Browsing Tag
sundaresh babu
6 posts
ಮುಳಗುಂದ ಅಬ್ಬಿ ಕೆರೆಗೆ ಜಿಲ್ಲಾಧಿಕಾರಿ ಭೇಟಿ: ಸಾರ್ವಜನಿಕರ ಸಯೋಗದಲ್ಲಿ ಕೆರೆ ಅಭಿವೃದ್ದಿಗೆ ಸಲಹೆ.
ಪಟ್ಟಣಕ್ಕೆ ಶನಿವಾರ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಅವರು ಮಳೆಯಿಂದ ಭರ್ತಿಯಾಗಿರುವ ಅಬ್ಬಿ ಕೆರೆ ವೀಕ್ಷಣೆ ಮಾಡಿದರು. ನಂತರ ಸ್ಥಳಿಯ ಮುಖಂಡರೊಂದಿಗೆ ಚರ್ಚಿಸಿದ ಅವರು ಜಿಲ್ಲೆಯಲ್ಲಿ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಕೆರೆಗಳನ್ನು ಜನಪ್ರತಿನಿಧಿಗಳು, ಸಾರ್ವಜನಿಕರು ಕೆರೆ ಅಭಿವೃದ್ದಿ ಸಮಿತಿ ರಚಿಸಿಕೊಂಡು ಕೆರೆಗಳ ಅಭಿವೃದ್ದಿಗೆ ಮುಂದಾಗಬೇಕು. ಕೆರೆಗಳ ಸಂರಕ್ಷಣೆಯಿಂದ ಅಂತರ್ಜಲ ವೃದ್ದಿಸುವುದರ ಜತೆಗೆ ರೈತರಿಗೂ ನೀರಿನ ಬವಣೆ ನೀಗಲಿದೆ. ಈಗಾಗಲೇ ಮಳೆಯಿಂದ ಕೆರೆಗಳು ಭರ್ತಿಯಾಗಿದ್ದು ಕೆರೆ ದಡದಲ್ಲಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ಸಸಿ ನೆಡಬೇಕು ಎಂದು ಸಲಹೆ ನೀಡಿದರು.