Browsing Tag
rain
20 posts
ಮಳೆಗೆ ವೆಂಕಟಾಪೂರ ರಸ್ತೆ ಸಂಪೂರ್ಣ ಕಡಿತ
ಮಸ್ಕಿ: ಶುಕ್ರವಾರ ರಾತ್ರಿ ಸುರಿದ ಮಳೆಗೆ ಕಿರು ಹಳ್ಳ ಹರಿದು ಬಂದು ವೆಂಕಟಾಪೂರ ರಸ್ತೆ ಕಡಿತವಾಗಿದೆ. ಈ ರಸ್ತೆ ಮಾರ್ಗದಲ್ಲಿ ಕಿರು ಹಳ್ಳ ಹರಿದು ಡಾಂಬರ್ ರಸ್ತೆ ಕಿತ್ತು ಹೋಗಿ ರಸ್ತೆ ಸಂಪೂರ್ಣ ಕಡಿತವಾಗಿದೆ. ಈಚೆಗೆ ಮಸ್ಕಿ ಪಟ್ಟಣದಿಂದ ವೆಂಕಟಾಪೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಡಾಂಬರೀಕರಣ ಮಾಡಲಾಗಿತ್ತು, ಕಾಮಗಾರಿ ಕೈಗೊಳ್ಳುವ ವೇಳೆಯಲ್ಲಿ ಹಳ್ಳ ಬರುವ ಜಾಗದಲ್ಲಿ ಕಿರು ಸೇತುವೆ ನಿರ್ಮಿಸಬೇಕೆಂಬ ಪರಿಜ್ಞಾನ ಗುತ್ತಿಗೆದಾರ ಹಾಗೂ ಅಧಿಕಾರಿಗಳಿಗೆ ಇಲ್ಲವೇ ಎಂದು ಸಾರ್ವಜನಿಕರು ದೂರಿದ್ದಾರೆ.