದೆ. ಆದರೂ ಮಹಾಮಾರಿ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಇಲ್ಲಿಯವರೆಗೂ 10,018 ಜನ ಸೋಂಕಿನಿಂದ ಗುಣ ಹೊಂದಿದ್ದಾರೆ. ಆದರೆ, ಕೊರೊನಾ ವಿರುದ್ದದ ಹೊರಾಟದ ಜೊತೆಗೇ ಆರ್ಥಿಕ ಚಟುವಟಿಕೆಗಳನ್ನೂ ಹಂತಹಂತವಾಗಿ ಆರಂಭಿಸುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಹೆಚ್ಚಿನ ವಿನಾಯಿತಿಗಳನ್ನು ಪ್ರಕಟಿಸಿದೆ.




		
Leave a Reply

Your email address will not be published. Required fields are marked *

You May Also Like

ದೇಶದಲ್ಲಿ ಒಂದೇ ದಿನ 7,466 ಹೊಸ ಕೊರೊನಾ ಪ್ರಕರಣ: 175 ಸಾವು

ದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 7,466 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಇದೇ ಅವಧಿಯಲ್ಲಿ…

ಸಾವಿನ ಸಂಖ್ಯೆಯಲ್ಲಿ 10 ಸಾವಿರದ ಗಡಿ ದಾಟಿದ ರಾಜ್ಯ!

ಬೆಂಗಳೂರು : ರಾಜ್ಯದಲ್ಲಿ ಮಹಾಮಾರಿ ಮತ್ತೊಂದು ದಾಖಲೆ ಬರೆದಿದೆ. ಅಲ್ಲದೇ, ಸಾವಿನ ಸಂಖ್ಯೆಯಲ್ಲಿ ರಾಜ್ಯವು 10 ಸಾವಿರದ ಮೈಲಿಗಲ್ಲು ದಾಟಿದೆ.

ಕೋವಿಡ್‌ ಚಿಕಿತ್ಸೆ, ಸೌಲಭ್ಯಗಳಲ್ಲಿ ಲೋಪಗಳಾದರೆ ಸಂಸ್ಥೆಯ ಮುಖ್ಯಸ್ಥರೆ ಹೊಣೆ: ಸಚಿವ ಸುಧಾಕರ್

ಬೆಂಗಳೂರು: ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ಮತ್ತು ಸೌಲಭ್ಯಗಳನ್ನು ನೀಡುವ ವಿಷಯದಲ್ಲಿ ಲೋಪ ಅಥವಾ ದೂರುಗಳು ಕಂಡುಬಂದಲ್ಲಿ…