ಕಲಬುರಗಿ : ಜಿಲ್ಲೆಯಲ್ಲಿ ಕೊರೊನಾ ಕಾಟ ಇನ್ನೂ ತಪ್ಪುತ್ತಿಲ್ಲ. ಸದ್ಯ ಕೊರೊನಾ ಅರ್ಧ ಶತಕ ಮೀರಿ ಸಾಗುತ್ತಿದೆ. ಜಿಲ್ಲೆಯಾದ್ಯಂತ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ವಿಸ್ತರಿಸಲಾಗಿದೆ.
ಜಿಲ್ಲೆಯಾದ್ಯಂತ ಜಾರಿಯಲ್ಲಿರುವ ಸಿ‌.ಆರ್.ಪಿ‌.ಸಿ. 1973 ಕಲಂ‌ 144 ರನ್ವಯ ನಿಷೇಧಾಜ್ಞೆಯನ್ನು ಮೇ-7ರ ವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಶರತ್‌ ಬಿ. ಆದೇಶ ಹೊರಡಿಸಿದ್ದಾರೆ.
ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ‌ ಮನೆ – ಮನೆಗೆ ಭೇಟಿ‌ ನೀಡಿ ILI/SARI/ತೀವ್ರ ರೀತಿಯ ಆರೋಗ್ಯ ಸಮಸ್ಯೆ ಹೊಂದಿರುವವರ ಪತ್ತೆಗೆ ಸಾರ್ವತ್ರಿಕ ಸಮೀಕ್ಷೆ ನಡೆಯಲಿದೆ.
3 ದಿನದಲ್ಲಿ ಈ ಸಮೀಕ್ಷೆ ಪೂರ್ಣಗೊಳ್ಳಲಿದ್ದು, ಮನೆಗೆ ಬಂದ‌ ಸಿಬ್ಬಂದಿಗಳಿಗೆ‌ ಮಾಹಿತಿ ನೀಡಿ ಸಹಕರಿಸಿ ಎಂದು ಸಾರ್ವಜನಿಕರಲ್ಲಿ ಕೋರಿದ್ದಾರೆ.

Leave a Reply

Your email address will not be published. Required fields are marked *

You May Also Like

ಪಾನ ನಿಷೇಧ ಒಂದು ವಿಶ್ಲೇಷಣೆ

ಈಗ ನಲವತ್ತು ದಿವಸದಿಂದ ಬಂದ್ ಆಗಿದ್ದ ಮದ್ಯ ಮಾರಾಟ ಈಗ ಪುನರಾರಂಭವಾಗಿದೆ. ಈಗ ಕೆಲವರು ರಾಜಕೀಯ, ಕೆಲವರು ಸಾಮಾಜಿಕ ಕಳಕಳಿಯಿಂದ ಮತ್ತೆ ಕೆಲವರು ಸುಮ್ಮನೆ ಪ್ರಚಾರದ ಕಾರಣ ಪಾನ ನಿಷೇಧ ಮಾಡಿರಿ ಎಂದು ಸರಕಾರಕ್ಕೆ ಹೇಳುತ್ತಿದ್ದಾರೆ. ಈ ಬಗ್ಗೆ ಧಾರವಾಡದ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಎಸ್.ಎಚ್.ಮಿಟ್ಟಲಕೊಡ ಅವರ ವಿಶ್ಲೇಷಣೆ ಇಲ್ಲಿದೆ…

ಹಿಜಾಬ್ ಪ್ರಕರಣ: ಅರ್ಜಿದಾರರ ಅರ್ಜಿ ವಜಾ

ಬೆಂಗಳೂರು: ಹಿಜಾಬ್ ಪ್ರಕರಣದ ತಿರ್ಪುನ್ನು ಇಡಿ ದೇಶದ ಜನತೆಯ ಚಿತ್ತ ನ್ಯಾಯಾಲಯದತ್ತ ನೆಟ್ಟಿತ್ತು.ಅದರಲ್ಲೂ ಕರ್ನಾಟಕದ ನ್ಯಾಯಾಲಯವು…

ಬಿಜೆಪಿಗೆ ಹೆಚ್ಚು ಸ್ಥಾನ: ರಾಜ್ಯಸಭೆಯಲ್ಲೂ ಬಿಜೆಪಿ ಮೇಲುಗೈ

ನವದೆಹಲಿ : ರಾಜ್ಯ ಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಮೇಲ್ಮನೆಯಲ್ಲಿ ಬಿಜೆಪಿಯು ತನ್ನ ಸಂಖ್ಯಾ…

ಧಾರವಾಡದ ಕಂಡಕ್ಟರ್ ಗೆ ಗದಗನಲ್ಲಿ ಸೋಂಕು ಪತ್ತೆ

ಗದಗ: ಧಾರವಾಡ ಜಿಲ್ಲೆಯಿಂದ ಗದಗ ಜಿಲ್ಲೆಗೆ ಬಂದಿದ್ದ ಕಂಡಕ್ಟರ್ ಹಾಗೂ ಗದಗ ಮೂಲದ ಬೆಂಗಳೂರಿನ ಹೋಟೆಲ್…