ಲಖನೌ: ಕೋವಿಡ್-19 ವೇಳೆ ಕರ್ತವ್ಯ ನಿಷ್ಠೆ ಮೆರೆದು ಪ್ರಾಣ ಕಳೆದುಕೊಂಡ ಪತ್ರಕರ್ತರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ.
ಹಿಂದಿ ಪತ್ರಕರ್ತರ ದಿನಾಚರಣೆ ಅಂಗವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯಪ ಪೂರ್ವ ಹಾಗೂ ನಂತರ ದೇಶ ಕಟ್ಟುವಲ್ಲಿ ಹಿಂದಿ ಪತ್ರಕರ್ತರ ಪಾತ್ರ ಅಪಾರವಾಗಿದೆ ನಮ್ಮ ದೇಶವನ್ನು ಪ್ರಗತಿಯತ್ತ ಮುನ್ನಡೆಸುವ ಎಲ್ಲಾ ಪತ್ರಕರ್ತರಿಗೂ ನನ್ನ ನುಡಿ ನಮನಗಳನ್ನು ಅರ್ಪಿಸಿದರು. ಪತ್ರಕರ್ತರನ್ನು ಪ್ರೋತ್ಸಾಹಿಸಲು ಸರ್ಕಾರ ಸದಾ ಸಿದ್ಧವಾಗಿರುತ್ತದೆ. ಪತ್ರಕರ್ತರ ಕುಟುಂಬದವರು ಸಂಕಷ್ಟಕ್ಕೆ ಸಿಲುಕಿರುವುದರಿಂದ ಪ್ರಾಣ ಕಳೆದುಕೊಂಡ ಪತ್ರಕರ್ತರ ಕುಟುಂಬಕ್ಕೆ ಉತ್ತರಪ್ರದೇಶ ಸರ್ಕಾರದಿಂದ 10 ಲಕ್ಷ ರೂ. ಪರಿಹಾರ ನೀಡಿ, ಪತ್ರಕರ್ತರ ಕುಟುಂಬಕ್ಕೆ ನೆರವು ನೀಡಲು ಮುಂದಾಗಿದ್ದೇವೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು.

Leave a Reply

Your email address will not be published. Required fields are marked *

You May Also Like

ಕೊರೊನಾದಿಂದಾಗಿ ಮಲೆ ಮಹದೇಶ್ವರನಿಗೆ ಎಷ್ಟು ನಷ್ಟವಾಗಿದೆ ಗೊತ್ತಾ?

ಹುಂಡಿಯೊಂದರಲ್ಲಿಯೇ ಪ್ರತಿ ತಿಂಗಳು ಕೋಟಿ ರೂ.ಗೂ ಹೆಚ್ಚು ಸಂಗ್ರಹವಾಗುತ್ತಿತ್ತು. ಚಿನ್ನದ ತೇರು, ವಿವಿಧ ಸೇವೆ ಲಾಡು ಮಾರಾಟ ಹಾಗೂ ವಸತಿ ಗೃಹ ಮೊದಲಾದ ಮೂಲಗಳಿಂದ ಬರುತ್ತಿದ್ದ ಆದಾಯದಲ್ಲಿ ಇದೀಗ ಕೋಟಿಗಟ್ಟಲೆ ಕಡಿತವಾಗಿದೆ.

ಕಾಲುವೆಗೆ ಉರುಳಿ ಬಿದ್ದ ಕಾರು: ಇಬ್ಬರು ಸ್ಥಳದಲ್ಲೆ ಸಾವು

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಾವೇರಿ ತಾಲೂಕಿನ ಬಸವನಕಟ್ಟಿ ಗ್ರಾಮದ ಬಳಿ ನಡೆದಿದೆ.

ಮಾಜಿ ಭೂಗತ ದೊರೆ ಮುತ್ತಪ್ಪ ರೈ ನಿಧನ

ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ(68) ಇಂದು (ಶುಕ್ರವಾರ) ಬೆಳಿಗ್ಗೆ ನಿಧನರಾಗಿದ್ದಾರೆ. ಇಂದು ಸಂಜೆ 4 ಗಂಟೆಗೆ ರಾಮನಗರ ತಾಲೂಕಿನ ಬಿಡದಿಯಲ್ಲಿರುವ ಫಾರ್ಮ ಹೌಸ್ ನಲ್ಲಿ ಮುತ್ತಪ್ಪ ರೈ ಅವರ ಅಂತ್ಯಕ್ರಿಯೇ ನಡೆಯಲಿದೆ.