ನವದೆಹಲಿ : ಕೇಂದ್ರ ಸರ್ಕಾರ ಹೊರ ಗುತ್ತಿಗೆ ಸಿಬ್ಬಂದಿ ಸೇರಿದಂತೆ ಎಲ್ಲ ಕೆಲಸಗಾರರು ಆರೋಗ್ಯಸೇತು ಆಪ್ ಅನ್ನು ಕಡ್ಡಾಯವಾಗಿ  ಬಳಸಬೇಕೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಸಿಬ್ಬಂದಿ ಸಚಿವಾಲಯ ಹೊರಡಿಸಿರುವ  ಜ್ಞಾಪನ ಪತ್ರದಲ್ಲಿ ಯಾವುದೇ ಸಿಬ್ಬಂದಿ ಕಚೇರಿಗೆ ತೆರಳುವ ಮೊದಲು, ಅಪ್ಲಿಕೇಶನ್‌ನಲ್ಲಿ ತಮ್ಮ ಸ್ಥಿತಿ ಪರೀಕ್ಷಿಸಿಕೊಳ್ಳಬೇಕು. ಅದು ಸುರಕ್ಷಿತ ಎಂದು ತೋರಿಸಿದಾಗ ಮಾತ್ರ ಕಚೇರಿಗೆ ಆಗಮಿಸಬೇಕು ಎಂದು  ಸರ್ಕಾರ ಹೇಳಿದೆ.

ಕೊರೊನಾ ಸೋಂಕಿತ ವ್ಯಕ್ತಿಗೆ ಅಥವಾ ಸೋಂಕಿತ ವ್ಯಕ್ತಿಯೊಂದಿಗೆ ಇತ್ತೀಚಿನ ಸಂಪರ್ಕಕ್ಕೆ ಬಳಕೆದಾರ ಅಥವಾ ಉದ್ಯೋಗಿ ಬಂದರೆ, ಅವನ ಅಥವಾ ಸ್ಥಳದ ಆಧಾರದ ಮೇಲೆ ಅಪಾಯದ ಕುರಿತು ಅಪ್ಲಿಕೇಶನ್, ಸಂದೇಶ ನೀಡಿದರೆ, ಅಂತಹ ಸಿಬ್ಬಂದಿ 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಬೇಕು.

ಆರೋಗ್ಯ ಸೇತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಅಭಿವೃದ್ಧಿಪಡಿಸಿದ ಮೊಬೈಲ್ ಅಪ್ಲಿಕೇಶನ್‌. ಇದರ ಬಳಕೆಯಿಂದ ಕೊರೊನಾ ಸೋಂಕಿನ ಅಪಾಯ ಗುರುತಿಸಬಹುದು. 10 ಭಾರತೀಯ ಭಾಷೆಗಳು ಹಾಗೂ ಇಂಗ್ಲಿಷ್‌ನಲ್ಲಿ ಈ ಅಪ್ಲಿಕೇಶನ್ ಲಭ್ಯವಿದೆ.

Leave a Reply

Your email address will not be published. Required fields are marked *

You May Also Like

ವಿದ್ಯಾರ್ಥಿಗಳಿಗೆ ಬಸ್ ಪಾಸ್ ಅವಧಿ ಫೆ.28 ರವರೆಗೆ ವಿಸ್ತರಣೆ

ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭದ ನಂತ್ರ ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಅವಧಿ ಮುಕ್ತಾಯಗೊಂಡಿದ್ದರೂ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಜ.31 ರ ವರೆಗೆ ಅವಕಾಶ ನೀಡಿ ಕೆಎಸ್‌ಆರ್‌ಟಿಸಿ ಆದೇಶ ನೀಡಿತ್ತು.

ಗದಗ ನಗರ ಸಭೆ ಚುನಾವಣೆ: ವ್ಹಿಲ್ ಚೆರ್ ನಲ್ಲಿ ಬಂದು ಮತಚಲಾಯಿಸಿದ ವೃದ್ದರು

ಗದಗ: ನಗರಸಭೆ ಯ ಚುನಾವಣೆಯ ಮತದಾನ ಇಂದು ನಡೆಯುತ್ತಿದ್ದು ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಮತಗಟ್ಟೆಯ…

ಕತ್ತಿ ವರಸೆಗೆ ಶಾಕ್ ಕೊಟ್ರು ಸಿಎಂ..!

ಇತ್ತೀಗಷ್ಟೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಶಾಸಕ ಉಮೇಶ್ ಕತ್ತಿ, ಡಿನ್ನರ್ ಪಾಲಿಟಿಕ್ಸ್ ನಡೆಸಿದ್ರು. ಇದರಲ್ಲಿ ಕೆಲವು ಅತೃಪ್ತ ಶಾಸಕರು ಭಾಗವಹಿಸಿದ್ದು ಬಿಜೆಪಿಯಲ್ಲಿ ಕುಚ್… ಕುಚ್ ಹೋ ರಹಾ ಹೈ ಎಂಬ ಚರ್ಚೆಗೆ ಮುನ್ನುಡಿ ಬರೆದಿತ್ತು. ಉಮೇಶ್ ಕತ್ತಿ ಮನೆಯಲ್ಲಿ ಶೀಕರಣಿ ಊಟದ ರಾಜಕಾರಣದ ಬೆನ್ನಲ್ಲೆ ಸಿಎಂ ಬಿಎಸ್ವೈ ಪರ ಹಾಗೂ ವಿರೋಧ ಚರ್ಚೆಗಳು ನಡೆದವು. ಇದು ಸ್ವತ: ಸಿಎಂ ಯಡಿಯೂರಪ್ಪ ಅವರಿಗೂ ಮುಜುಗುರ ತಂದಿರಬಹುದು. ಆದರೆ ಬಿಎಸ್ವೈ ಹೈಕಮಾಂಡ್ ಮಟ್ಟದಲ್ಲಿ ಇನ್ನು ಪವರ್ ಫುಲ್ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಇದಕ್ಕೆ ಇಂದು ಜಿಲ್ಲಾ ಉಸ್ತುವಾರಿ ಸಚಿವರ ನೇಮಕವೇ ಸಾಕ್ಷಿಯಾಗಿದೆ.

ಸುರಕ್ಷೆ ಮತ್ತು ಪರಿಹಾರ ಕಾರ್ಯಗಳಿಗೆ ಸರ್ಕಾರದಿಂದ ಎಲ್ಲ ಅಗತ್ಯ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು

ಉತ್ತರಪ್ರಭ ಸುದ್ದಿ: ಬೆಂಗಳೂರು: ಆ. ೨-ಇಡೀ ರಾಜ್ಯದಲ್ಲಿ ಮತ್ತೆ ಮಳೆಯಾಗುತ್ತಿದೆ. ಕರಾವಳಿಯಲ್ಲಿ ಸಾವು-ನೋವುಗಳು ಆಗಿವೆ. ಈ…