ಯಾದಗಿರಿ: ಜಿಲ್ಲೆಯಲ್ಲಿ ಇಂದು ಕೂಡ 7 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ನಿಟ್ಟಿನಲ್ಲಿ ಸೋಂಕಿತರ ಸಂಖ್ಯೆ 163ಕ್ಕೆ ಏರಿಕೆಯಾಗಿದೆ.

ಸೋಂಕಿತರೆಲ್ಲರೂ ಅಂತರ ರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಮಹಾರಾಷ್ಟ್ರದ ಮುಂಬಯಿ, ಪುಣೆ ಮತ್ತು ಸೊಲ್ಲಾಪುರಿಂದ ಜಿಲ್ಲೆಗೆ ಹಿಂದಿರುಗಿರುವ ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಇಲ್ಲಿಯವರಿಗೆ ಕೊರೊನಾ ಸೋಂಕು ಖಚಿತಪಟ್ಟ ಒಟ್ಟು 163 ಪ್ರಕರಣಗಳ ಪೈಕಿ 9 ಜನ ಗುಣಮುಖರಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ.

ಸುರಪುರ ತಾಲೂಕಿನ ಬೇವಿನಾಳ ಎಸ್.ಕೆ. ಗ್ರಾಮದ 28 ವರ್ಷದ ಯುವಕ, 24 ವರ್ಷದ ಪುರುಷ, 28 ವರ್ಷದ ಪುರುಷ, ಯಾದಗಿರಿ ತಾಲೂಕಿನ ಸೈದಾಪೂರ ಗ್ರಾಮದ 24 ವರ್ಷದ ಮಹಿಳೆ, ಶಹಾಪೂರ ತಾಲೂಕಿನ ಉಕ್ಕಿನಾಳ ತಾಂಡಾದ 4 ವರ್ಷದ ಗಂಡು ಮಗು, ಗುರುಮಿಠ್ಠಕಲ್ ನಗರದ 46 ವರ್ಷದ ಪುರುಷ, ಯಾದಗಿರಿ ತಾಲೂಕಿನ ಮೋಟನಳ್ಳಿ ತಾಂಡಾದ 11 ವರ್ಷದ ಬಾಲಕ ಸೇರಿದಂತೆ ಇಂದು 7 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

Leave a Reply

Your email address will not be published. Required fields are marked *

You May Also Like

ಸಂಕ್ರಾಂತಿಯ ಪುಣ್ಯಸ್ನಾನ : ಇಬ್ಬರು ಯುವಕರು ನದಿ ಪಾಲು.

ರಾಯಚೂರು:ಮಕರ ಸಂಕ್ರಾಂತಿಯ ಪುಣ್ಯಸ್ನಾನ ಮಾಡುವುದಕ್ಕಾಗಿ ತೆರಳಿದ ರಾಯಚೂರಿನ ಇಬ್ಬರು ಯುವಕರು ಕೃಷ್ಣಾ ನದಿಯ ಪಾಲಾಗಿದ್ದಾರೆ.ಸಂಕ್ರಾಂತಿ ಪೀಡೆ…

ಒಂದೇ ದಿನಕ್ಕೆ ರಾಜ್ಯದಲ್ಲಿ 50 ಪಾಸಿಟಿವ್

ಒಂದೇ ದಿನಕ್ಕೆ ರಾಜ್ಯದಲ್ಲಿ 50 ಪಾಸಿಟಿವ್ ಬೆಂಗಳೂರು: ರಾಜ್ಯದಲ್ಲಿ ಒಂದೇ ದಿನದಲ್ಲಿ 50 ಪಾಸಿಟಿವ್ ಪ್ರಕರಣಗಳು…

ಗುರು-ಶಿಷ್ಯರ ಸಂಬಂಧ ಪವಿತ್ರ- ಜಿ.ಎಂ. ಕೋಟ್ಯಾಳ

ಆಲಮಟ್ಟಿ : ಗುರು ಶಿಷ್ಯರ ಸಂಬಂಧ ಬಹಳಷ್ಟು ಪವಿತ್ರಮಯ. ಆದರೆ ಇತ್ತಿತ್ತಲಾಗಿ ಆ ಭಾವ ಕಣ್ಮರೆಯಾಗುತ್ತಿದೆ.…