ನವದೆಹಲಿ : ಮಹಾಮಾರಿ ಕೊರೊನಾದಿಂದಾಗಿ ಜಿಡಿಪಿ ಕುಸಿತ ಕಂಡಿದ್ದು, ಈ ವರ್ಷದಲ್ಲಿ ಜಿಡಿಪಿ ಶೇ.0.2ಕ್ಕೆ ಕುಸಿಯಲಿದೆ ಎಂದು ಮೂಡೀಸ್ ಇನ್ವೆಸ್ಟರ್ಸ್ ಸರ್ವೀಸ್ ಅಂದಾಜು ಮಾಡಿದೆ.

ಈ ಸಮಯದಲ್ಲಿ ಚೀನಾದ ಜಿಡಿಪಿ ಶೇ.1ರಷ್ಟಿರಲಿದೆ. ಈ ವರ್ಷ ಶೇ. 2.5ರಷ್ಟು ಜಿಡಿಪಿ ಇರಲಿದೆ ಎಂದು ದೇಶದ ಆರ್ಥಿಕ ಬೆಳವಣಿಗೆ ದರ ಪರಿಷ್ಕರಿಸುವ ಮೂಡೀಸ್ ಹೇಳಿತ್ತು. ಆದರೆ, ಕೊರೊನಾದ ಲಾಕ್ ಡೌನ್ ನಿಂದಾಗಿ ಆರ್ಥಿಕತೆಗೆ ದೊಡ್ಡ ಪೆಟ್ಟು ಬಿದ್ದಂತಾಗಿದೆ.

2020-21ರಲ್ಲಿ ಜಿಡಿಪಿ ಶೇ.6.2ಕ್ಕೆ ಏರಲಿದೆ ಎಂದು ವರದಿ ಹೇಳಿತ್ತು. ಫೆಬ್ರವರಿಯಲ್ಲಿ ಪ್ರಕಟಿಸಿದ ವರದಿಯಂತೆ ಮೂಡೀಸ್‌ ಕ್ರೆಡಿಟ್‌ ರೇಟಿಂಗ್‌ ಏಜೆನ್ಸಿಯು 2020ರಲ್ಲಿ ಭಾರತದ ಜಿಡಿಪಿ ಮುನ್ನೋಟವನ್ನು ಶೇ.6.6ರಿಂದ ಶೇ.5.4ಕ್ಕೆ ಇಳಿಸಿತ್ತು.

ಕಳೆದೆರಡು ವರ್ಷಗಳಿಂದ ಜಿಡಿಪಿ ಇಳಿಕೆ ಕಾಣುತ್ತಿತ್ತು. ಅಲ್ಲದೇ, ಈ ವರ್ಷದ ತ್ರೈಮಾಸಿಕದಲ್ಲಿ ಚೇತರಿಕೆ ಕಾಣುವ ಸಾಧ್ಯತೆ ಇದೆ ಎಂಬ ಭರವಸೆಯನ್ನು ಕೂಡ ಅದು ನೀಡಿತ್ತು. ಆದರೆ, ಕೊರೊನಾದಿಂದಾಗಿ ಜಾಗತಿಕ ಆರ್ಥಿಕತೆಯ ಮೇಲೆಯೇ ದೊಡ್ಡ ಹೊಡೆತ ಬಿದ್ದಿದೆ. ಪರಿಣಾಮವಾಗಿ ನಿರೀಕ್ಷಿಸಿದಷ್ಟು ಆರ್ಥಿಕತೆ ವೇಗ ಪಡೆಯುವುದಿಲ್ಲ ಎನ್ನಲಾಗುತ್ತಿದೆ.

ರಿಸರ್ವ್ ಬ್ಯಾಂಕ್‌ ತನ್ನ ಬಡ್ಡಿ ದರ ಕಡಿತಗೊಳಿಸಿದ್ದರೂ ಭಾರತದ ಬ್ಯಾಂಕ್‌ಗಳು ಅಗ್ಗದ ದರದಲ್ಲಿ ಸಾಲ ವಿತರಣೆಗೆ ಮುಂದಾಗುತ್ತಿಲ್ಲ. ಇದೇ ಸಮಸ್ಯೆಯಾಗಿದೆ ಎಂದು ಮೂಡೀಸ್‌ ವರದಿ ಈ ಹಿಂದೆ ತಿಳಿಸಿತ್ತು.

Leave a Reply

Your email address will not be published. Required fields are marked *

You May Also Like

ಸಾರಿಗೆ ನೌಕರರಿಗೆ ಅಭದ್ರತೆ: ಉದ್ಯೋಗ ಕಡಿತಕ್ಕೆ ಸ್ವಯಂ ನಿವೃತ್ತಿಯ ಮಾಸ್ಟರ್ ಪ್ಲ್ಯಾನ್..!

ಬೆಂಗಳೂರು: ಈಗಾಗಲೇ ಸಾರಿಗೆ ಇಲಾಖೆಯ 2000 ಗುತ್ತಿಗೆ ನೌಕರರನ್ನು ಮನೆಗೆ ಕಳುಹಿಸುತ್ತಿದೆ. ಇದರಿಂದ ಖಾಯಂ ನೌಕರರಿಗೂ…

ಡೆಂಜರ್ ಝೋನ್ ನಲ್ಲಿ ಭಯಾನಕ ಘಟನೆ: ಕಿಟ್ ಗಾಗಿ ಮಗ್ಗರಿಸಿ ಬಿದ್ದ ಮಹಿಳೆಯರು

ಆಹಾರ ಕಿಟ್ ಪಡೆಯಲು ಹೋದ ಮಹಿಳೆಯರು ಮಗ್ಗರಿಸಿ ಬಿದ್ದಿದ್ದಾರೆ. ನಿಜಕ್ಕೂ ಇದು ಭಯಾನಕ ಘಟನೆ. ಕೊರೋನಾ ಕರಾಳ ಛಾಯೆಯ ಲಕ್ಷಣವೇ ಸರಿ.

ಸರಳ ಗಣರಾಜ್ಯೋತ್ಸವ ಆಲಮಟ್ಟಿ ಪ್ರವಾಸಿ ತಾಣ ಉತ್ತೇಜನಕ್ಕೆ ಸಂಕಲ್ಪ- ಎಚ್.ಸುರೇಶ್

ಆಲಮಟ್ಟಿ: ಈ ಭಾಗದ ಪ್ರವಾಸಿ ತಾಣವಾಗಿ ಖ್ಯಾತಿ ಪಡೆಯುತ್ತಿರುವ ಆಲಮಟ್ಟಿಯನ್ನು ಇನ್ನಷ್ಟು ಪ್ರವಾಸಿಗರನ್ನು ಇತ್ತ ಆಕಷಿ೯ಸಿ…

ಚೀನಾದಲ್ಲಿ ಶುರುವಾಗಿದೆ ಕೊರೊನಾ ಎರಡನೇ ಅಲೆ!

ಬೀಜಿಂಗ್: ಚೀನಾದಲ್ಲಿ ಮತ್ತೊಮ್ಮೆ ಕೊರೊನಾ ಅಲೆ ಶುರುವಾಗಿದೆ. ಹುಟ್ಟು ಪಡೆದಿರುವ ಬೀಜಿಂಗ್ ನಲ್ಲಿಯೇ ಸದ್ಯ ಅದರ…