ಬೀದರ್: ಲಾಕ್ ಡೌನ್ ನಿಂದಾಗಿ ಅದೆಷ್ಟೋ ಜನರು ಆಹಾರಕ್ಕೆ ಪರಿತಪಿಸುವಂತಾಗಿದೆ. ಅಂಥದ್ದರಲ್ಲ ಮೂಕ ಪ್ರಾಣಿಗಳ ಮೂಕ ವೇದನೆ ಯಾರಿಗೆ ಅರ್ಥವಾಗಬೇಕು ಹೇಳಿ?

ಆದರೆ ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದ ಹುಮನಾಬಾದ್ ರಸ್ತೆಯಲ್ಲಿರುವ ಚೇಕ್ ಪೊಸ್ಟ್ ನಲ್ಲಿ ಮಂಗಗಳಿಗೆ ಆಹಾರ ನೀಡುವ ಮೂಲಕ ಪೊಲೀಸರು ಪ್ರಾಣಿಗಳ ಹಸಿವಿಗೆ ಮಿಡಿದಿದ್ದಾರೆ. ಈ ಮೂಲಕ ಖಾಕಿಯೊಳಗಿನ ಅಂತಃ ಕರಣದ ಮನಸ್ಸು ಜನರ ಮೆಚ್ಚುಗೆಗೆ ಕಾರಣವಾಗಿದೆ.

ಪೇದೆಗಳಾದ ಕನಕ ಪೂಜಾರಿ ಹಾಗೂ ಶರಣು ಪವಾರ ಮಂಗಗಳಿಗೆ ಬಿಸ್ಕೇಟ್, ಆಹಾರ, ತರಕಾರಿ ಹೀಗೆ ನಿತ್ಯ ಆಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಮೂಕ ಪ್ರಾಣಿಗಳ ಮೂಕ ವೇದನೆಗೆ ಮಿಡಿದ ಪೊಲೀಸರು

ಲಾಕ್ ಡೌನ್ ಹಿನ್ನೆಲೆ ಪ್ರಾಣಿಗಳಿಗೂ ಕೂಡ ಆಹಾರ ಸಿಗದಂತಾಗಿದೆ. ಹೀಗಾಗಿ ಇಲ್ಲಿನ ಚೆಕ್ ಪೋಸ್ಟ್ ಬಳಿ ಇರುವ ಮರಗಳಲ್ಲಿ ಬೀಡಾರ ಹೂಡಿರುವ ವಾನರ ಸೇನೆಯ ಆರ್ಥನಾದವನ್ನು ಈ ಪೊಲೀಸರು ಅರ್ಥೈಸಿಕೊಂಡಿದ್ದಾರೆ. ಮಂಗಗಳೊಂದಿಗೆ ಸ್ನೇಹ ಬೆಳೆಸುವ ಮೂಲಕ ನಿತ್ಯ ಆಹಾರ ಪೂರೈಸಿ ಪ್ರಾಣಿಗಳ ಮೂಕ ವೇದನೆಗೆ ಸ್ಪಂದಿಸಿದ್ದಾರೆ.

ಪೊಲೀಸರು ಅದೆಷ್ಟೋ ಕಡೆಗಳಲ್ಲಿ ಹಸಿದ ಹೊಟ್ಟೆಗೆ ಅನ್ನ ನೀರು ನೀಡಿ ಮಾನವೀಯತೆ ಪ್ರದರ್ಶಿಸಿದ್ದಾರೆ. ಆದರೆ ಇಲ್ಲಿ ಪ್ರಾಣಿಗಳ ಮೇಲೂ ದಯೆ ತೋರಿರುವ ಮೂಲಕ ಪೊಲೀಸರ ಖಾಕಿಯೊಳಗಿನ ಕಾಳಜಿ ತೋರಿಸಿದ್ದಾರೆ.

ಕೊರೋನಾ ಸಂಕಷ್ಟ ಕಾಲದಲ್ಲಿಯೂ ಒತ್ತಡದ ಕೆಲಸದ ಮದ್ಯದಲ್ಲಿಯೂ ಇಂಥಹ ಜನಪರ, ಜೀವಪರ ಕಾರ್ಯಗಳಿಗೆ ಮಿಡಿಯುತ್ತಿರುವ ಪೊಲೀಸರಿಗೊಂದ ಸಲಾಂ.

Leave a Reply

Your email address will not be published. Required fields are marked *

You May Also Like

ಗಡಿಯಲ್ಲಿ ಕ್ಯಾತೆ ಆರಂಭಿಸಿದ ಚೀನಾ!

ನವದೆಹಲಿ: ಉತ್ತರ ಸಿಕ್ಕಿಂ ನಲ್ಲಿ ಚೀನಾದ ಸೈನಿಕರು ಭಾರತೀಯ ಸೈನಿಕರೊಂದಿಗೆ ಕ್ಯಾತಿ ತೆಗೆದಿದ್ದಾರೆ. ಪರಿಣಾಮವಾಗಿ ಭಾರತೀಯ…

22ನೆ ಸ್ಥಾನದಲ್ಲಿ ಗದಗ ಜಿಲ್ಲೆ : ಕಲಾ ವಿಭಾಗದಲ್ಲಿ ಕಳಪೆ, ಪಿಯುಸಿ-2 ಫಲಿತಾಂಶ ವಿವರ

ಕಳೆದ ಬಾರಿ ಶೇ. 57ರಷ್ಟು ಫಲಿತಾಂಶ ಪಡೆದಿದ್ದ ಜಿಲ್ಲೆ ಈ ಬಾರಿ ಶೇ.63 ಸಾಧನೆ ಮಾಡಿದೆ. ಒಟ್ಟಾರೆ ಜಿಲ್ಲಾವಾರು ಫಲಿತಾಂಶದಲ್ಲಿ ಕಳಪೆ ಸಾಧನೆ ಮಾಡಿದ್ದು, 22 ನೆ ಸ್ಥಾನದಲ್ಲಿದೆ.

ಗದಗ ಬೆಟಗೇರಿ ನಗರಸಭೆ ಸಾರ್ವತ್ರಿಕ ಚುನಾವಣೆ ಅಂತಿಮವಾಗಿ ಚುನಾವಣಾ ಕಣದಲ್ಲುಳಿದ ಅಭ್ಯರ್ಥಿಗಳ ಹಾಗೂ ಚಿಹ್ನೆ ಹಂಚಿಕೆ ವಾರ್ಡವಾರು ವಿವರ

ಗದಗ :ಗದಗ-ಬೆಟಗೇರಿ ನಗರಸಭೆ ಸಾರ್ವತ್ರಿಕ ಚುನಾವಣೆಗೆ ಅಂತಿಮವಾಗಿ  ಕಣದಲ್ಲಿ ಉಳಿದ ಅಭ್ಯರ್ಥಿಗಳ ವಿವರ ಇಂತಿದೆ: ವಾರ್ಡ…

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಬೆಳಗಾವಿ : ರಾಯಬಾಗ ರೈಲ್ವೆ ನಿಲ್ದಾಣದ ಬಳಿ ಒಂದೇ ಕುಟುಂಬದ ನಾಲ್ವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.